‘ನಾಯಕಿ ಬೇಕೇ ಬೇಕು’: ಪ್ರೇಮ್ ಬಳಿ ಸುದೀಪ್ ವಿಶೇಷ ಮನವಿ

ಪ್ರೇಮ್ ಬಳಿ ವಿಶೇಷ ಮನವಿ ಮಾಡಿದ್ದಾರಂತೆ ಸುದೀಪ್, ‘ಈ ಸಿನಿಮಾದಲ್ಲಿ ಆದರೂ ನನಗೆ ನಾಯಕಿ ಇರುವಂತೆ ಮಾಡು’ ಎಂದಿದ್ದಾರಂತೆ ಸುದೀಪ್. ಇತ್ತೀಚೆಗೆ ಸುದೀಪ್ ನಟನೆ ಮಾಡಿರುವ ಸಿನಿಮಾಗಳಲ್ಲಿ ಅವರಿಗೆ ನಾಯಕಿಯೇ ಇಲ್ಲ. ‘ಮಾರ್ಕ್’, ‘ಮ್ಯಾಕ್ಸ್’, ಅದಕ್ಕೂ ಮುಂಚೆ ‘ವಿಕ್ರಾಂತ್ ರೋಣ’ ಯಾವ ಸಿನಿಮಾದಲ್ಲೂ ನಾಯಕಿ ಇಲ್ಲ. ಇದ್ದರೂ ರೊಮ್ಯಾಂಟಿಕ್ ಆಂಗಲ್ ಸಿನಿಮಾದಲ್ಲಿ ಇಲ್ಲ. ಈ ಸಿನಿಮಾದಲ್ಲಿ ನಾಯಕಿ ಹಾಗೂ ಕೆಲ ಹಾಡುಗಳನ್ನಾದರೂ ಇಡುವಂತೆ ಪ್ರೇಮ್​​ಗೆ ಹೇಳಿದ್ದೇನೆ’ ಎಂದರು ಸುದೀಪ್.

‘ನಾಯಕಿ ಬೇಕೇ ಬೇಕು’: ಪ್ರೇಮ್ ಬಳಿ ಸುದೀಪ್ ವಿಶೇಷ ಮನವಿ
Sudeep Dada

Updated on: Nov 27, 2026 | 10:22 PM

ಮುಖ್ಯಾಂಶಗಳು

  • ಸುದೀಪ್ ಮತ್ತು ಪ್ರೇಮ್ ಹೊಸ ಸಿನಿಮಾ
  • ಹೊಸ ಸಿನಿಮಾಕ್ಕೆ ‘ದಾದಾ ಆನ್ ಹಾಲಿಡೇ’ ಎಂದು ಹೆಸರು
  • ಪ್ರೇಮ್ ಬಳಿ ವಿಶೇಷ ಮನವಿ ಮಾಡಿರುವ ಸುದೀಪ್

ಸುದೀಪ್ ನಟಿಸಿ ಪ್ರೇಮ್ ನಿರ್ದೇಶನ ಮಾಡುತ್ತಿರುವ ‘ದಾದಾ ಆನ್ ಹಾಲಿಡೇ’ ಸಿನಿಮಾದ ಟೈಟಲ್ ಟೀಸರ್ ಇಂದು ಬಿಡುಗಡೆ ಆಯಿತು. ಸಿನಿಮಾ ಸಹ ಇಂದು ಅಧಿಕೃತವಾಗಿ ಪ್ರಾರಂಭವಾಯಿತು. ಮೂರು-ನಾಲ್ಕು ಗಂಟೆ ತಡವಾಗಿ ಆರಂಭವಾದ ಕಾರ್ಯಕ್ರಮದಲ್ಲಿ ಸಿಎಂ ಡಿಕೆ ಶಿವಕುಮಾರ್ ಅವರು ಕ್ಲಾಪ್ ಮಾಡಿ ಸಿನಿಮಾಕ್ಕೆ ಶುಭ ಹಾರೈಸಿ ವೇದಿಕೆಯಿಂದ ನಿರ್ಗಮಿಸಿದರು. ಅಭಿಷೇಕ್ ಅಂಬರೀಶ್, ರಕ್ಷಿತಾ, ನಲಪಾಡ್ ಇನ್ನೂ ಹಲವಾರು ಮಂದಿ ಸಿನಿಮಾಕ್ಕೆ ಶುಭ ಹಾರೈಸಿದರು. ಕೊನೆಯವರಾಗಿ ಮಾತನಾಡಿದ ಸುದೀಪ್ ಅವರು, ಪ್ರೇಮ್ ಬಗ್ಗೆ ನಗೆ ಚಟಾಕಿಗಳನ್ನು ಹಾರಿಸುತ್ತಲೇ ಸಿನಿಮಾದ ಬಗ್ಗೆ ಮಾತನಾಡಿದರು.

