‘ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ರಾಜ್, ರಕ್ಷಿತ್ ಸಹಾಯ ಮಾಡಿಲ್ಲ’; ರಿಷಬ್ ಶೆಟ್ಟಿ

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಬಗ್ಗೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ರಾಜ್ ಬಿ ಶೆಟ್ಟಿ ಅವರು ಬರವಣಿಗೆಗೆ ಸಹಾಯ ಮಾಡಿಲ್ಲ ಎಂದು ರಿಷಬ್ ಸ್ಪಷ್ಟಪಡಿಸಿದ್ದಾರೆ. ‘ಸು ಫ್ರಮ್ ಸೋ’ ಚಿತ್ರದ ಶನೀಲ್ ಅವರು ಚಿತ್ರದ ಬರವಣಿಗೆಯಲ್ಲಿ ಭಾಗವಹಿಸಿದ್ದಾರೆ ಎಂದೂ ತಿಳಿಸಿದ್ದಾರೆ.

‘ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ರಾಜ್, ರಕ್ಷಿತ್ ಸಹಾಯ ಮಾಡಿಲ್ಲ’; ರಿಷಬ್ ಶೆಟ್ಟಿ
Rishab

Updated on: Sep 23, 2025 | 1:10 PM

‘ಕಾಂತಾರ: ಚಾಪ್ಟರ್ 1’ ಸಿನಿಮಾ (Kantara) ಬಗ್ಗೆ ಪ್ರೇಕ್ಷಕರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ರಿಲೀಸ್​ಗೆ ಬಾಕಿ ಇರೋದು ಇನ್ನು ಕೆಲವೇ ದಿನಗಳು ಮಾತ್ರ. ಹೀಗಿರುವಾಗಲೇ ಚಿತ್ರದ ಟ್ರೇಲರ್ ರಿಲೀಸ್ ಆಗಿ ಎಲ್ಲ ಕಡೆಗಳಲ್ಲಿ ಸದ್ದು ಮಾಡಿದೆ. ಈ ಸಿನಿಮಾದ ಟ್ರೇಲರ್ ಸಾಕಷ್ಟು ಜನರಿಗೆ ತಲುಪಿದೆ. ಇದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಕೂಡ ಹೆಚ್ಚಾಗಿದೆ. ಈಗ ರಿಷಬ್ ಅವರು ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ರಿವೀಲ್ ಮಾಡಿದ್ದಾರೆ.

‘ಕಾಂತಾರ’ ಸಿನಿಮಾ ಮಾಡುವಾಗ ರಾಜ್ ಬಿ ಶೆಟ್ಟಿ ಅವರು ಸಿನಿಮಾದ ಕ್ಲೈಮ್ಯಾಕ್ಸ್ ಬರವಣಿಗೆಯಲ್ಲಿ ಸಹಾಯ ಮಾಡಿದ್ದರು ಎನ್ನಲಾಗಿದೆ. ಆದರೆ, ಅವರು ‘ಕಾಂತಾರ: ಚಾಪ್ಟರ್ 1’ ಜೊತೆ ಕೈ ಜೋಡಿಸಿಲ್ಲ. ಈ ಬಗ್ಗೆ ರಿಷಬ್​ಗೆ ಪ್ರಶ್ನೆ ಮಾಡಲಾಯಿತು. ಅವರು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ.

‘ಕಾಂತಾರ ಚಾಪ್ಟರ್ 1 ಚಿತ್ರಕ್ಕೆ ರಕ್ಷಿತ್ ಆಗಲಿ, ರಾಜ್ ಆಗಲಿ ಬರವಣಿಗೆಯಲ್ಲಿ ಪಾಲ್ಗೊಂಡಿಲ್ಲ. ಅವರು ಅವರದ್ದೇ ಆದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದರು’ ಎಂದು ರಿಷಬ್ ಅವರು ಹೇಳಿಕೆ ನೀಡಿದ್ದಾರೆ. ಈ ಚಿತ್ರದಲ್ಲಿ ‘ಸು ಫ್ರಮ್ ಸೋ’ ರವಿಯಣ್ಣ  ಪಾತ್ರ ಮಾಡಿರೋ ಶನೀಲ್ ಅವರು ಬರವಣಿಗೆಯ ಭಾಗವಾಗಿದ್ದಾರೆ.

ಇದನ್ನೂ ಓದಿ
ರಿಯಾಲಿಟಿ ಶೋ ತೊರೆಯುವ ನಿರ್ಧಾರಕ್ಕೆ ಬಂದ ಧನಶ್ರೀ; ಕಾರಣ ಏನು?
‘ಕಾಂತಾರ: ಚಾಪ್ಟರ್ 1’ ಅವಧಿ ಅದೆಷ್ಟು ದೀರ್ಘ; ಇಲ್ಲಿದೆ ಸೆನ್ಸಾರ್ ವಿವರ
ಮಾಡಿದ ಆ ಒಂದು ತಪ್ಪಿಗೆ ವೇದಿಕೆ ಮೇಲೆ ಅನುಶ್ರೀಗೆ ಕ್ಷಮೆ ಕೇಳಿದ ರಿಷಬ್
‘BBK 12’ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ಬಂತು ಸ್ಪರ್ಧಿಗಳ ಹೊಸ ಪಟ್ಟಿ

ಇದನ್ನೂ ಓದಿ:  ‘ಕಾಂತಾರ’ ಬರೋ ಹೊತ್ತಿಗೆ ಪ್ರೇಕ್ಷಕರಿಗೆ ಬಿಗ್ ಶಾಕ್; 200 ರೂ. ಸಿನಿಮಾ ಟಿಕೆಟ್ ದರಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ

‘ಸು ಫ್ರಮ್ ಸೋ’ ಸಿನಿಮಾ ಅಭೂತಪೂರ್ವ ಯಶಸ್ಸು ಕಂಡಾಗ ರಾಜ್ ಹಾಗೂ ತಂಡಕ್ಕೆ ರಿಷಬ್ ಕರೆ ಮಾಡಿ ವಿಶ್ ಮಾಡಿದ್ದರು. ಅಲ್ಲದೆ, ಕಲೆಕ್ಷನ್ ವಿಚಾರದಲ್ಲಿ ರಿಷಬ್ ಅವರು ಹೆಚ್ಚಿನ ಆಸಕ್ತಿ ತೋರಿಸುತ್ತಾ ಎಂದಿದ್ದರು. ಈಗ ‘ಕಾಂತಾರ: ಚಾಪ್ಟರ್ 1’ ಸಿನಿಮಾ ನೋಡಿ ರಾಜ್ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 1:07 pm, Tue, 23 September 25