Harish Roy: ಕ್ಯಾನ್ಸರ್​ನಿಂದ ಕಣ್ಣೀರು ಹಾಕಿದ ‘ಕೆಜಿಎಫ್​ 2’ ನಟ ಹರೀಶ್​ ರಾಯ್; ಬೇಕಿದೆ ಎಲ್ಲರ ಸಹಾಯ

| Updated By: ರಾಜೇಶ್ ದುಗ್ಗುಮನೆ

Updated on: Aug 26, 2022 | 7:45 PM

KGF 2 actor Harish Rai | Cancer: ‘ಕೆಜಿಎಫ್​ 2 ಸಿನಿಮಾ ಶೂಟಿಂಗ್​ ಸಂದರ್ಭದಲ್ಲೂ ನನ್ನ ಗಂಟಲಲ್ಲಿ ಗಡ್ಡೆ ಇತ್ತು. ಆದರೂ ನಾನು ಶೂಟಿಂಗ್​ ಮಾಡಿದೆ.’ ಎಂದು ಹರೀಶ್​ ರಾಯ್ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ.

Harish Roy: ಕ್ಯಾನ್ಸರ್​ನಿಂದ ಕಣ್ಣೀರು ಹಾಕಿದ ‘ಕೆಜಿಎಫ್​ 2’ ನಟ ಹರೀಶ್​ ರಾಯ್; ಬೇಕಿದೆ ಎಲ್ಲರ ಸಹಾಯ
ಹರೀಶ್ ರೈ
Follow us on

ಕನ್ನಡ ಚಿತ್ರರಂಗದ ಖ್ಯಾತ ನಟ ಹರೀಶ್​ ರಾಯ್ (Harish Roy) ಅವರು ಕಷ್ಟದಲ್ಲಿದ್ದಾರೆ. ಮೂರು ವರ್ಷದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಆದರೆ ಮಕ್ಕಳು ಚಿಕ್ಕವರು ಎಂಬ ಕಾರಣಕ್ಕೆ ಹಾಗೂ ‘ಕೆಜಿಎಫ್​ 2’ (KGF Chapter 2) ಚಿತ್ರದ ಶೂಟಿಂಗ್​ ಇದೆ ​ಎಂಬ ಕಾರಣದಿಂದ ಅವರು ಚಿಕಿತ್ಸೆ ಪಡೆಯಲು ತಡ ಮಾಡಿದರು. ಹಣದ ಕೊರತೆ ಕೂಡ ಇದ್ದಿದ್ದರಿಂದ ಅವರು ಕಷ್ಟ ಅನುಭವಿಸಿದರು. ನಂತರ ವೈದ್ಯರನ್ನು ಭೇಟಿ ಮಾಡಿದಾಗ ಆತಂಕ ಕಾದಿತ್ತು. ಹರೀಶ್​ ರಾಯ್ ಅವರಿಗೆ ಕ್ಯಾನ್ಸರ್(Harish Rai Cancer) ಇರುವುದು ತಿಳಿದುಬಂತು. ಕೂಡಲೇ ಆಪರೇಷನ್​ ಮಾಡಿಸಲಾಯಿತು. ಆಪರೇಷನ್​ ನಂತರ ಕೂಡ ಕೆಲವು ಸಮಸ್ಯೆಗಳು ಎದುರಾದವು. ಆ ಎಲ್ಲ ಘಟನೆಗಳ ಬಗ್ಗೆ ಹರೀಶ್​ ರಾಯ್ ಈಗ ಮಾತನಾಡಿದ್ದಾರೆ. ‘ಗೋಪಿ ಗೌಡ್ರು’ ಯೂ​ಟ್ಯೂಬ್​ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಕಷ್ಟವನ್ನು ಅವರು ಮೊದಲ ಬಾರಿ ತೋಡಿಕೊಂಡಿದ್ದಾರೆ.

‘ವೈದ್ಯರು ನಾಲ್ಕನೇ ಸ್ಟೇಜ್​ ಎಂದರು. ಇನ್ನು ನನಗೆ ಎಷ್ಟು ಟೈಮ್​ ಉಳಿದಿದೆ ಅಂತ ಕೇಳಿದೆ. ಮೂರು ವರ್ಷ ಹೆದರಬೇಡಿ ಅಂತ ಡಾಕ್ಟರ್​ ಹೇಳಿದ್ರು. ರೇಡಿಯೋ ಥೆರಪಿ ವರ್ಕ್​ ಆಗದ ಕಾರಣ ಬೇರೆ ಮಾತ್ರೆ ನೀಡುತ್ತಿದ್ದಾರೆ. ಆ ಮಾತ್ರೆಗಳಿಗೆ ಖರ್ಚು ಜಾಸ್ತಿ. ತಿಂಗಳಿಗೆ 3.5 ಲಕ್ಷ ಖರ್ಚಾಗಬಹುದು. 8-10 ತಿಂಗಳು ಮಾತ್ರೆ ತೆಗೆದುಕೊಳ್ಳಬೇಕು ಅಂತ ವೈದ್ಯರು ಹೇಳಿದ್ದಾರೆ’ ಎಂದು ಹರೀಶ್​ ರಾಯ್ ಮಾತನಾಡಿದ್ದಾರೆ.

