
ಕೆಜಿಎಫ್ ಸಿನಿಮಾ ಭಾರತೀಯ ಚಿತ್ರರಂಗದಲ್ಲೇ ಹೊಸ ಇತಿಹಾಸ ಸೃಷ್ಟಿ ಮಾಡಿದೆ. ಕೆಜಿಎಫ್-2 ಚಿತ್ರ ಜುಲೈನಲ್ಲಿ ತೆರೆಗೆ ಬರಲಿದ್ದು ಮತ್ತೊಂದು ಹೊಸ ದಾಖಲೆ ಸೃಷ್ಟಿ ಮಾಡುವ ಲಕ್ಷಣ ಎದ್ದು ಕಾಣುತ್ತಿದೆ. ಸ್ಯಾಂಡಲ್ವುಡ್ ಮಾತ್ರವಲ್ಲದೆ ಬಾಲಿವುಡ್, ಟಾಲಿವುಡ್ನಲ್ಲೂ ಕೆಜಿಎಫ್-2 ಸಿನಿಮಾ ಬಗ್ಗೆ ಚರ್ಚೆ ಆಗುತ್ತಿದೆ. ಈಗ ಹಾಲಿವುಡ್ ಅಂಗಳದಲ್ಲೂ ಕೆಜಿಎಫ್-2 ಸದ್ದು ಮಾಡುತ್ತಿದೆ.
ಯಶ್ ಜನ್ಮದಿನದ ಅಂಗವಾಗಿ ಕೆಜಿಎಫ್-2 ಸಿನಿಮಾದ ಟೀಸರ್ ರಿಲೀಸ್ ಆಗಿತ್ತು. ಈ ಟೀಸರ್ ಸಾಕಷ್ಟು ದಾಖಲೆಗಳನ್ನು ಕೂಡ ಮಾಡಿತ್ತು. ಈ ಟೀಸರ್ ಸೃಷ್ಟಿಸಿದ ಹವಾ ನೋಡಿಯೇ ಸಿನಿಮಾ ಮೇಲೆ ಎಷ್ಟು ನಿರೀಕ್ಷೆ ಇದೆ ಎನ್ನುವ ವಿಚಾರ ಸ್ಪಷ್ಟವಾಗಿತ್ತು. ಈ ಟೀಸರ್ನಲ್ಲಿ A promise was made, and That Promise will be kept.. ಎನ್ನುವ ಡೈಲಾಗ್ ಬಂದಿತ್ತು. ಈ ಡೈಲಾಗ್ ಸಾಕಷ್ಟು ವೈರಲ್ ಆಗಿತ್ತು. ಇದನ್ನು ಹಾಲಿವುಡ್ ಮಂದಿ ಕೂಡ ಬಳಕೆ ಮಾಡಿಕೊಂಡಂತಿದೆ.
ಗಾಡ್ಜಿಲಾ vs ಕಾಂಗ್ ಸಿನಿಮಾ ಎಚ್ಬಿಒ ಮ್ಯಾಕ್ಸ್ನಲ್ಲಿ ಮಾರ್ಚ್ 31ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನ ಚಿತ್ರತಂಡ ಟ್ವೀಟ್ ಒಂದನ್ನು ಮಾಡಿದೆ. ಅದರಲ್ಲಿ A promise was made, and it will be kept.. ಎಂದು ಹೇಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಅಂದಹಾಗೆ, ಇದು ಕೆಜಿಎಫ್ ಡೈಲಾಗ್ ಅಲ್ಲ. ಕೆಜಿಎಫ್ ಸಿನಿಮಾದಲ್ಲೇ ಇದು ಮೊದಲು ಬಳಕೆ ಆಗಿಯೂ ಇಲ್ಲ. ಇಂಗ್ಲಿಷ್ನಲ್ಲಿ ಇದು ಹೆಚ್ಚು ಬಳಕೆಯಲ್ಲಿರುವ ವಾಕ್ಯ (Saying). ಇದನ್ನು ಕೆಜಿಎಫ್-2ನಲ್ಲಿ ಬಳಕೆ ಮಾಡಲಾಗಿತ್ತು. ಅದನ್ನೇ, ಗಾಡ್ಜಿಲಾ vs ಕಾಂಗ್ ಸಿನಿಮಾ ತಂಡ ಕೂಡ ಬಳಕೆ ಮಾಡಿಕೊಂಡಿದೆ ಅಷ್ಟೇ.
ಇದನ್ನೂ ಓದಿ: Yash: ಸ್ಯಾಂಡಲ್ವುಡ್ ಸ್ಟಾರ್ ಆಗಿದ್ದ ರಾಕಿ ಭಾಯ್ ಇದೀಗ ಯೂನಿವರ್ಸಲ್ ಸ್ಟಾರ್! ರೋಬೋ 2.O ಮೀರಿಸಿದ ‘ಕೆಜಿಎಫ್ ಚಾಪ್ಟರ್ 2’