ಅಮೆರಿಕದಲ್ಲಿ ಶೂಟ್ ಆಗಲಿದೆ ‘ಕೆಜಿಎಫ್ ಚಾಪ್ಟರ್ 3’?; ಇಲ್ಲಿದೆ ಹಲವು ಅಚ್ಚರಿಯ ವಿಚಾರಗಳು

ಏಪ್ರಿಲ್ 14ರಂದು ಅಭಿಮಾನಿಗಳಿಗೆ ಸರ್​ಪ್ರೈಸ್ ಸಿಕ್ಕಿತ್ತು. ಈ ಸಿನಿಮಾದ ಮೂರನೇ ಪಾರ್ಟ್​ ಸಿದ್ಧಗೊಳ್ಳಲಿದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ.

ಅಮೆರಿಕದಲ್ಲಿ ಶೂಟ್ ಆಗಲಿದೆ ‘ಕೆಜಿಎಫ್ ಚಾಪ್ಟರ್ 3’?; ಇಲ್ಲಿದೆ ಹಲವು ಅಚ್ಚರಿಯ ವಿಚಾರಗಳು
‘ಕೆಜಿಎಫ್ 3’
Edited By:

Updated on: Apr 15, 2022 | 4:41 PM

‘ಕೆಜಿಎಫ್: ಚಾಪ್ಟರ್​ 2’ ಸಿನಿಮಾದ (KGF Chapter 2) ಎಂಡ್ ಕ್ರೆಡಿಟ್ಸ್ ತೋರಿಸಿದ ಬಳಿಕ ಹಲವರು ಚಿತ್ರಮಂದಿರದಿಂದ ಹೊರ ನಡೆದಿದ್ದರು. ಆದರೆ, ಎಂಡ್​ ಕ್ರೆಡಿಟ್ಸ್ ಬಳಿಕ ‘ಕೆಜಿಎಫ್ 3’ (KGF Chapter 3)ಚಿತ್ರ ಬರುವ ಬಗ್ಗೆ ಸೂಚನೆ ಕೊಡಲಾಗಿತ್ತು. ರಾಕಿ (ಯಶ್) ವಿದೇಶದಲ್ಲಿ ಸಾಕಷ್ಟು ಕ್ರೈಮ್ ಮಾಡಿರುತ್ತಾನೆ. ಆ ದಾಖಲೆಗಳನ್ನು ಅಲ್ಲಿನ ಅಧಿಕಾರಿಗಳು ಪ್ರಧಾನಿ ರಮಿಕಾ ಸೇನ್ (ರವೀನಾ ಟಂಡನ್) ಮುಂದೆ ಇಡುತ್ತಾರೆ. ಆಗ ಮೂರನೇ ಚಾಪ್ಟರ್​ ತೆರೆದುಕೊಳ್ಳುತ್ತದೆ. ಮೂಲಗಳ ಪ್ರಕಾರ ಟ್ರಯಾಲಜಿ ರೀತಿಯಲ್ಲಿ ‘ಕೆಜಿಎಫ್​’ ಮೂಡಿ ಬರುತ್ತಿದ್ದು, ‘ಕೆಜಿಎಫ್ 3’ ಈ ಸರಣಿಯ ಕೊನೆಯ ಸಿನಿಮಾ ಆಗಿರಲಿದೆ.

‘ಕೆಜಿಎಫ್’ ಎರಡು ಪಾರ್ಟ್​ಗಳಲ್ಲಿ ಬರಲಿದೆ ಎನ್ನುವ ಮಾಹಿತಿಯನ್ನು ಚಿತ್ರತಂಡದವರು ಆರಂಭದಲ್ಲೇ ಹಂಚಿಕೊಂಡಿದ್ದರು. ಆದರೆ,

