ನಟ ಯಶ್ ಅವರು ಭಾರತೀಯ ಚಿತ್ರರಂಗದಲ್ಲಿ ಭದ್ರವಾಗಿ ನೆಲೆ ಕಂಡುಕೊಂಡಿದ್ದಾರೆ. ‘ಕೆಜಿಎಫ್: ಚಾಪ್ಟರ್ 1’ ಮತ್ತು ‘ಕೆಜಿಎಫ್: ಚಾಪ್ಟರ್ 2’ (KGF Chapter 2) ಸಿನಿಮಾಗಳು ಬಿಡುಗಡೆ ಆದ ಬಳಿಕ ಅವರ ಹವಾ ವಿಶ್ವಮಟ್ಟದಲ್ಲಿ ಹೆಚ್ಚಿತು. ಹಾಲಿವುಡ್ ಮಂದಿಗೆ ಅವರು ಪೈಪೋಟಿ ನೀಡುತ್ತಿದ್ದಾರೆ. ಇದು ಬರೀ ಬಾಯಿ ಮಾತಿನ ವಿಚಾರ ಅಲ್ಲ. ಗೂಗಲ್ (Google) ನೀಡುತ್ತಿರುವ ಅಂಕಿ ಅಂಶಗಳ ಸಾಕ್ಷಿ ಕೂಡ ಹೌದು. 2022ರಲ್ಲಿ ವಿಶ್ವಾದ್ಯಂತ ಜನರು ಅತಿ ಹೆಚ್ಚು ಸರ್ಚ್ ಮಾಡಿದ ಸಿನಿಮಾಗಳ ಪಟ್ಟಿಯನ್ನು ಗೂಗಲ್ ಪ್ರಕಟ ಮಾಡಿದೆ. ಇದರಲ್ಲಿ ‘ಕೆಜಿಎಫ್ 2’ ಸಿನಿಮಾ 8ನೇ ಸ್ಥಾನ ಪಡೆದುಕೊಂಡಿದೆ. ಇದು ಯಶ್ (Yash) ಅಭಿಮಾನಿಗಳಿಗೆ ಹೆಮ್ಮೆ ತಂದಿದೆ. ಇಡೀ ಕನ್ನಡ ಚಿತ್ರರಂಗವೇ ಖುಷಿ ಪಡುವಂತಾಗಿದೆ.
ಒಂದು ಕಾಲದಲ್ಲಿ ಕನ್ನಡ ಚಿತ್ರರಂಗದ ಮಾರುಕಟ್ಟೆ ಸಣ್ಣದು ಎಂದು ಹೇಳಲಾಗುತ್ತಿತ್ತು. ಆದರೆ ಆ ಮಾತನ್ನು ಸುಳ್ಳು ಎಂದು ಸಾಬೀತು ಮಾಡಿದ ಸಿನಿಮಾ ‘ಕೆಜಿಎಫ್: ಚಾಪ್ಟರ್ 2’. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾಗೆ ‘ಹೊಂಬಾಳೆ ಫಿಲ್ಮ್ಸ್’ ಬಂಡವಾಳ ಹೂಡಿತ್ತು. ವಿಶ್ವಾದ್ಯಂತ 1200 ಕೋಟಿ ರೂಪಾಯಿಗಿಂತಲೂ ಅಧಿಕ ಕಲೆಕ್ಷನ್ ಮಾಡಿದ್ದು ಈ ಚಿತ್ರದ ಹೆಚ್ಚುಗಾರಿಕೆ. ಗಲ್ಲಾಪೆಟ್ಟಿಗೆ ಕಲೆಕ್ಷನ್ ಮಾತ್ರವಲ್ಲದೇ ಜನಪ್ರಿಯತೆಯ ವಿಷಯದಲ್ಲೂ ಈ ಸಿನಿಮಾ ಸದ್ದು ಮಾಡಿದೆ.
ಇದನ್ನೂ ಓದಿ: Yatharv Yash: ಯಶ್-ರಾಧಿಕಾ ಪಂಡಿತ್ ಪುತ್ರ ಯಥರ್ವ್ ಜನ್ಮದಿನ; ವಿಶೇಷ ಫೋಟೋ ಹಂಚಿಕೊಂಡ ರಾಕಿ ಭಾಯ್
ಪ್ರಪಂಚದಾದ್ಯಂತ ಜನರು ಗೂಗಲ್ನಲ್ಲಿ ಅತಿ ಹೆಚ್ಚು ಸರ್ಚ್ ಮಾಡಿದ ಟಾಪ್ 10 ಸಿನಿಮಾಗಳ ಪಟ್ಟಿ ಪ್ರಕಟ ಆಗಿದೆ. ಅದರಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾಗೆ 8ನೇ ಸ್ಥಾನ ಸಿಕ್ಕಿದೆ. ಘಟಾನುಘಟಿ ಹಾಲಿವುಡ್ ಚಿತ್ರಗಳಿಗೆ ಕನ್ನಡದ ಈ ಸಿನಿಮಾ ಪೈಪೋಟಿ ನೀಡಿದೆ. ಈ ಪಟ್ಟಿಯಲ್ಲಿ ಇರುವ ಭಾರತದ ಇನ್ನೊಂದು ಸಿನಿಮಾ ಎಂದರೆ ‘ಬ್ರಹ್ಮಾಸ್ತ್ರ’ ಮಾತ್ರ. ಈ ಚಿತ್ರ 6ನೇ ಸ್ಥಾನದಲ್ಲಿದೆ.
ಟಾಪ್ 10 ಸಿನಿಮಾಗಳ ಪಟ್ಟಿ ಹೀಗಿದೆ:
ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಟಾಪ್ 5 ಸಿನಿಮಾಗಳ ಪಟ್ಟಿಯನ್ನು ಕೂಡ ಗೂಗಲ್ ಪ್ರಕಟ ಮಾಡಿದೆ. ಅದರಲ್ಲಿ ‘ಕೆಜಿಎಫ್: ಚಾಪ್ಟರ್ 2’ ಸಿನಿಮಾ 2ನೇ ಸ್ಥಾನ ಪಡೆದುಕೊಂಡಿದ್ದು, ‘ಕಾಂತಾರ’ ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. ಇದು ಕೂಡ ಕನ್ನಡ ಚಿತ್ರರಂಗದ ಪಾಲಿಗೆ ಹೆಮ್ಮೆ ತಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.