ಕನ್ನಡ ಚಿತ್ರರಂಗದ ಪ್ರಮುಖ ಸಂಸ್ಥೆಯಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (karnataka film chamber of commerce) ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಸ್ಥಾನಗಳಿಗೆ ಚುನಾವಣೆ ನಡೆದೆದಿದ್ದು, ನಿರ್ಮಾಪಕ ಎನ್ಎಂ ಸುರೇಶ್ (NM Suresh) ಅವರು ಚುನಾವಣೆಯಲ್ಲಿ ಹೆಚ್ಚು ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ. ಸುರೇಶ್ ಅವರು 337 ಮತಗಳ ಅಂತರದಿಂದ ತಮ್ಮ ಹತ್ತಿರದ ಪ್ರತಿಸ್ಪರ್ಧಿಯನ್ನು ಸೋಲಿಸಿದ್ದಾರೆ. ಆ ಮೂಲಕ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ನಿರ್ಮಾಪಕ ಶಿಲ್ಪ ಶ್ರೀನಿವಾಸ್ 217 ಮತಗಳು ಗಳಿಸಿದರೆ, ವಿತರಕ ಏ ಗಣೇಶ್ 204 ಮತ, ಮಾರ್ಸ್ ಸುರೇಶ್ 181 ಮತಗಳು, ನಿರ್ಮಾಪಕ ಎನ್ಎಂ ಸುರೇಶ್ 337 ಮತಗಳನ್ನು ಗಳಿಸಿದರು. ಒಟ್ಟು ಮತ ಲೆಕ್ಕಾಚಾರದಲ್ಲಿ 120 ಮತಗಳಿಂದ ನಿರ್ಮಾಪಕ ಎನ್.ಎಮ್ ಸುರೇಶ್ ಗೆಲುವು ಸಾಧಿಸಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಅಧ್ಯಕ್ಷರಾಗಿ ಎಮ್ ಎನ್ ಸುರೇಶ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಆಗಿ ಬಾ.ಮಾ ಗಿರೀಶ್ ಆಯ್ಕೆ. ಖಜಾಂಚಿಯಾಗಿ ಜಯಸಿಂಹ ಮಸೂರಿ ಆಯ್ಕೆ ಆಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಪ್ರಮಿಳಾ ಜೋಶಾಯಿ ಆಯ್ಕೆ ಆಗಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಆಯ್ಕೆಗೆ ಇಂದು (ಸೆಪ್ಟೆಂಬರ್ 23) ಚುನಾವಣೆ ನಡೆಯಿತು. ಸಂಜೆಯ ವರೆಗೂ ನಡೆದ ಮತದಾನ ಪ್ರಕ್ರಿಯೆಯಲ್ಲಿ ಸ್ಟಾರ್ ನಟರು, ನಿರ್ಮಾಪಕರು ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿ ಹಕ್ಕು ಚಲಾಯಿಸಿದರು. ವಿವಿಧ ಇಲಾಖೆಗಳ ಪದಾಧಿಕಾರಿಗಳ ಆಯ್ಕೆಗಾಗಿ ಚುನಾವಣೆ ನಡೆದಿದ್ದು, ನಿರ್ಮಾಪಕ, ಹಂಚಿಕೆದಾರ, ಪ್ರದರ್ಶಕ ಇತರೆ ವಲಯಗಳ ಸುಮಾರು 93 ಸ್ಥಾನಗಳಿಗೆ ಮತದಾನ ನಡೆದಿದೆ. ವಿವಿಧ ಸ್ಥಾನಗಳಿಗೆ ಒಟ್ಟು 158 ಅಭ್ಯರ್ಥಿಗಳು ಕಣದಲ್ಲಿದ್ದರು.
ಇದನ್ನೂ ಓದಿ:ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಎನ್ಎಂ ಸುರೇಶ್ ನಾಮಪತ್ರ, ಸಾರಾ ಗೋವಿಂದು ಬೆಂಬಲ
ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ತುರುಸಿನ ಪೈಪೋಟಿ ಏರ್ಪಟ್ಟಿದೆ. ನಿರ್ಮಾಪಕ ಎನ್ಎಂ ಸುರೇಶ್, ವಿತರಕ ಮಾರ್ಸ್ ಸುರೇಶ್, ನಿರ್ಮಾಪಕ ಶಿಲ್ಪ ಶ್ರೀನಿವಾಸ್, ವಿತರಕ ಏ ಗಣೇಶ್ ಅವರುಗಳು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಸುರೇಶ್ಗೆ ಸಾರಾ ಗೋವಿಂದು ಸೇರಿದಂತೆ ಇನ್ನೂ ಕೆಲವು ಪ್ರಮುಖರು ಬೆಂಬಲ ವ್ಯಕ್ತಪಡಿಸಿದ್ದರು. ಸಾರಾ ಗೋವಿಂದು ಬೆಂಬಲಿಸಿದ್ದ ಸುರೇಶ್ ಅವರೇ ಅಧ್ಯಕ್ಷರಾಗಿ ಗೆಲುವು ಸಾಧಿಸಿದ್ದಾರೆ.
ಹಾಲಿ ಅಧ್ಯಕ್ಷರಾಗಿರುವ ಭಾಮಾ ಹರೀಶ್ ಅವರ ಸಹೋದರ ಭಾಮಾ ಗಿರೀಶ್ ಅವರು ನಿರ್ಮಾಪಕರ ಸಂಘದ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧಿಸಿದ್ದಾರೆ. ಪ್ರದರ್ಶಕ, ವಿತರಕ ಇನ್ನಿತರೆ ವಲಯಗಳಲ್ಲಿ ಹಲವಾರು ಮಂದಿ ಚುನಾವಣೆಗೆ ಸ್ಪರ್ಧಿಸಿದ್ದರು. ಕಳೆದ ಬಾರಿಗಿಂತಳು ಸುಮಾರು 55ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ಬಾರಿ ಕಣದಲ್ಲಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:45 pm, Sat, 23 September 23