
‘ಕಾಂತಾರ: ಚಾಪ್ಟರ್ 1’ ಸಿನಿಮಾ ಫೀವರ್ ಜೋರಾಗಿದೆ. ಅಕ್ಟೋಬರ್ 2ರಂದು ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಿದೆ. ಎಲ್ಲ ಕಡೆಗಳಿಂದ ಸಿನಿಮಾ ಪಾಸಿಟಿವ್ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಚಿತ್ರ ಮೊದಲ ದಿನ ಎಷ್ಟು ಕೋಟಿ ರೂಪಾಯಿ ಗಳಿಕೆ ಮಾಡಲಿದೆ ಎಂಬ ಕುತೂಹಲ ಮೂಡಿದೆ. ಹೀಗಿರುವಾಗಲೇ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಪ್ರೇಕ್ಷಕ ದೈವ ಬಂದಂತೆ ಆಡಿದ್ದಾನೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ದೈವದ ವಿಚಾರ ಹೇಳಲಾಗಿದೆ. ‘ಕಾಂತಾರ’ದಲ್ಲಿ ಪಂಜುರ್ಲಿ ಬಗ್ಗೆ ಹೇಳಿದರೆ, ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಗುಳಿಗ ದೈವವನ್ನು ಹೈಲೈಟ್ ಮಾಡಲಾಗಿದೆ. ರಿಷಬ್ ಅವರನ್ನು ಎಲ್ಲರೂ ಕೊಂಡಾಡಿದ್ದಾರೆ. ಅವರು ನಿಜವಾಗಿಯೂ ದೈವ ಬಂದಂತೆ ನಟಿಸಿದ್ದಾರೆ ಎಂಬುದು ಅನೇಕರ ಅಭಿಪ್ರಾಯ. ಈಗ ‘ಕಾಂತಾರ: ಚಾಪ್ಟರ್ 1’ ನೋಡಿ ಬಂದ ಅಭಿಮಾನಿಯೋರ್ವ ದೈವ ಬಂದಂತೆ ಆಡಿರುವ ವಿಡಿಯೋ ವೈರಲ್ ಆಗಿದೆ.
ರಿಷಬ್ ಶೆಟ್ಟಿ ಅವರು ‘ಓ..’ ಎಂದು ಸಿನಿಮಾದಲ್ಲಿ ಕೂಗುತ್ತಾರೆ. ಈ ವ್ಯಕ್ತಿ ಕೂಡ ‘ಓ..’ ಎಂದು ಕೂಗಾಡಿದ್ದಾನೆ. ಆ ಬಳಿಕ ‘ದೇವರ ದರ್ಶನ ಆಯ್ತು, ಸಿನಿಮಾ ಚೆನ್ನಾಗಿದೆ’ ಎಂದು ಆ ವ್ಯಕ್ತಿ ಹೇಳಿದ್ದಾನೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ನಾಟಕ ಎಂದು ಕರೆದಿದ್ದಾರೆ.
Divine visuals from Bengaluru 🤯
Post scenes after #KantaraChapter1 pic.twitter.com/G4NFhF6Zue— ಆಪದ್ಬಾಂಧವ (@DbossD56) October 2, 2025
ರಿಷಬ್ ಶೆಟ್ಟಿ ಅವರ ‘ಕಾಂತಾರ’ ಸಿನಿಮಾ ದೈವದ ಬಗ್ಗೆ ಇತ್ತು. ಈಗ ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ಅದೇ ವಿಷಯ ಹೇಳಲಾಗಿದೆ. ರಿಷಬ್ ಪರ್ಫಾರ್ಮೆನ್ಸ್ನ ಎಲ್ಲರೂ ಕೊಂಡಾಡಿದ್ದಾರೆ. ರುಕ್ಮಿಣಿ ವಸಂತ್ ಸ್ಪೆಷಲ್ ಪ್ಯಾಕೇಜ್ ಆಗಿ ಕಾಣಿಸಿಕೊಂಡಿದ್ದಾರೆ. ಅವರನ್ನು ಎಲ್ಲರೂ ಹೊಗಳುತ್ತಿದ್ದಾರೆ. ಉಳಿದ ಅನೇಕ ಪಾತ್ರಗಳು ಮೆಚ್ಚುಗೆ ಪಡೆಯುವ ರೀತಿಯಲ್ಲಿ ಇವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:08 pm, Thu, 2 October 25