‘ಅಭಿಮಾನ್ ಸ್ಟುಡಿಯೋದಲ್ಲಿ ಜಾಗ, ವಿಷ್ಣುಗೆ ಕರ್ನಾಟಕ ರತ್ನ ಕೊಡಿ’; ಸಿಎಂಗೆ ಭಾರತಿ ಮನವಿ

ವಿಷ್ಣುವರ್ಧನ್ ಅವರ ಅಭಿನವ್ ಸ್ಟುಡಿಯೋದಲ್ಲಿನ ಸಮಾಧಿ ಕೆಡವಿದ್ದಾರೆ. ಸ್ಮಾರಕ ನಿರ್ಮಾಣಕ್ಕಾಗಿ 10 ಗುಂಟೆ ಜಾಗ ನೀಡುವಂತೆ ಭಾರತಿ ವಿಷ್ಣುವರ್ಧನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಅಲ್ಲದೆ, ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಅಭಿಮಾನಿಗಳ ಮನವಿಯನ್ನೂ ಅವರು ಮುಂದಿಟ್ಟಿದ್ದಾರೆ.

‘ಅಭಿಮಾನ್ ಸ್ಟುಡಿಯೋದಲ್ಲಿ ಜಾಗ, ವಿಷ್ಣುಗೆ ಕರ್ನಾಟಕ ರತ್ನ ಕೊಡಿ’; ಸಿಎಂಗೆ ಭಾರತಿ ಮನವಿ
ಭಾರತಿ

Updated on: Sep 03, 2025 | 12:33 PM

ಬೆಂಗಳೂರಿನ ಅಭಿನವ್ ಸ್ಟುಡಿಯೋದಲ್ಲಿರೋ ವಿಷ್ಣುವರ್ಧನ್ (Vishnuvardhan) ಸಮಾಧಿ ಕೆಡವಿದ ವಿಚಾರ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ಸ್ಟುಡಿಯೋದ 10 ಗುಂಟೆ ಜಾಗವನ್ನು ತಮಗೆ ನೀಡುವಂತೆ ಅಭಿಮಾನಿಗಳು ಒತ್ತಾಯಿಸಿದ್ದರು. ಭಾರತಿ ವಿಷ್ಣುವರ್ಧನ್ ಅವರು ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ. ವಿಷ್ಣು ಅಳಿಯ ಅನಿರುದ್ಧ್ ಜತ್ಕರ್ ಕೂಡ ಈ ಸಂದರ್ಭದಲ್ಲಿ ಇದ್ದರು. ಭಾರತಿ ಅವರು ಸಿಎಂ ಬಳಿ ಮನವಿಯನ್ನು ಇಟ್ಟಿದ್ದಾರೆ.

ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಮಾತನಾಡಿದ ಹಿರಿಯ ನಟಿ ಭಾರತಿ ವಿಷ್ಣುವರ್ಧನ್, ‘ಅಭಿಮಾನಿಗಳಿಗಾಗಿ ಸ್ಟುಡಿಯೋದಲ್ಲಿ ಜಾಗ ಕೊಡಿ ಎಂದು ಸಿಎಂ ಬಳಿ ಕೇಳಿದ್ದೇವೆ. ಅಭಿಮಾನಿಗಳ ಬಂದು ನಮಸ್ಕಾರ ಮಾಡಿ ಹೋಗಲು ಅವಕಾಶ ಮಾಡಿ ಕೊಡಬೇಕು ಎಂಬುದು ನಮ್ಮ ಮನವಿ’ ಎಂದಿದ್ದಾರೆ ಭಾರತಿ.