ಈ ಸಿನಿಮಾದ ಚರ್ಚೆ ಮಾಡುವಾಗ ಪ್ರೇಮ್ ಬಳಿ ವಿಶೇಷ ಮನವಿ ಮಾಡಿದ್ದಾರಂತೆ ಸುದೀಪ್, ‘ಈ ಸಿನಿಮಾದಲ್ಲಿ ಆದರೂ ನನಗೆ ನಾಯಕಿ ಇರುವಂತೆ ಮಾಡು’ ಎಂದಿದ್ದಾರಂತೆ ಸುದೀಪ್. ಇತ್ತೀಚೆಗೆ ಸುದೀಪ್ ನಟನೆ ಮಾಡಿರುವ ಸಿನಿಮಾಗಳಲ್ಲಿ ಅವರಿಗೆ ನಾಯಕಿಯೇ ಇಲ್ಲ. ‘ಮಾರ್ಕ್’, ‘ಮ್ಯಾಕ್ಸ್’, ಅದಕ್ಕೂ ಮುಂಚೆ ‘ವಿಕ್ರಾಂತ್ ರೋಣ’ ಯಾವ ಸಿನಿಮಾದಲ್ಲೂ ನಾಯಕಿ ಇಲ್ಲ. ಇದ್ದರೂ ರೊಮ್ಯಾಂಟಿಕ್ ಆಂಗಲ್ ಸಿನಿಮಾದಲ್ಲಿ ಇಲ್ಲ. ಈ ಸಿನಿಮಾದಲ್ಲಿ ನಾಯಕಿ ಹಾಗೂ ಕೆಲ ಹಾಡುಗಳನ್ನಾದರೂ ಇಡುವಂತೆ ಪ್ರೇಮ್​​ಗೆ ಹೇಳಿದ್ದೇನೆ’ ಎಂದರು ಸುದೀಪ್.

Loading...

ಸಿನಿಮಾ ನಿರ್ದೇಶನದಲ್ಲಿ ಪ್ರೇಮ್​​ ಅವರ ಶಕ್ತಿ, ಸಾಮರ್ಥ್ಯದ ಬಗ್ಗೆ ಮಾತನಾಡಿದ ಸುದೀಪ್, ‘ಪ್ರೇಮ್ ಅವರಿಗೆ ಶಕ್ತಿ ಇದೆ, ಸಾಮರ್ಥ್ಯ ಇದೆ, ಪ್ರತಿಭೆ ಇದೆ. ಅವರಂತೆ ಸಿನಿಮಾವನ್ನು ಪ್ರೀತಿಸುವ ವ್ಯಕ್ತಿಗಳು ಕಡಿಮೆ. ಅವರೊಂದಿಗೆ ಕೆಲಸ ಮಾಡುವುದು ನನಗೆ ಒಂದು ವಿಶಿಷ್ಟ ಅನುಭವ. ಅವರೊಟ್ಟಿಗೆ ಸೆಟ್​​ನಲ್ಲಿದ್ದರೆ ಸಿನಿಮಾ ಬಿಟ್ಟರೆ ಇನ್ಯಾವ ವಿಷಯವನ್ನೂ ಅವರು ಮಾತನಾಡುವುದಿಲ್ಲ. ಬಹಳ ಶ್ರಮ ಹಾಕಿ ಸಿನಿಮಾ ಮಾಡುತ್ತಾರೆ ನಿರ್ದೇಶಕ ಪ್ರೇಮ್’ ಎಂದರು ಸುದೀಪ್.

