ಕೆಜಿಎಫ್ ಚಾಚಾಗೆ ಕ್ಯಾನ್ಸರ್ ಎಂದಾಗ ಯಶ್ ಪ್ರತಿಕ್ರಿಯೆ ಏನು? ಯಾರೂ ಊಹಿಸಲು ಸಾಧ್ಯವಿಲ್ಲ

ಹಿರಿಯ ಕನ್ನಡ ನಟ ಹರೀಶ್ ರೈ ಅವರು ಥೈರಾಯ್ಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಈ ಕಷ್ಟದ ಸಮಯದಲ್ಲಿ ಯಶ್ ಅವರು ಹರೀಶ್ ರೈ ಅವರಿಗೆ ಮಾಡಿದ ಸಹಾಯ ಏನು ಎಂದು ಕೇಳುತ್ತಿದ್ದಾರೆ. ಇದಕ್ಕೆ ಈ ಮೊದಲು ಹರೀಶ್ ಅವರೇ ಉತ್ತರಿಸಿದ್ದರು. ಆ ಬಗ್ಗೆ ಇಲ್ಲಿದೆ ವಿವರ.

ಕೆಜಿಎಫ್ ಚಾಚಾಗೆ ಕ್ಯಾನ್ಸರ್ ಎಂದಾಗ ಯಶ್ ಪ್ರತಿಕ್ರಿಯೆ ಏನು? ಯಾರೂ ಊಹಿಸಲು ಸಾಧ್ಯವಿಲ್ಲ
ಹರೀಶ್ ರಾಯ್-ಯಶ್

Updated on: Aug 29, 2025 | 10:41 AM

ಕನ್ನಡದ ಹಿರಿಯ ನಟನ ಹರೀಶ್ ರಾಯ್ (Hareesh Roy) ಅವರು ಕ್ಯಾನ್ಸರ್​ನಿಂದ ಬಳಲುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ತುಂಬಾನೇ ಹದಗೆಟ್ಟಿದೆ. ಅವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಥೈರಾಯ್ಡ್ ಕ್ಯಾನ್ಸರ್​ನಿಂದ ಅವರು ಬಳಲುತ್ತಿದ್ದು, ಹೊಟ್ಟೆ ಹಾಗೂ ಕಾಲಿನ ಭಾಗಕ್ಕೆ ನೀರು ತುಂಬಿದೆ. ತಮಗೆ ಕ್ಯಾನ್ಸರ್ ಎಂದಾಗ ಯಶ್ ಪ್ರತಿಕ್ರಿಯೆ ಹೇಗಿತ್ತು ಎಂಬುದನ್ನು ಈ ಮೊದಲು ಹರೀಶ್ ರಾಯ್​ ಅವರು ವಿವರಿಸಿದ್ದರು.

‘ಕೆಜಿಎಫ್’ ಚಿತ್ರದಲ್ಲಿ ಚಾಚಾ ಹೆಸರಿನ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ರಾಕಿ ಭಾಯ್ ಆಪ್ತ ವಲಯದಲ್ಲಿ ಈ ಚಾಚಾ ಕೂಡ ಇದ್ದರು. ಹಲವು ಸಮಯ ಕಾಲ ಇವರು ಒಟ್ಟಾಗಿ ಶೂಟಿಂಗ್ ಮಾಡಿದ್ದರಿಂದ ಇವರ ಮಧ್ಯೆ ಒಳ್ಳೆಯ ಬಾಂಧವ್ಯ ಬೆಳೆದಿದೆ. 2024ರಲ್ಲಿ ಹರೀಶ್ ರಾಯ್ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಯಶ್ ಬಗ್ಗೆ ಅವರು ಮಾತನಾಡಿದ್ದರು.

