ಥಿಯೇಟರ್​ನಲ್ಲಿ 50 ದಿನ ಪೂರೈಸಿದ ‘ಕಾಂತಾರ: ಚಾಪ್ಟರ್ 1’; ಸಿಕ್ಕಿರೋ ಶೋಗಳೆಷ್ಟು?

'ಕಾಂತಾರ: ಚಾಪ್ಟರ್ 1' ಸಿನಿಮಾ 50 ದಿನ ಪೂರೈಸಿದ್ದು, ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರ 900 ಕೋಟಿ ರೂ. ಗಳಿಸಿದೆ. ಒಟಿಟಿಗೆ ಬಂದರೂ ಬೆಂಗಳೂರಿನಲ್ಲಿ ಇಂದಿಗೂ 11 ಶೋಗಳೊಂದಿಗೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಈ ಪ್ರೀಕ್ವೆಲ್, ಥಿಯೇಟರ್‌ಗಳಲ್ಲಿ ತನ್ನ ಅಧಿಪತ್ಯವನ್ನು ಮುಂದುವರೆಸಿದೆ.

ಥಿಯೇಟರ್​ನಲ್ಲಿ 50 ದಿನ ಪೂರೈಸಿದ ‘ಕಾಂತಾರ: ಚಾಪ್ಟರ್ 1’; ಸಿಕ್ಕಿರೋ ಶೋಗಳೆಷ್ಟು?
Kantara Chapter 1
Updated By: ರಾಜೇಶ್ ದುಗ್ಗುಮನೆ

Updated on: Nov 21, 2025 | 8:08 AM

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿದ, ಹೊಂಬಾಳೆ ನಿರ್ಮಾಣ ಮಾಡಿದ ‘ಕಾಂತಾರ: ಚಾಪ್ಟರ್ 1’ (Kantara: Chapter 1) ಸಿನಿಮಾ ರಿಲೀಸ್ ಆಗಿ ನವೆಂಬರ್ 20ಕ್ಕೆ 50 ದಿನ ಪೂರೈಸಿದೆ. ಈ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ 30 ದಿನಕ್ಕೆ ಒಟಿಟಿಗೆ ಬಂತು. ಆದರೂ ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಹಾಗಾದರೆ ಬೆಂಗಳೂರಿನಲ್ಲಿ ಸಿನಿಮಾಗೆ ಸಿಕ್ಕ ಶೋಗಳು ಎಷ್ಟು? ಆ ಬಗ್ಗೆ ಇಂದು ತಿಳಿದುಕೊಳ್ಳೋಣ.

‘ಕಾಂತಾರ’ ಸಿನಿಮಾ ಅಕ್ಟೋಬರ್ 2ರಂದು ವಿಶ್ವಾದ್ಯಂತ ತೆರೆಗೆ ಬಂತು. ಇದು ‘ಕಾಂತಾರ’ ಚಿತ್ರದ ಪ್ರೀಕ್ವೆಲ್. ಸಾಮಾನ್ಯವಾಗಿ ಸೀಕ್ವೆಲ್​ಗಳು ಬರುತ್ತವೆ. ಆದರೆ, ಪ್ರೀಕ್ವೆಲ್ ಬರೋದು ಕಡಿಮೆ. ಆದಾಗ್ಯೂ ‘ಕಾಂತಾರ’ ಚಿತ್ರದ ಬಳಿಕ ರಿಷಬ್ ಅವರು ಹಾಗೊಂದು ಪ್ರಯತ್ನ ಮಾಡಿದರು. ಅವರು ಇದರಲ್ಲಿ ಯಶಸ್ಸು ಕಂಡಿದ್ದಾರೆ. ಈ ಚಿತ್ರವು ಬಾಕ್ಸ್ ಆಫೀಸ್​ನಲ್ಲಿ 900 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