ಇದನ್ನೂ ಓದಿ:ಲೀಕ್ ಆಯ್ತಾ ಕಿಚ್ಚ ಸುದೀಪ್-ಪ್ರೇಮ್ ಹೊಸ ಸಿನಿಮಾ ಟೈಟಲ್?

ತಮ್ಮ ಬಗ್ಗೆಯೇ ಮಾತನಾಡಿದ ಸುದೀಪ್, ‘ಇತ್ತೀಚೆಗೆ ಯಾರೋ ಕೇಳಿದರು. ಸಿನಿಮಾ ಮಾಡುತ್ತಿದ್ದೀರಿ, ಆ ನಂತರ ಕ್ರಿಕೆಟ್​​ ಎಂದು ಹೋದಿರಿ, ಬಿಗ್​​ಬಾಸ್​​ ಕಡೆ ಹೋದಿರಿ, ಅಡುಗೆ ಕಡೆ ಒಲವು ಬೆಳೆಸಿಕೊಂಡಿರಿ, ಮತ್ತೆ ಕ್ರಿಕೆಟ್​​ ಕಡೆಗೆ ಸರಿದಿರಿ, ಈಗ ಕಾರು ರೇಸು ಎನ್ನುತ್ತಿದ್ದೀರಿ, ಸಿನಿಮಾದಿಂದ ದೂರ ಆಗುತ್ತೀರಾ?’ ಎಂದು ಕೇಳಿದರು. ಅಂತಹ ಅನುಮಾನ ಇದ್ದವರಿಗೆಲ್ಲ ಹೇಳುವುದು ಒಂದೇ, ‘ನನಗೆ ಒಂದು ಗುರುತು ತಂದು ಕೊಟ್ಟಿದ್ದು ಸಿನಿಮಾ. ಅದು ನನಗೆ ದೇವಸ್ಥಾನ ಇದ್ದಂತೆ, ಅದನ್ನು ಎಂದಿಗೂ ಬಿಡುವುದಿಲ್ಲ. ಅದಕ್ಕೆ ದ್ರೋಹ ಮಾಡಲ್ಲ’ ಎಂದರು ಸುದೀಪ್.

‘ಈ ಸಿನಿಮಾಕ್ಕಾಗಿ ಕಷ್ಟಪಟ್ಟು ಕೆಲಸ ಮಾಡುತ್ತೇವೆ. ಜನರಿಗೆ ಸಿನಿಮಾ ಇಷ್ಟ ಆಗುತ್ತದೆ ಎಂಬ ನಿರೀಕ್ಷೆ ಇದೆ. ಸಾಕಷ್ಟು ಹೀರೋಯಿಸಂ ಸಿನಿಮಾ ಮಾಡಿದ್ದೇನೆ. ನಡುವಲ್ಲಿ ಒಂದು ಹಾಸ್ಯ ಪ್ರಧಾನ, ಕೌಟುಂಬಿಕ, ರೊಮ್ಯಾಂಟಿಕ್ ಆಂಗಲ್‌ನ ಸಿನಿಮಾ ಇರಬೇಕು ಎನಿಸಿ ಈ ಸಿನಿಮಾ ಮಾಡುತ್ತಿದ್ದೇವೆ. ಪ್ರೇಮ್ ಮೇಲೆ ನಂಬಿಕೆ ಇರಿಸಿಕೊಂಡು ಮುಂದೆ ಹೋಗುತ್ತಿದ್ದೇನೆ’ ಎಂದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us