ಹರೀಶ್​ ರಾಯ್ ಅವರ ಚಿಕಿತ್ಸೆಗೆ ಹಣದ ಅನಿವಾರ್ಯತೆ ಇದೆ. ‘ಫ್ಯಾಮಿಲಿ ಅನ್ನೋರು ಯಾರೂ ಬರಲ್ಲ. ಕಷ್ಟದಲ್ಲಿ ಅವರು ಸಹಾಯ ಮಾಡಲ್ಲ. ಜನರು ಬರುತ್ತಾರೆ’ ಎಂದು ಅವರು ನಂಬಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ‘ಕೆಜಿಎಫ್​ 2 ಸಿನಿಮಾ ಶೂಟಿಂಗ್​ ಸಂದರ್ಭದಲ್ಲೂ ನನಗೆ ಗಂಟಲಲ್ಲಿ ಗಡ್ಡೆ ಇತ್ತು. ಆದರೂ ಕೂಡ ನಾನು ಶೂಟಿಂಗ್​ ಮಾಡಿದೆ. ಫೈಟಿಂಗ್​ ಸೀನ್​ ಸಹ ಮಾಡಿದೆ. ಗಡ್ಡೆ ಯಾರಿಗೂ ಕಾಣಿಸುತ್ತಿರಲಿಲ್ಲ. ನಾನು ಯಾರಿಗೂ ಹೇಳಲಿಲ್ಲ. ನಾನೇ ಮುಚ್ಚುಮರೆ ಮಾಡಿದೆ’ ಎಂದು ಹರೀಶ್​ ರಾಯ್ ಹೇಳಿದ್ದಾರೆ.

ಇದನ್ನೂ ಓದಿ
Breast Cancer: ನಟಿ ಮಹಿಮಾ ಚೌಧರಿಗೆ ಸ್ತನ ಕ್ಯಾನ್ಸರ್;​ ಎಮೋಷನಲ್​ ವಿಡಿಯೋ ಹಂಚಿಕೊಂಡ ಅನುಪಮ್​ ಖೇರ್​
33ನೇ ವಯಸ್ಸಿಗೆ ಕ್ಯಾನ್ಸರ್​ನಿಂದ ಖ್ಯಾತ ಸಿಂಗರ್​ ನಿಧನ; ಸಂತಾಪ ಸೂಚಿಸಿದ ಯುವರಾಜ್​ ಸಿಂಗ್
‘ಈಗ’ ನಟಿಗೆ ಸ್ತನ ಕ್ಯಾನ್ಸರ್​; ಹೊಸ ಫೋಟೋ ನೋಡಿ ಶಾಕ್​ ಆದ ಅಭಿಮಾನಿಗಳು
ಹೆಂಡತಿಗೆ ಬ್ರೈನ್ ಟ್ಯೂಮರ್​, ತಂದೆಗೆ ಕ್ಯಾನ್ಸರ್​, ಖರ್ಚಿಗಿರಲಿಲ್ಲ ಹಣ; ಇದು ಸೂಪರ್​ಸ್ಟಾರ್​ ಆದ ನಟನ ಹಿಂದಿನ ಕಥೆ

‘ಎಲ್ಲರಿಗೂ ಈ ಸಮಸ್ಯೆ ಬಗ್ಗೆ ಗೊತ್ತಾದರೆ ಆಫರ್​ ಬರುವುದಿಲ್ಲ ಅಂತ ಭಯ ಆಯ್ತು. ಹಾಗಾಗಿ ಕೆಜಿಎಫ್​ 2 ಚಿತ್ರ ರಿಲೀಸ್​ ಆದ ಬಳಿಕ ಕೆಲವರಿಗೆ ನಾನು ಸಂದರ್ಶನ ಕೊಟ್ಟಿಲ್ಲ. ಅವರೆಲ್ಲ ತಪ್ಪು ತಿಳಿದುಕೊಂಡಿದ್ದಾರೇನೋ ಗೊತ್ತಿಲ್ಲ’ ಎಂದು ಹರೀಶ್​ ರಾಯ್ ಹೇಳಿದ್ದಾರೆ.

ಈಗ ಕನ್ನಡ ಚಿತ್ರರಂಗದ ಕೆಲವು ಸ್ಟಾರ್​ ಕಲಾವಿದರು ಅವರ ಸಹಾಯಕ್ಕೆ ಧಾವಿಸಿದ್ದಾರೆ. ಹೆಸರು ಹೇಳಲು ಇಚ್ಛಿಸಿದೇ, ಚಿಕಿತ್ಸೆಗೆ ಬೇಕಾಗುವ ಹಣವನ್ನು ನೀಡಲು ಕನ್ನಡದ ಹೀರೋ ಒಬ್ಬರು ಮುಂದೆ ಬಂದಿದ್ದಾರೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹರೀಶ್​ ರಾಯ್ ಅವರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:41 am, Fri, 26 August 22