‘ಕಾಂಗರೂ’ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡ್ತಾರೆ ಕನ್ನಡದ ಸೂಪರ್​ ಸ್ಟಾರ್​

|

Updated on: Jan 14, 2024 | 3:16 PM

‘ಕಾಂಗರೂ’ ಸಿನಿಮಾದಲ್ಲಿ ನಟ ಆದಿತ್ಯ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಅವರಿಗೆ ಜೋಡಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದಾರೆ. ಕಿಶೋರ್ ಮೇಗಳಮನೆ ಅವರು ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ‘ಆರೋಹ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

‘ಕಾಂಗರೂ’ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡ್ತಾರೆ ಕನ್ನಡದ ಸೂಪರ್​ ಸ್ಟಾರ್​
ರಂಜನಿ ರಾಘವನ್​, ಆದಿತ್ಯ
Follow us on

ಸ್ಯಾಂಡಲ್​ವುಡ್​ನ ಖ್ಯಾತ ನಟ ಆದಿತ್ಯ (Aditya) ಅವರು ಅನೇಕ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಒಂದಿಲ್ಲೊಂದು ಕಾರಣಕ್ಕೆ ಈ ಪ್ರಾಜೆಕ್ಟ್​ಗಳು ನಿರೀಕ್ಷೆ ಮೂಡಿಸಿದೆ. ಆದಿತ್ಯ ಮತ್ತು ರಂಜನಿ ರಾಘವನ್ (Ranjani Raghavan)​ ಅವರು ಮುಖ್ಯ ಭೂಮಿಕೆ ನಿಭಾಯಿಸಿರುವ ‘ಕಾಂಗರೂ’ ಸಿನಿಮಾದ ಶೂಟಿಂಗ್ ಕಂಪ್ಲೀಟ್​ ಆಗಿದೆ. ಈ ಸಿನಿಮಾಗೆ ಕಿಶೋರ್ ಮೇಗಳಮನೆ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರತಂಡದಿಂದ ಅಪ್​ಡೇಟ್​ ಸಿಕ್ಕಿದೆ. ‘ಕಾಂಗರೂ’ (Kangaroo) ಸಿನಿಮಾಗೆ ಈಗ ಡಬ್ಬಿಂಗ್ ಕೆಲಸ ಭರದಿಂದ ಸಾಗಿದೆ. ಶೀಘ್ರದಲ್ಲೇ ಈ ಸಿನಿಮಾದ ಮೋಷನ್​ ಪೋಸ್ಟರ್​ ಬಿಡುಗಡೆ ಆಗಲಿದೆ.

‘ಕಾಂಗರೂ’ ಸಿನಿಮಾಗೆ ಬೆಂಗಳೂರು, ಹೊರನಾಡು, ಚಿಕ್ಕಮಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ವಿಶೇಷ ಏನೆಂದರೆ, ಈ ಸಿನಿಮಾ ಕನ್ನಡದ ಜೊತೆಗೆ ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಸಸ್ಪೆನ್ಸ್-ಥ್ರಿಲ್ಲರ್ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ. ಚಂದನವನದ ಸೂಪರ್​ ಸ್ಟಾರ್​ ನಟರೊಬ್ಬರು ಈ ಸಿನಿಮಾದ ಪೋಷನ್​ ಪೋಸ್ಟರ್​ ಅನಾವರಣ ಮಾಡಲಿದ್ದಾರೆ. ಅವರು ಯಾರು ಎಂಬ ಬಗ್ಗೆ ಸದ್ಯದಲ್ಲೇ ಚಿತ್ರತಂಡದ ಕಡೆಯಿಂದ ಮಾಹಿತಿ ಸಿಗಲಿದೆ.

ಇದನ್ನೂ ಓದಿ: ಶಿವಣ್ಣನ ‘45’; ಸಿನಿಮಾದ ಹಾಡಿನ ಚಿತ್ರೀಕರಣ ಹೇಗಿತ್ತು ಗೊತ್ತೆ?

ಈ ಸಿನಿಮಾದಲ್ಲಿ ನಟ ಆದಿತ್ಯ ಅವರು ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಅವರಿಗೆ ಜೋಡಿಯಾಗಿ ರಂಜನಿ ರಾಘವನ್ ಅಭಿನಯಿಸಿದ್ದಾರೆ. ರಂಜನಿ ಅವರು ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಕಾಂಗರೂ’ ಪಾತ್ರವರ್ಗದಲ್ಲಿ ಶಿವಮಣಿ, ನಾಗೇಂದ್ರ ಅರಸ್, ಕರಿಸುಬ್ಬು ಮುಂತಾದ ಕಲಾವಿದರು ಇದ್ದಾರೆ. ಕಿಶೋರ್ ಮೇಗಳಮನೆ ಅವರು ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ.

ಇದನ್ನೂ ಓದಿ: ಆದಿತ್ಯಗೆ 25, ಎಸ್​. ನಾರಾಯಣ್​ಗೆ 50ನೇ ಸಿನಿಮಾ; ‘5 ಡಿ’ ಬಿಡುಗಡೆಗೆ ತಯಾರಿ

‘ಕಾಂಗರೂ’ ಚಿತ್ರಕ್ಕೆ ಸಾಧುಕೋಕಿಲ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯ್ ಲೀಲ ಅವರ ಛಾಯಾಗ್ರಹಣ ಮತ್ತು ಅರ್ಜುನ್ ಕಿಟ್ಟು ಅವರ ಸಂಕಲನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ‘ಆರೋಹ ಪ್ರೊಡಕ್ಷನ್ಸ್’ ಮೂಲಕ ಚನ್ನಕೇಶವ ಬಿ.ಸಿ., ನರಸಿಂಹಮೂರ್ತಿ ಚಕ್ರಭಾವಿ, ಸ್ವಾಮಿ ಚಕ್ರಭಾವಿ, ರಮೇಶ್ ಬಂಡೆ, ರವಿ ಕೀಲರ ಮಂಡ್ಯ ಮತ್ತು ಕೆ.ಜಿ. ರಾಮಚಂದ್ರಯ್ಯ ಅವರು ನಿರ್ಮಾಣ‌ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