AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಡಿ’ ಟ್ರೇಲರ್​​ನಲ್ಲಿ ಪುನೀತ್ ರಾಜ್​​ಕುಮಾರ್ ಚಿತ್ರದ ಡೈಲಾಗ್; ಅಪ್ಪುಗೆ ಪ್ರೇಮ್ ಗೌರವ

‘ಕೆಡಿ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಧ್ರುವ ಸರ್ಜಾ ಅವರ ರಗಡ್ ಅವತಾರ ಗಮನ ಸೆಳೆದಿದೆ. ಟ್ರೇಲರ್‌ನಲ್ಲಿ ಧ್ರುವ ಹೇಳುವ ಒಂದು ಸಂಭಾಷಣೆ, ಪುನೀತ್ ರಾಜ್‌ಕುಮಾರ್ ಅವರ ‘ರಾಜ್ ದಿ ಶೋ ಮ್ಯಾನ್’ ಚಿತ್ರದ ಡೈಲಾಗ್ ಅನ್ನು ಹೋಲುತ್ತದೆ. ಎರಡೂ ಚಿತ್ರಗಳನ್ನು ನಿರ್ದೇಶಿಸಿರುವ ಪ್ರೇಮ್, ಈ ಮೂಲಕ ಅಪ್ಪುಗೆ ಗೌರವ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ. ಏಪ್ರಿಲ್ 30ರಂದು 'ಕೆಡಿ' ವಿಶ್ವದಾದ್ಯಂತ ತೆರೆಗೆ ಬರಲಿದೆ.

‘ಕೆಡಿ’ ಟ್ರೇಲರ್​​ನಲ್ಲಿ ಪುನೀತ್ ರಾಜ್​​ಕುಮಾರ್ ಚಿತ್ರದ ಡೈಲಾಗ್; ಅಪ್ಪುಗೆ ಪ್ರೇಮ್ ಗೌರವ
ಧ್ರುವ-ಪುನೀತ್
ರಾಜೇಶ್ ದುಗ್ಗುಮನೆ
|

Updated on:Apr 23, 2026 | 11:29 AM

Share

‘ಕೆಡಿ’ಸಿನಿಮಾ ಏಪ್ರಿಲ್ 30ರಂದು ವಿಶ್ವಾದ್ಯಂತ ತೆರೆಗೆ ಬರಲು ರೆಡಿ ಇದೆ. ಹೀಗಿರುವಾಗಲೇ ಚಿತ್ರದ ಟ್ರೇಲರ್ ಏಪ್ರಿಲ್ 22ರಂದು ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಕಾಳಿ ಪಾತ್ರದಲ್ಲಿ ಧ್ರುವ ಸರ್ಜ ಮಿಂಚಿದ್ದಾರೆ. ಮತ್ತೊಮ್ಮೆ ರಗಡ್ ಪಾತ್ರದ ಮೂಲಕ ಅವರು ಬಂದಿದ್ದಾರೆ. ಪ್ರೇಮ್ ಅವರು ರಾ ಆಗಿ ಸಿನಿಮಾ ಮಾಡಿದ್ದಾರೆ. ಈಗ ‘ಕೆಡಿ’ ಸಿನಿಮಾದ ಟ್ರೇಲರ್ ಅಲ್ಲಿ ಬರುವ ಡೈಲಾಗ್ ಗಮನ ಸೆಳೆದಿದೆ. ಪುನೀತ್ ಅವರ ಸಿನಿಮಾ ಒಂದರ ಡೈಲಾಗ್ ಕೂಡ ಸೇಮ್ ಟು ಸೇಮ್ ಇತ್ತು ಎಂಬುದನ್ನು ಫ್ಯಾನ್ಸ್ ನೆನಪಿಸಿಕೊಂಡಿದ್ದಾರೆ.

ಪ್ರೇಮ್ ಸಿನಿಮಾ ಎಂದರೆ ಅಲ್ಲಿ ಒಮ್ಮೆಯಾದರೂ ಮಚ್ಚು ಝಳಪಲೇಬೇಕು. ‘ಜೋಗಿ’ ಸಿನಿಮಾದಲ್ಲಿ ಶಿವರಾಜ್​​ಕುಮಾರ್ ಕೈಗೆ ಮಚ್ಚು ಕೊಟ್ಟು ಚಿತ್ರ ಹಿಟ್ ಆಗುವಂತೆ ಮಾಡಿದರು. ಆ ಬಳಿಕ ಅವರ ಹಲವು ಸಿನಿಮಾಗಳಲ್ಲಿ ಮಚ್ಚಿನ ಬಳಕೆ ಆಗಿದೆ. ಈಗ ‘ಕೆಡಿ’ ಸಿನಿಮಾದಲ್ಲಿ ಮಚ್ಚಿನ ಬಳಕೆ ಸಾಕಷ್ಟಾಗಿದೆ. ಟ್ರೇಲರ್ ನೋಡಿದರೆ ಇದು ಗೊತ್ತಾಗುತ್ತದೆ. ಟ್ರೇಲರ್ ಉದ್ದಕ್ಕೂ ರಕ್ತ ಹರಿಯುತ್ತದೆ.

