‘ನಟನೆ ದೇವಸ್ಥಾನ ಇದ್ದಂತೆ, ಅದಕ್ಕೆ ದ್ರೋಹ ಮಾಡಲ್ಲ’; ಟೀಕಿಸಿದವರಿಗೆ ಕಿಚ್ಚನ ಖಡಕ್ ಉತ್ತರ

ಸಿನಿಮಾ ಬಿಟ್ಟು ಬೇರೆ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ ಎಂಬ ಮಾತುಗಳಿಗೆ ಕಿಚ್ಚ ಸುದೀಪ್ ಸ್ಪಷ್ಟ ಉತ್ತರ ನೀಡಿದ್ದಾರೆ. ಕಾರ್ ರೇಸ್ ಕೇವಲ ಟ್ರಯಲ್ ಆಗಿತ್ತು ಎಂದಿರುವ ಅವರು, ಸಿನಿಮಾ ಪರದೆಯೇ ತಮ್ಮ ನಿಜವಾದ ಗುರುತು ಮತ್ತು ದೇವಸ್ಥಾನವಿದ್ದಂತೆ ಎಂದು ಹೇಳಿದ್ದಾರೆ. ಚಿಕ್ಕ ಪರದೆಯಾಗಲಿ ದೊಡ್ಡ ಪರದೆಯಾಗಲಿ, ನಟನೆಯಿಂದ ದೂರ ಇರಲು ಸಾಧ್ಯವಿಲ್ಲ ಹಾಗೂ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ.

‘ನಟನೆ ದೇವಸ್ಥಾನ ಇದ್ದಂತೆ, ಅದಕ್ಕೆ ದ್ರೋಹ ಮಾಡಲ್ಲ’; ಟೀಕಿಸಿದವರಿಗೆ ಕಿಚ್ಚನ ಖಡಕ್ ಉತ್ತರ
ಸುದೀಪ್

Updated on: Nov 28, 2026 | 7:01 AM

ಮುಖ್ಯಾಂಶಗಳು

  • ಟ್ರೋಲ್ ಮತ್ತು ಟೀಕೆಗಳಿಗೆ ಕಿಚ್ಚನ ಖಡಕ್ ತಿರುಗೇಟು
  • ಕಾರ್ ರೇಸ್ ಅಲ್ಲ, ಅದು ಪ್ರೀತಿಯಿಂದ ಮಾಡಿದ ಟ್ರಯಲ್
  • ಸಿನಿಮಾ ಪರದೆಯೇ ನನ್ನ ಗುರುತು ಮತ್ತು ದೇವಸ್ಥಾನ

ನಟನೆ ಬಿಟ್ಟು ಉಳಿದಿದ್ದೆಲ್ಲವನ್ನೂ ಮಾಡುತ್ತೀರಿ ಎಂದು ಪ್ರಶ್ನಿಸಿದವರಿಗೆ ನಟ ಕಿಚ್ಚ ಸುದೀಪ್ ಹೊಸ ಸಿನಿಮಾ ಲಾಂಚ್ ವೇದಿಕೆಯಲ್ಲಿ ಸ್ಪಷ್ಟ ಉತ್ತರ ನೀಡಿದ್ದಾರೆ. ಸುದೀಪ್ ಅವರ ನಟನೆ ಹೊರತಾದ ಚಟುವಟಿಕೆ ಜೋರಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಅದನ್ನು ಸುದೀಪ್ ಕೂಡ ಗಮನಿಸಿದ್ದಾರೆ. ‘ಸಿನಿಮಾ ಪರದೆ ತಮಗೆ ದೇವಸ್ಥಾನವಿದ್ದಂತೆ, ಅದಕ್ಕೆ ಯಾವಾಗಲೂ ಮೋಸ ಆಗಲ್ಲ’ ಎಂದು ಸುದೀಪ್ ಹೇಳಿದ್ದಾರೆ.

