ದೀಪಾವಳಿ ಕೊನೆಯ ದಿನವೂ ‘ಕಾಂತಾರ: ಚಾಪ್ಟರ್ 1’ ಅಬ್ಬರ; ಸಾವಿರದ ಕ್ಲಬ್ ಸೇರಲು ಇನ್ನೆಷ್ಟು ಕೋಟಿ ಬೇಕು?

'ಕಾಂತಾರ: ಚಾಪ್ಟರ್ 1' ಸಿನಿಮಾ ದೀಪಾವಳಿ ಕೊನೆಯ ದಿನದಂದು ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಕಂಡಿದೆ. ಈ ಸಿನಿಮಾ ಸಾವಿರ ಕೋಟಿ ಕ್ಲಬ್ ಸೇರುವತ್ತ ದಾಪುಗಾಲು ಹಾಕಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದ ಅದ್ಭುತ ಯಶಸ್ಸು ಹೊಂಬಾಳೆ ಫಿಲ್ಮ್ಸ್‌ಗೆ ದೊಡ್ಡ ಮೈಲಿಗಲ್ಲು ಸೃಷ್ಟಿಸಿದೆ.

ದೀಪಾವಳಿ ಕೊನೆಯ ದಿನವೂ ‘ಕಾಂತಾರ: ಚಾಪ್ಟರ್ 1’ ಅಬ್ಬರ; ಸಾವಿರದ ಕ್ಲಬ್ ಸೇರಲು ಇನ್ನೆಷ್ಟು ಕೋಟಿ ಬೇಕು?
ಕಾಂತಾರ

Updated on: Oct 23, 2025 | 6:58 AM

‘ಕಾಂತಾರ: ಚಾಪ್ಟರ್ 1’ (Kantara) ಸಿನಿಮಾ ದೀಪಾವಳಿ ಕೊನೆಯ ದಿನವಾದ ಅಕ್ಟೋಬರ್ 22ರಂದು ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡಿದೆ. ಮೂರನೇ ಬುಧವಾರವೂ ಚಿತ್ರ ಡಬಲ್ ಡಿಜಿಟ್ ಕಲೆಕ್ಷನ್ ಮಾಡಿದೆ ಎಂಬುದು ವಿಶೇಷ. ಈ ಸಿನಿಮಾದ ಗಳಿಕೆ ಹಿಗೆಯೇ ಮುಂದುವರಿದರೆ ಶೀಘ್ರವೇ ಚಿತ್ರ ಸಾವಿರ ಕೋಟಿ ರೂಪಾಯಿ ಕ್ಲಬ್ ಸೇರುವ ಎಲ್ಲಾ ಸಾಧ್ಯತೆ ಇದೆ.

‘ಕಾಂತಾರ’ ಸಿನಿಮಾ ಹಿಟ್ ಆದ ಬಳಿಕ ರಿಷಬ್ ಶೆಟ್ಟಿಗೆ ಪ್ರೀಕ್ವೆಲ್ ಮಾಡುವ ಆಲೋಚನೆ ಬಂತು. ‘ಕಾಂತಾರ’ ಕಥೆಗೆ ಲಿಂಕ್ ಕೊಡುವ ರೀತಿಯಲ್ಲಿ ‘ಕಾಂತಾರ: ಚಾಪ್ಟರ್ 1’ ಚಿತ್ರ ಮೂಡಿ ಬಂತು. ಈ ಸಿನಿಮಾ ಹಿಟ್ ಆಗಲಿದೆ ಎಂಬುದು ಎಲ್ಲರಿಗೂ ಮೊದಲೇ ಮನದಟ್ಟಾಗಿತ್ತು. ಅದೇ ರೀತಿಯಲ್ಲಿ ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸಿದೆ. ಸಿನಿಮಾದ ಗಳಿಕೆ ಒಟ್ಟಾರೆ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎಂಬ ಕುತೂಹಲ ಮೂಡಿದೆ.

‘ಕಾಂತಾರ: ಚಾಪ್ಟರ್ 1’ ಸಿನಿಮಾ ಅಕ್ಟೋಬರ್ 22ರಂದು ಬರೋಬ್ಬರಿ 10 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ ಚಿತ್ರದ ಒಟ್ಟಾರೆ ಕಲೆಕ್ಷನ್ 10.25 ಕೋಟಿ ರೂಪಾಯಿ ಆಗಿದೆ. ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ಸರಿ ಸಮಾನವಾಗಿ ಕಲೆಕ್ಷನ್ ಮಾಡುತ್ತಿದೆ. ಅಕ್ಟೋಬರ್ 21ರಂದು ಹಿಂದಿಯಲ್ಲಿ 4 ಕೋಟಿ ಗಳಿಕೆ ಆದರೆ, ಕನ್ನಡದಲ್ಲಿ 4.6 ಕೋಟಿ ರೂಪಾಯಿ ಆಗಿದೆ.

ಇದನ್ನೂ ಓದಿ
ದೀಪಾವಳಿಗೆ ಬಂಪರ್ ಲಾಟರಿ; ಡಬಲ್ ಡಿಜಿಟ್ ಕಲೆಕ್ಷನ್ ಮಾಡಿದ ‘ಕಾಂತಾರ’
ದೀಪಿಕಾ-ರಣವೀರ್ ಪಡುಕೋಣೆ ಮಗಳ ಮುಖ ರಿವೀಲ್; ಯಾರ ಹಾಗೆ ಕಾಣ್ತಾರೆ ದುವಾ?
ರಕ್ಷಿತಾ ಗುಂಡಿಗೆ ಮೆಚ್ಚಲೇಬೇಕು; ಅಶ್ವಿನಿ-ಜಾನ್ವಿ ಕೂಗಾಡಿದರೂ ಜಗಲ್ಲೂ ಇಲ್ಲ
ಆಲಿಯಾ ಹೊಸ ಮನೆಯಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಗಣಪತಿ ಮೂರ್ತಿ

ಇದನ್ನೂ ಓದಿ: ದೀಪಾವಳಿಗೆ ಬಂಪರ್ ಲಾಟರಿ; ಡಬಲ್ ಡಿಜಿಟ್ ಕಲೆಕ್ಷನ್ ಮಾಡಿದ ‘ಕಾಂತಾರ: ಚಾಪ್ಟರ್ 1’

ವಿಶ್ವ ಮಟ್ಟದ ಗಳಿಕೆ

‘ಕಾಂತಾರ: ಚಾಪ್ಟರ್ 1’ ಸಿನಿಮಾ ವಿಶ್ವ ಮಟ್ಟದಲ್ಲಿ ಎಷ್ಟು ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಕೆಲವು ವರದಿಗಳ ಪ್ರಕಾರ ಈ ಸಿನಿಮಾ ವಿಶ್ವ ಮಟ್ಟದಲ್ಲಿ 850 ಕೋಟಿ ರೂಪಾಯಿ ಗಳಿಕೆ ಮಾಡಿದೆಯಂತೆ. ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಲು ಚಿತ್ರಕ್ಕೆ ಬೇಕಿರೋದು ಕೆಲವೇ ಕೋಟಿಗಳು ಮಾತ್ರ. ಈ ಚಿತ್ರದಿಂದ ಹೊಂಬಾಳೆ ಫಿಲ್ಮ್ಸ್​ ದೊಡ್ಡ ಯಶಸ್ಸು ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.