ಏಪ್ರಿಲ್ 14ರಂದು ಅಭಿಮಾನಿಗಳಿಗೆ ಸರ್​ಪ್ರೈಸ್ ಸಿಕ್ಕಿತ್ತು. ಈ ಸಿನಿಮಾದ ಮೂರನೇ ಪಾರ್ಟ್​ ಸಿದ್ಧಗೊಳ್ಳಲಿದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ. ಈ ಬಗ್ಗೆ ದೊಡ್ಡ ಮಟ್ಟದ ಚರ್ಚೆ ಕೂಡ ಆಗುತ್ತಿದೆ. ಯಶ್ ಮತ್ತೊಂದು ಪ್ರಾಜೆಕ್ಟ್​ ಕೆಲಸದಲ್ಲಿ ಬ್ಯುಸಿ ಆಗುವ ಬಗ್ಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇನ್ನು ಪ್ರಶಾಂತ್ ನೀಲ್ ‘ಸಲಾರ್’ ಚಿತ್ರದ ಕೆಲಸಕ್ಕೆ ಮರಳಲಿದ್ದು, ಜ್ಯೂ.ಎನ್​ಟಿಆರ್ ಜತೆಯೂ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ, ಮುಂದಿನ ಕೆಲವರ್ಷ ಇಬ್ಬರೂ ಫ್ರೀ ಆಗೋದು ಅನುಮಾನ ಎನ್ನಲಾಗುತ್ತಿದೆ. ಹೀಗಾಗಿ, ‘ಕೆಜಿಎಫ್: ಚಾಪ್ಟರ್​ 3’ ಕೆಲಸ ಆರಂಭ ಆಗೋದು ಯಾವಾಗ ಎನ್ನುವ ಪ್ರಶ್ನೆ ಮೂಡಿದೆ

ಮೂಲಗಳ ಪ್ರಕಾರ, ಅಮೆರಿಕ, ದಕ್ಷಿಣ ಆಫ್ರಿಕಾ ಸೇರಿ ಹಲವು ದೇಶಗಳಲ್ಲಿ ‘ಕೆಜಿಎಫ್ 3’ ಚಿತ್ರದ ಶೂಟಿಂಗ್ ನಡೆಯಲಿದೆ. ಕಥೆ ರೆಟ್ರೋ ಶೈಲಿಯಲ್ಲೇ ಸಾಗಲಿದ್ದು, ಇದಕ್ಕಾಗಿ ಹೆಚ್ಚಿನ ಕೆಲಸದ ಅಗತ್ಯವಿದೆ. ಹೀಗಾಗಿ, ಚಿತ್ರದ ಬಜೆಟ್ ಹಿರಿದಾಗಲಿದೆ. ಇದಕ್ಕಾಗಿ ಚಿತ್ರತಂಡ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಅಂದಹಾಗೆ, ಈ ಸಿನಿಮಾ ರಾಕಿ ಈ ಮೊದಲು ಮಾಡಿದ ಕ್ರೈಮ್​ಗಳ ಬಗ್ಗೆ ಇರಲಿದೆ.

‘ಕೆಜಿಎಫ್ 2’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಕಮಾಲ್ ಮಾಡುತ್ತಿದೆ. ಈ ಸಿನಿಮಾದ ಗಳಿಕೆ ಭಾರತದ ಬಾಕ್ಸ್ ಆಫೀಸ್​ನಲ್ಲಿ ಮೊದಲ ದಿನವೇ 130 ಕೋಟಿ ರೂಪಾಯಿ ದಾಟಿದೆ. ಬಾಲಿವುಡ್ ಬಾಕ್ಸ್​ ಆಫೀಸ್​ನಲ್ಲಿ ಚಿತ್ರ 53.95 ಕೋಟಿ ರೂ. ಗಳಿಕೆ ಮಾಡಿದೆ. ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್​ನಿಂದ ‘ಚಾಪ್ಟರ್​ 3’ ಮಾಡಲು ಹೊರಟಿರುವ ಚಿತ್ರತಂಡಕ್ಕೆ ಹೊಸ ಹುಮ್ಮಸ್ಸು ಬಂದಿದೆ.

ಇದನ್ನೂ ಓದಿ:  ಬಾಲಿವುಡ್​ ಇತಿಹಾಸದಲ್ಲೇ ದಾಖಲೆ ಬರೆದ ‘ಕೆಜಿಎಫ್ 2’ ಮೊದಲ ದಿನದ ಕಲೆಕ್ಷನ್​

ಬಾಲಿವುಡ್ ಒಂದರಲ್ಲೇ 300 ಕೋಟಿ ರೂಪಾಯಿ ಬಾಚಲಿದೆ ‘ಕೆಜಿಎಫ್​ 2’? ಹೌದೆನ್ನುತ್ತಿದ್ದಾರೆ ಪಂಡಿತರು

Published On - 4:39 pm, Fri, 15 April 22