‘ಸಿನಿಮಾ ಮಾಡುತ್ತಿದ್ದ ನೀವು ದಿಢೀರ್ ಆಗಿ ಕ್ರಿಕೆಟ್, ಅಡುಗೆ, ಬಿಗ್ ಬಾಸ್ ಹಾಗೂ ಈಗ ಕಾರ್ ರೇಸ್‌ನತ್ತ ಹೋಗಿದ್ದೀರಿ ಎಂದು ಕೆಲವರು ಬೇಸರ ವ್ಯಕ್ತಪಡಿಸಿದ್ದರು. ವರ್ಷಕ್ಕೆ ಒಂದು ಕೂಡ ಸಿನಿಮಾ ಬರ್ತಿಲ್ಲ ಎಂದರು. ಹೊಸ ಸಿನಿಮಾ ಘೋಷಣೆ ಮಾಡುತ್ತೀರಿ ಎಂದು ಕಾಯುತ್ತಿದ್ದರೆ ಕಾರ್ ರೇಸ್‌ಗೆ ಹೋಗಿದ್ದೀರಿ ಎಂಬ ಮಾತುಗಳನ್ನು ನಾನು ಕೇಳಿದ್ದೇನೆ’ ಎಂದು ಸುದೀಪ್ ಮಾತು ಆರಂಭಿಸಿದರು.

Loading...

ಕಾರ್ ರೇಸ್ ವಿಚಾರವಾಗಿ ಸ್ಪಷ್ಟನೆ ನೀಡಿದ ಸುದೀಪ್, ‘ನಾನು ರೇಸಿಂಗ್ ಮಾಡಿಲ್ಲ, ಅದು ಕೇವಲ ಒಂದು ಟ್ರಯಲ್ ಆಗಿತ್ತು . ಆ ಟ್ರಯಲ್ ಅನ್ನು ಬಹಳ ಪ್ರೀತಿಯಿಂದ ಮಾಡಿದ್ದೇನೆ. ಸಿನಿಮಾ ಪರದೆಯಿಂದ ನಾನು ಎಂದಿಗೂ ದೂರ ಇರಲು ಸಾಧ್ಯವಿಲ್ಲ’ ಎಂದು ಭಾವುಕರಾಗಿ ಹೇಳಿದರು.

‘ನನಗೆ ಇಂದು ಸಿಕ್ಕಿರುವ ಎಲ್ಲವೂ ಆ ಪರದೆಯಿಂದಲೇ ಬಂದಿದೆ. ಅದು ಚಿಕ್ಕ ಪರದೆಯಾಗಿರಲಿ ಅಥವಾ ದೊಡ್ಡ ಪರದೆಯಾಗಿರಲಿ, ತಮ್ಮ ಸಂಪೂರ್ಣ ಗುರುತು ಅಲ್ಲಿಂದಲೇ ನಿರ್ಮಾಣವಾಗಿದೆ. ಸಿನಿಮಾ ಪರದೆ ನನಗೆ ದೇವಸ್ಥಾನವಿದ್ದಂತೆ. ನಾನು ಆ ದೇವಸ್ಥಾನಕ್ಕೆ ಎಂದಿಗೂ ದ್ರೋಹ ಮಾಡಲ್ಲ’ ಎಂದಿದ್ದಾರೆ ಸುದೀಪ್.

YouTube video player

ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ಎಂಬ ಭರವಸೆಯನ್ನೂ ಸುದೀಪ್ ಈ ವೇಳೆ ನೀಡಿದರು. ಸಿನಿಮಾ ಮೇಲಿನ ತಮ್ಮ ಪ್ರೀತಿ ಮತ್ತು ಬದ್ಧತೆ ಎಂದಿಗೂ ಬದಲಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಈ ಮೂಲಕ ಬೇರೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದರೂ ನಟನೆಯೇ ತಮ್ಮ ಮೊದಲ ಆದ್ಯತೆ ಎಂಬುದನ್ನು ಸುದೀಪ್ ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ಕಿಂಗ್ ಕಿಚ್ಚ: ಸುದೀಪ್​​ಗೆ ಹೊಸ ಬಿರುದು ಕೊಟ್ಟ ಪ್ರೇಮ್, ಕಾರಣವೇನು?

ಸುದೀಪ್ ಹಾಗೂ ಪ್ರೇಮ್ ಕಾಂಬಿನೇಷನ್​ ಅಲ್ಲಿ ‘ದಾದಾ ಆನ್ ಹಾಲಿಡೇ’ ಸಿನಿಮಾ ರೆಡಿ ಆಗಲಿದೆ. 2027ರ ವರಮಹಾಲಕ್ಷ್ಮಿ ಹಬ್ಬಕ್ಕೆ ಚಿತ್ರವನ್ನು ತೆರೆಕಾಣಿಸುವ ಆಲೋಚನೆ ತಂಡಕ್ಕೆ ಇದೆ. ಹಲವು ವರ್ಷಗಳ ಬಳಿಕ ಇವರು ದೊಡ್ಡ ಪರದೆಮೇಲೆ ಮತ್ತೆ ಒಂದಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us