‘ರಾಮರಸ’ ಕುಡಿದ ಕಾರ್ತಿಕ್ ಮಹೇಶ್ ಸ್ಥಿತಿ ನೋಡಿ; ಮತ್ತೆ ಮತ್ತೆ ಅದೇ ಬೇಕು ಅಂತಿದ್ದಾರೆ ಬಿಗ್ ಬಾಸ್ ವಿನ್ನರ್

‘ರಾಮರಸ’ ಚಿತ್ರದ ಹೀರೋ ಇಂಟ್ರೋಡಕ್ಷನ್ ವಿಡಿಯೋನ ಕಿಚ್ಚ ಸುದೀಪ್ ಅವರು ರಿವೀಲ್ ಮಾಡಿದ್ದಾರೆ. ಜಿ ಸಿನಿಮಾಸ್ ಯೂಟ್ಯೂಬ್ ಚಾನೆಲ್ ಮೂಲಕ ಈ ವಿಡಿಯೋ ರಿಲೀಸ್ ಆಗಿದೆ. ಕಾರ್ತಿಕ್ ಮಹೇಶ್ ಮೊದಲ ಚಿತ್ರಕ್ಕೆ ಸುದೀಪ್ ಬೆಂಬಲ ಸಿಕ್ಕಿರುವುದರಿಂದ ಸಹಜವಾಗಿಯೇ ಅವರು ಖುಷಿ ಪಟ್ಟಿದ್ದಾರೆ.

‘ರಾಮರಸ’ ಕುಡಿದ ಕಾರ್ತಿಕ್ ಮಹೇಶ್ ಸ್ಥಿತಿ ನೋಡಿ; ಮತ್ತೆ ಮತ್ತೆ ಅದೇ ಬೇಕು ಅಂತಿದ್ದಾರೆ ಬಿಗ್ ಬಾಸ್ ವಿನ್ನರ್
ಕಾರ್ತಿಕ್ ಮಹೇಶ್

Updated on: Jun 17, 2024 | 9:55 AM

‘ಬಿಗ್ ಬಾಸ್ ಕನ್ನಡ ಸೀಸನ್ 10’ರ (BBK 10) ವಿನ್ನರ್ ಕಾರ್ತಿಕ್ ಮಹೇಶ್ ಅವರು ಯಾವುದೇ ಹೊಸ ಸಿನಿಮಾ ಘೋಷಿಸಿರಲಿಲ್ಲ. ಹೀಗೆಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಇತ್ತು. ಈ ಬಗ್ಗೆ ಟಿವಿ9 ಕನ್ನಡದ ಜೊತೆ ಮಾತನಾಡಿದ್ದ ಅವರು ಒಳ್ಳೆಯ ಕಥೆ ಸಿಗುತ್ತಿಲ್ಲ ಎಂದಿದ್ದರು. ಕೊನೆಗೂ ಅವರ ಸಿನಿಮಾ ಘೋಷಣೆ ಆಗಿದೆ. ಹಿರೋ ಆಗಿ ನಟಿಸುತ್ತಿರುವ ಅವರ ಚಿತ್ರಕ್ಕೆ ‘ರಾಮರಸ’ ಎನ್ನುವ ಟೈಟಲ್ ಇಡಲಾಗಿದೆ. ಗುರುದೇಶಪಾಂಡೆ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದರೆ, ಬಿಎಂ ಗಿರಿರಾಜ್ ಅವರು ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.

‘ರಾಮರಸ’ ಚಿತ್ರದ ಹೀರೋ ಇಂಟ್ರೋಡಕ್ಷನ್ ವಿಡಿಯೋನ ಕಿಚ್ಚ ಸುದೀಪ್ ಅವರು ರಿವೀಲ್ ಮಾಡಿದ್ದಾರೆ. ಜಿ ಸಿನಿಮಾಸ್ ಯೂಟ್ಯೂಬ್ ಚಾನೆಲ್ ಮೂಲಕ ಈ ವಿಡಿಯೋ ರಿಲೀಸ್ ಆಗಿದೆ. ಕಾರ್ತಿಕ್ ಮಹೇಶ್ ಮೊದಲ ಚಿತ್ರಕ್ಕೆ ಸುದೀಪ್ ಬೆಂಬಲ ಸಿಕ್ಕಿರುವುದರಿಂದ ಸಹಜವಾಗಿಯೇ ಅವರು ಖುಷಿ ಪಟ್ಟಿದ್ದಾರೆ. ಚಿತ್ರಕ್ಕೆ ದೊಡ್ಡ ಬೂಸ್ಟ್ ಕೂಡ ಸಿಕ್ಕಿದೆ.

ಹೀರೋ ಇಂಟ್ರೊಡಕ್ಷನ್ ವಿಡಿಯೋ ಎಂದರೆ ಸಾಮಾನ್ಯವಾಗಿ ಒಂದೆರಡು ನಿಮಿಷ ಮಾತ್ರ ಇರುತ್ತದೆ. ಆದರೆ, ಈ ವಿಡಿಯೋ ಬರೋಬ್ಬರಿ 15 ನಿಮಿಷ ಇದೆ. ಇದರಲ್ಲಿ ಕಾರ್ತಿಕ್ ಮಹೇಶ್ ಅವರ ಕಥೆ ಕೇಳೋ ಒದ್ದಾಟ ಇದೆ. ಕಾರ್ತಿಕ್ ಅವರಿಗೆ ಯಾವುದೂ ಹೊಂದಾಣಿಕೆ ಆಗೋ ಕಥೆ ಸಿಗಲ್ಲ. ಆ ಬಳಿಕ ಅವರು ಗುರು ದೇಶಪಾಂಡೆ ಬಳಿ ಬರುತ್ತಾರೆ. ಅವರು ರಾಮರಸ ಕುಡಿಸಿ ಕಥೆ ಹೇಳುತ್ತಾರೆ. ಆಗ ಬೇರೆಯದೇ ಲೋಕ ತೆರೆದುಕೊಳ್ಳುತ್ತದೆ. ಈ ರೀತಿಯಲ್ಲಿ ಹೀರೋ ಪರಿಚಯಿಸುವ ಟೀಸರ್ ಮೂಡಿ ಬಂದಿದೆ. ಕೊನೆಯಲ್ಲಿ ಮತ್ತೆ ಅದೇ ರಾಮರಸ ಬೇಕು ಎನ್ನುವ ಬೇಡಿಕೆ ಇಡುತ್ತಾರೆ.
YouTube video player

ಇದನ್ನೂ ಓದಿ: ‘ಬಿಗ್ ಬಾಸ್’ನಿಂದ ಕಾರ್ತಿಕ್ ಮಹೇಶ್​ಗೆ ನಿಜಕ್ಕೂ ಸಿಕ್ಕ ಹಣ ಎಷ್ಟು?

ಕಾರ್ತಿಕ್ ಅವರು ಹೊಸ ಅವತಾರದಲ್ಲಿ ಪ್ರೇಕ್ಷಕರ ಎದುರು ಬಂದಿದ್ದಾರೆ. ಸದ್ಯ ರಿಲೀಸ್ ಆಗಿರೋ ವಿಡಿಯೋ ಸಾಕಷ್ಟು ಗಮನ ಸೆಳೆದಿದೆ. ಕಾರ್ತಿಕ್ ಅವರು ಈ ಮೊದಲು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದಾರೆ. ಅವರ ನಟನೆಯ ‘ಡೊಳ್ಳು’ ಸಿನಿಮಾ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us