ಟ್ರೇಲರ್ ಕ್ಲೈಮ್ಯಾಕ್ಸ್​ ಅಲ್ಲಿ ಧ್ರುವ ಸರ್ಜ ಮಚ್ಚನ್ನು ಹಿಡಿದಿರುತ್ತಾರೆ. ಅವರ ಹೆಗಲೇಮೆಲ ಓರ್ವ ವ್ಯಕ್ತಿಯನ್ನು ಮಲಗಿಸಿಕೊಂಡಿರುತ್ತಾರೆ. ಸುತ್ತಲೂ ಇರೋ ವಿಲನ್​​ಗಳಿಗೆ ಧ್ರುವ ಡೈಲಾಗ್ ಒಂದನ್ನು ಹೇಳುತ್ತಾರೆ. ‘ಮೊದಲನೆಬಾರಿ ಮಚ್ಚು ಹಿಡಿದಿದ್ದೇನೆ.ಅಪ್ಪಿತಪ್ಪಿ ಕೈಕಾಲು ಉಳಿದುಕೊಂಡರೆ ನಿಮ್ಮ ಹೆತ್ತ ತಾಯಿಗೆ ತಪ್ಪಾಯ್ತು ಎಂದು ಹೇಳಿಬಿಡಿ ಅಣ್ಣ’ ಎಂದು ಧ್ರುವ ಸರ್ಜಾ ಉತ್ತರ ಕರ್ನಾಟಕ ಸ್ಟೈಲ್​​ನಲ್ಲಿ ಹೇಳುತ್ತಾರೆ. ಈ ಡೈಲಾಗ್ ಪುನೀತ್ ಸಿನಿಮಾದಲ್ಲೂ ಇತ್ತು.

ಇದನ್ನೂ ಓದಿ:  ‘ಕೆಡಿ’ ಸಿನಿಮಾ ಟ್ರೇಲರ್ ಬಿಡುಗಡೆ; ಧ್ರುವ ಸರ್ಜಾ, ಸಂಜಯ್ ದತ್ ಆ್ಯಕ್ಷನ್ ಅಬ್ಬರ ಪುನೀತ್ ರಾಜ್​​ಕುಮಾರ್ ನಟನೆಯ ‘ರಾಜ್ ದಿ ಶೋ ಮ್ಯಾನ್’ ಸಿನಿಮಾದಲ್ಲೂ ಇದೇ ರೀತಿಯ ಸಂಭಾಷಣೆ ಬರುತ್ತದೆ. ‘ಅಣ್ಣ ಲೈಫ್ ಅಲ್ಲಿ ಇದೇ ಮೊದಲ ಬಾರಿ ಮಚ್ಚು ಹಿಡಿದಿದ್ದೇನೆ. ಅಪ್ಪಿ ತಪ್ಪಿ ಉಲ್ಟಾ ಬಿದ್ರೆ ಬೇಜಾರ್ ಮಾಡ್ಕಬೇಡಿ ಅಣ್ಣ’ ಎಂದು ಹೇಳುತ್ತಾರೆ ಪುನೀತ್. ‘ರಾಜ್ ದಿ ಶೋ ಮ್ಯಾನ್’ ಚಿತ್ರವನ್ನು ನಿರ್ದೇಶನ ಮಾಡಿದ್ದು ಜೋಗಿ ಪ್ರೇಮ್. ಈ ಕಾರಣದಿಂದಲೇ ಅವರು ‘ಕೆಡಿ’ ಸಿನಿಮಾದಲ್ಲಿ ಪುನೀತ್ ಅವರನ್ನು ನೆನಪಿಸಿಕೊಳ್ಳಲು ಈ ಡೈಲಾಗ್ ಇಟ್ಟಿರಬಹುದು ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:12 am, Thu, 23 April 26

Follow Us
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಪಾಕ್ ಕ್ರಿಕೆಟಿಗನ ಜೊತೆ ಕಾಣಿಸಿಕೊಂಡ ಆರ್ ಅಶ್ವಿನ್; ವಿಡಿಯೋ ವೈರಲ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಸಿಎಂ ಆದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಷ್ಟು ಪಾಲನೆ ಆಗ್ತಿದೆ ನೋಡಿ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಮುಸ್ಲಿಂ ಧರ್ಮಗುರುಗಳಿಂದ ಸಿಎಂ, ಕೆಪಿಸಿಸಿ ಅಧ್ಯಕ್ಷರ ಭೇಟಿ: ಮಹತ್ವದ ಬೇಡಿಕೆ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಜೆಸ್ಕಾಂ ನಿರ್ಲಕ್ಷ್ಯ: ಬೆಳೆಗೆ ನೀರುಣಿಸಲು ವಿದ್ಯುತ್‌ಗಾಗಿ ರೈತರ ಹರಸಾಹಸ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ
ಧರ್ಮಸ್ಥಳದಲ್ಲಿ BJP ಶಾಸಕರಿಂದ ಆಣೆ ಪ್ರಮಾಣ: ಪ್ರಿಯಾಂಕ್​​ ಖರ್ಗೆ ವ್ಯಂಗ್ಯ