ವಿಷ್ಣುವರ್ಧನ್​ಗೆ ಕರ್ನಾಟಕ ರತ್ನ ಕೊಡಬೇಕು ಎಂಬುದು ಹಲವು ವರ್ಷಗಳ ಕೋರಿಕೆ. ಅಭಿಮಾನಿಗಳು ಈ ಬೇಡಿಕೆಯನ್ನು ಸರ್ಕಾರದ ಮಂದೆ ಇಡುತ್ತಲೇ ಬರುತ್ತಿದ್ದರು. ಈಗ ಅಭಿಮಾನಿಗಳ ಪರವಾಗಿ ಭಾರತಿ ಕೂಡ ಈ ರೀತಿಯ ಮನವಿ ಮಾಡಿದ್ದಾರೆ. ‘ಕರ್ನಾಟಕ ರತ್ನ ಕೊಡಬೇಕು ಎಂದು ನಾನು ಕೇಳುವುದಿಲ್ಲ. ಅಭಿಮಾನಿಗಳು ಕೇಳುತ್ತಿದ್ದಾರೆ. ಅವರ ಕೋರಿಕೆಯನ್ನು ಈಡೇರಿಸಬೇಕು’ ಎಂದು ಭಾರತಿ ಸಿಎಂ ಬಳಿ ಹೇಳಿದ್ದಾರೆ.

ಇದನ್ನೂ ಓದಿ
ರಾಜ್ ಮುಟ್ಟಿದ್ದೆಲ್ಲ ಚಿನ್ನ; ಹಂಚಿಕೆ ಮಾಡಿದ ‘ಲೋಕಃ’ ಗಳಿಕೆ ಜೋರು
ಸಕ್ಸಸ್ ಅನ್ನೋದು ಇಂದಿಗೂ ನಂಗೆ ದೊಡ್ಡ ಯಕ್ಷ ಪ್ರಶ್ನೆ; ಸೃಜನ್ ಲೋಕೇಶ್
ಸಿಟಿ ಹುಡುಗಿಯರ ಮೇಲೆ ಸಿಟ್ಟು; ಬಕೆಟ್ ಎಸೆದು ಬಾಯಿಗೆ ಬಂದಂತೆ ಬೈದ ಅಕುಲ್
ಹಾಲು ಕರೆಯೋ ಟಾಸ್ಕ್​ನಲ್ಲಿ ಸೋತವರಿಗೆ ಸಗಣಿ ನೀರ ಸ್ನಾನ; ಬಂತು ವಾಕರಿಕೆ

ಇದನ್ನೂ ಓದಿ: ವಿಷ್ಣುವರ್ಧನ್, ಬಿ. ಸರೋಜಾದೇವಿಗೆ ಮರಣೋತ್ತರ ‘ಕರ್ನಾಟಕ ರತ್ನ’ ನೀಡಿ: ಸಿಎಂಗೆ ಮನವಿ

ಅಭಿಮಾನ್ ಸ್ಟುಡಿಯೋದ 10 ಗುಂಟೆ ಜಾಗ ಬೇಕು ಎಂಬ ವಿಚಾರದಲ್ಲಿ ಈಗಾಗಲೇ ಭಾರತಿ ಅವರು ಅರಣ್ಯ ಇಲಾಖೆಯ ಬಳಿಯೂ ಮಾತನಾಡಿದ್ದಾರಂತೆ. ಮಂಟಪವನ್ನು ತಾವೇ ಕಟ್ಟಿಸಿಕೊಳ್ಳೋದಾಗಿ ಹೇಳಿದ್ದಾರೆ. ಸೆಪ್ಟೆಂಬರ್ 18 ವಿಷ್ಣುವರ್ಧನ್ ಜನ್ಮದಿನ. ಹೀಗಾಗಿ 10 ಗುಂಟೆ ಜಾಗ ಸೆಪ್ಟೆಂಬರ್ 17ರ ಒಳಗೆ ಸಿಕ್ಕರೆ ಖುಷಿ ಎಂದು ಅವರು ಹೇಳಿದ್ದಾರೆ.

ಕ್ಯಾಬಿನೆಟ್​​ ಸಭೆಯಲ್ಲಿ ಚರ್ಚೆ..

ಸೆಪ್ಟೆಂಬರ್ 4ರಂದು ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿದೆ.  ಈ ವೇಳೆ ಈ ಬಗ್ಗೆ ಚರ್ಚೆ ಆಗುವ ಸಾಧ್ಯತೆ ಇದೆ. ಅಧಿಕೃತ ಆದರೆ, ನಾಳೆಯೇ ಈ ಬಗ್ಗೆ ಘೋಷಣೆ ಆಗೋ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:32 pm, Wed, 3 September 25