ಹಾಡುಗಳ ಮೂಲಕ ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾ ಗಮನ ಸೆಳೆಯುತ್ತಿದೆ. ಈ ಚಿತ್ರದ ‘ತೂಫಾನ್..’ ಮತ್ತು ‘ಗಗನ ನೀ..’ ಗೀತೆಗಳು ಜನಮನ ಗೆದ್ದಿವೆ. ಈಗ ಈ ಸಿನಿಮಾದ ಮೂರನೇ ಹಾಡು ಬಿಡುಗಡೆ ಆಗಿದೆ. ರವಿ ಬಸ್ರೂರು ಸಂಗೀತ ನೀಡಿರುವ ‘ಸುಲ್ತಾನ..’ ಗೀತೆಯ ಲಿರಿಕಲ್ ವಿಡಿಯೋ (Sulthana lyrical video) ಇಂದು (ಏ.13) ರಿಲೀಸ್ ಆಗಿದ್ದು, ಯಶ್ (Yash) ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಕಥಾನಾಯಕನ ಗುಣಗಾನ ಮಾಡುವ ಈ ಗೀತೆಗೆ ರವಿ ಬಸ್ರೂರು ಸಾಹಿತ್ಯ ಬರೆದಿದ್ದಾರೆ. ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ರವಿ ಬಸ್ರೂರು, ಪುನೀತ್ ರುದ್ರನಾಗ್, ಮನೀಶ್ ದಿನಕರ್, ವರ್ಷಾ ಆಚಾರ್ಯ ಅವರು ಈ ಹಾಡಿಗೆ ಧ್ವನಿ ನೀಡಿದ್ದಾರೆ. ‘ಲಹರಿ ಮ್ಯೂಸಿಕ್’ ಮೂಲಕ ಈ ಹಾಡಿನ ಕನ್ನಡ, ಮಲಯಾಳಂ, ತೆಲುಗು ಹಾಗೂ ತಮಿಳು ವರ್ಷನ್ ಬಿಡುಗಡೆ ಆಗಿದೆ. ‘ಎಮ್ಆರ್ಟಿ’ ಮ್ಯೂಸಿಕ್’ ಮೂಲಕ ಹಿಂದಿ ಅವತರಣಿಕೆ ರಿಲೀಸ್ ಆಗಿದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ‘ಸುಲ್ತಾನ..’ ಲಿರಿಕಲ್ ವಿಡಿಯೋವನ್ನು ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.
‘ಕೆಜಿಎಫ್: ಚಾಪ್ಟರ್ 1’ ಸಿನಿಮಾದಲ್ಲಿ ಎಲ್ಲ ಹಾಡುಗಳು ಹಿಟ್ ಆಗಿದ್ದವು. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಹಾಗಾಗಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾದ ಹಾಡುಗಳ ಮೇಲೆ ನಿರೀಕ್ಷೆ ಜೋರಾಗಿತ್ತು. ಆ ನಿರೀಕ್ಷೆಗೆ ತಕ್ಕಂತೆಯೇ ರವಿ ಬಸ್ರೂರು ಕೆಲಸ ಮಾಡಿದ್ದಾರೆ. ‘ಸುಲ್ತಾನ..’ ಹಾಡು ಕೇಳಿದ ಅಭಿಮಾನಿಗಳು ಕಮೆಂಟ್ಗಳ ಮೂಲಕ ಭೇಷ್ ಎನ್ನುತ್ತಿದ್ದಾರೆ. ‘ಗಗನ ನೀ..’, ‘ತೂಫಾನ್..’ ಹಾಗೂ ‘ಸುಲ್ತಾನ..’ ಹಾಡಿನ ಬಳಿಕ ಇನ್ನುಳಿದ ಗೀತೆಗಳನ್ನು ಕೇಳುವ ಕಾತರ ಹೆಚ್ಚಿದೆ.