ಇದನ್ನೂ ಓದಿ
ಹರೀಶ್ ರಾಯ್ ಪರಿಸ್ಥಿತಿ ನೋಡಿ; ಸಹಾಯಕ್ಕಾಗಿ ಅಂಗಲಾಚಿದ ‘ಕೆಜಿಎಫ್’ ಚಾಚಾ
2015ರ ಹಾಡಿನ ಟ್ಯೂನ್ ಹೋಲುತ್ತಿದೆ ‘ಇದ್ರೆ ನೆಮ್ದಿಯಾಗ್ ಇರ್ಬೇಕ್’ ಸಾಂಗ್
VIDEO: ಶಿವರಾಜ್​ಕುಮಾರ್ ಕಾಲಿಗೆ ಬಿದ್ದು ಕ್ಷಮೆ ಕೇಳಿದ ಮಡೆನೂರು ಮನು
ಹಿರಿಯ ನಟ ದಿನೇಶ್​ಗೆ ಇದ್ದ ಆರೋಗ್ಯ ಸಮಸ್ಯೆಗಳು ಒಂದೆರಡಲ್ಲ

‘ಯಶ್ ಬಗ್ಗೆ ನಾನು ಮಾತನಾಡದೇ ಇನ್ಯಾರು ಮಾತಾಡ್ತಾರೆ? ನನ್ನ ಯಶ್ ನನಗೆ ಕರೆ ಮಾಡಿ ವಿಚಾರಿಸಿದರು. ನಾನು ಹಣ ಹಾಕ್ತೀನಿ. ನೀವು ತಲೆಕೆಡಿಸಿಕೊಳ್ಳಬೇಡಿ ಎಂದರು. ಹಣ ಬೇಡ ಎಂದೆ, ಇಲ್ಲ ಹಾಕ್ತೀನಿ ಎಂದರು. ನನ್ನ ಪತ್ನಿ ಬಳಿ ಮಾತನಾಡಿ ಹಣ ಕೊಡ್ತೀನಿ ಎಂದರು. ಬೇಡ ಎಂದು ಸಾಕಷ್ಟು ಕೇಳಿಕೊಂಡ ಬಳಿಕ ಅವರು ಓಕೆ ಎಂದರು’ ಎಂದು ಹರೀಶ್ ರಾಯ್ ಹೇಳಿದ್ದಾರೆ.

ಯಶ್ ಬಗ್ಗೆ ಹರೀಶ್ ರಾಯ್ ಮಾತು

‘ಯಶ್​ನ ಫೋನ್​ ಅಲ್ಲಿ ಯಾರಿಗಾದ್ರೂ ಮಾತನಾಡಿಸೋಕೆ ಆಗುತ್ತಾ? ನಾನು ಮೆಸೇಜ್ ಹಾಕಿದ್ರೆ ಸಾಕು ಕಾಲ್ ಮಾಡ್ತಾರೆ. ಯಜಮಾನರು ಹೃದಯಕ್ಕೆ ಹತ್ತಿರವಾದವರು. ಕೋಟಿ ಖರ್ಚಾದರೂ ಉಳಿಸಿಕೊಳ್ತೀನಿ ಎಂದು ಹೇಳಿದ್ದಾರೆ. ದರ್ಶನ್ ಹಾಗೂ ಯಶ್ ಜೋಡೆತ್ತು. ನನ್ನ ಬತ್ತಳಿಕೆಯಲ್ಲಿ ಅವರಿಬ್ಬರು ಇದ್ದಾರೆ ಎಂಬ ನಂಬಿಕೆ ನನಗಿದೆ’ ಎಂದು ಈ ಮೊದಲು ಹರೀಶ್ ರಾಯ್ ಹೇಳಿದ್ದರು.

ಇದನ್ನೂ ಓದಿ: ಹರೀಶ್ ರಾಯ್ ಪರಿಸ್ಥಿತಿ ನೋಡಿದ್ರೆ ಕಣ್ಣೀರು ಬರುತ್ತೆ; ಸಹಾಯಕ್ಕಾಗಿ ಅಂಗಲಾಚಿದ ‘ಕೆಜಿಎಫ್’ ಚಾಚಾ

ಅವಕಾಶ ಕಡಿಮೆ ಆಗಬಹುದು ಎಂಬ ಭಯಕ್ಕೆ ಹರೀಶ್ ರಾಯ್ ಅವರು ತಮಗೆ ಕ್ಯಾನ್ಸರ್ ಬಂದ ವಿಚಾರವನ್ನು ಎಲ್ಲಿಯೂ ಹೇಳಿರಲಿಲ್ಲ. ಆದರೆ, ನಂತರ ಅವರು ಈ ವಿಚಾರ ಹೇಳಲೇಬೇಕಾದ ಪರಿಸ್ಥಿತಿ ಬಂತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

Published On - 7:40 am, Thu, 28 August 25