‘ಕಾಂತಾರ: ಚಾಪ್ಟರ್ 1’ ಚಿತ್ರವನ್ನು ಹೊಂಬಾಳೆ ಫಿಲ್ಮ್ಸ್ ಅದ್ದೂರಿಯಾಗಿ ನಿರ್ಮಾಣ ಮಾಡಿತು. ಕನ್ನಡದ ಜೊತೆಗೆ ಪರಭಾಷೆಯಲ್ಲೂ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದೆ. ಈ ಚಿತ್ರದ ಕಲೆಕ್ಷನ್ ವಿಶ್ವಾದ್ಯಂತ 900 ಕೋಟಿ ರೂಪಾಯಿ ಆಗಿದೆ. ಈ ಸಿನಿಮಾದಿಂದ ಹೊಂಬಾಳೆ ಸಾಕಷ್ಟು ಲಾಭ ಕಂಡಿದೆ. ಅಂದಹಾಗೆ ಈ ಸಿನಿಮಾನ ಒಂದೇ ತಿಂಗಳಿಗೆ ಒಟಿಟಿಗೆ ತರುವುದಾಗಿ ಹೊಂಬಾಳೆ ಅವರು ಅಮೇಜಾನ್ ಪ್ರೈಮ್ ವಿಡಿಯೋ ಜೊತೆ ಒಪ್ಪಂದ ಮಾಡಿಕೊಂಡಿತ್ತು.

ಈ ಒಪ್ಪಂದದ ಪ್ರಕಾರ ಒಂದು ತಿಂಗಳಿಗೆ ಸಿನಿಮಾ ಒಟಿಟಿಗೆ ಬಂತು. ಆದಾಗ್ಯೂ ಸಿನಿಮಾ ಈಗಲೂ ಥಿಯೇಟರ್​ನಲ್ಲಿ ಪ್ರದರ್ಶನ ಕಾಣುತ್ತಾ ಇದೆ. ಇಂದು ಬೆಂಗಳೂರಿನಲ್ಲಿ 11 ಶೋಗಳನ್ನು ನೀಡಲಾಗಿದೆ. ಈ ಪೈಕಿ ಬಹುತೇಕವು ಮಲ್ಟಿಪ್ಲೆಕ್ಸ್​ಗಳೇ ಆಗಿವೆ. ಮಲ್ಟಿಪ್ಲೆಕ್ಸ್​ಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ದಿನಕ್ಕೆ ಒಂದು ಶೋ ಈ ಚಿತ್ರಕ್ಕೆ ಮೀಸಲಿಡಲಾಗುತ್ತಿದೆ. ಸಿನಿಮಾ 50 ದಿನ ಪೂರೈಸಿದ ಬಗ್ಗೆ ಹೊಂಬಾಳೆ ಪೋಸ್ಟ್ ಹಾಕಿದೆ.

ಇದನ್ನೂ ಓದಿ: ‘ಕಾಂತಾರ’ದಲ್ಲಿ ನಟಿಸಲು ಹಿಂಜರಿದಿದ್ದರು ರುಕ್ಮಿಣಿ ವಸಂತ್, ಒಪ್ಪಿಸಿದ್ದು ಯಾರು?

‘ಕಾಂತಾರ: ಚಾಪ್ಟರ್ 1’ ಸಿನಿಮಾಗೆ ರಿಷಬ್ ಶೆಟ್ಟಿ ಹೀರೋ. ಈ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದಾರೆ. ರುಕ್ಮಿಣಿ ವಸಂತ್ ಈ ಚಿತ್ರಕ್ಕೆ ನಾಯಕಿ. ಅವರದ್ದು ಎರಡು ಶೇಡ್​ನ ಪಾತ್ರ. ಈ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಜಯಂ ರವಿ, ಕನ್ನಡದವರೇ ಆದ ಗುಲ್ಶನ್ ದೇವಯ್ಯ ಮೊದಲಾದವರು ಸಿನಿಮಾದ ಭಾಗ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.