???? ???? ???????https://t.co/w3SGPR8wtqhttps://t.co/LenxqYZAhshttps://t.co/6JPH0OeIo7https://t.co/KAHirzNgYV#Sulthana #KGFChapter2 @Thenameisyash @prashanth_neel @VKiragandur @hombalefilms @RaviBasrur @LahariMusic @VaaraahiCC @DreamWarriorpic @PrithvirajProd pic.twitter.com/N0nhXZGP0l
— Hombale Films (@hombalefilms) April 13, 2022
‘ಕೆಜಿಎಫ್: ಚಾಪ್ಟರ್ 2’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಗುರುವಾರ (ಏ.14) ವಿಶ್ವಾದ್ಯಂತ ಈ ಚಿತ್ರ ತೆರೆಕಾಣಲಿದೆ. ಈಗಾಗಲೇ ಎಲ್ಲ ಚಿತ್ರಮಂದಿರಗಳ ಎದುರಿನಲ್ಲಿ ಯಶ್ ಕಟೌಟ್ಗಳು ರಾರಾಜಿಸುತ್ತಿವೆ. ಮೊದಲ ದಿನ ಟಿಕೆಟ್ಗಳು ಸೋಲ್ಡ್ ಔಟ್ ಆಗಿವೆ. ಮಧ್ಯರಾತ್ರಿಯೇ ಫ್ಯಾನ್ಸ್ ಶೋ ಆಯೋಜನೆಗೊಂಡಿದೆ. ಒಟ್ಟಾರೆಯಾಗಿ ಭರ್ಜರಿ ಓಪನಿಂಗ್ ಸಿಗುತ್ತಿದೆ. ಈ ಪರಿ ಕ್ರೇಜ್ ನೋಡಿದರೆ ಫಸ್ಟ್ ಡೇ ಕಲೆಕ್ಷನ್ ಮೂಲಕ ‘ಕೆಜಿಎಫ್ 2’ ಚಿತ್ರ ಹೊಸ ದಾಖಲೆ ಬರೆಯುವುದು ಗ್ಯಾರಂಟಿ. ಪರಭಾಷೆಯ ಅನೇಕ ಚಿತ್ರಗಳ ರೆಕಾರ್ಡ್ ಅನ್ನು ಈ ಸಿನಿಮಾ ಬ್ರೇಕ್ ಮಾಡುವ ನಿರೀಕ್ಷೆ ಇದೆ.
ಉತ್ತರ ಭಾರತದಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ ಮೇಲೆ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕನ್ನಡದ ಟ್ರೇಲರ್ಗಿಂತಲೂ ಹಿಂದಿ ಅವತರಣಿಕೆಯ ಟ್ರೇಲರ್ ಹೆಚ್ಚು ವೀಕ್ಷಣೆ ಕಂಡಿರುವುದೇ ಇದಕ್ಕೆ ಸಾಕ್ಷಿ. ಬಾಲಿವುಡ್ ಸ್ಟಾರ್ ಕಲಾವಿದರಾದ ಸಂಜಯ್ ದತ್, ರವೀನಾ ಟಂಡನ್ ಅವರು ಪವರ್ಫುಲ್ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೂಡ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ. ಹಿಂದಿ ಮಾರುಕಟ್ಟೆಯಲ್ಲಿ ಈ ಸಿನಿಮಾ ಅಬ್ಬರಿಸಲಿದೆ.
ಇದನ್ನೂ ಓದಿ:
ಸುನಾಮಿ ಸೃಷ್ಟಿ ಮಾಡಲಿದೆ ‘ಕೆಜಿಎಫ್: ಚಾಪ್ಟರ್ 2’ ಚಿತ್ರ: ಮೊದಲ ದಿನ ಆಗುವ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು?
ಮಕ್ಕಳ ಲೋಕದಲ್ಲಿ ಹೇಗಿದೆ ‘ಕೆಜಿಎಫ್ 2’ ಕ್ರೇಜ್? ಯಶ್ ರೀತಿಯೇ ‘ಐ ಕಾಂಟ್ ಅವಾಯ್ಡ್..’ ಎಂದ ಪುಟಾಣಿ ಪ್ರತಿಭೆ
Published On - 11:19 am, Wed, 13 April 22