‘ದರ್ಶನ್ ನಟನೆಯ ಕಾಟೇರ ನೋಡಿದ್ರಾ’; ಅಭಿಮಾನಿ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ ಏನು?

|

Updated on: Jan 16, 2024 | 1:18 PM

ಸುದೀಪ್ ಅವರು ‘ಆಸ್ಕ್​ ಕಿಚ್ಚ’ ಸೆಷನ್ ನಡೆಸಿದ್ದಾರೆ. ಈ ವೇಳೆ ಅವರಿಗೆ ‘ಕಾಟೇರ ಯಾವಾಗ ನೋಡ್ತೀರಾ ಸರ್’ ಎಂದು ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಸುದೀಪ್ ಕೊಟ್ಟಿರೋ ಉತ್ತರ ಗೊಂದಲಮಯವಾಗಿದೆ. 

‘ದರ್ಶನ್ ನಟನೆಯ ಕಾಟೇರ ನೋಡಿದ್ರಾ’; ಅಭಿಮಾನಿ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರ ಏನು?
ಸುದೀಪ್​-ದರ್ಶನ್
Follow us on

ದರ್ಶನ್ ನಟನೆಯ ‘ಕಾಟೇರ’ ಸಿನಿಮಾ (Kaatera Movie) ಸೂಪರ್ ಹಿಟ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಚಿತ್ರ ರಿಲೀಸ್ ಆಗಿ 18 ದಿನ ಕಳೆದರೂ ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಹಲವು ಸಿನಿಮಾಗಳ ಅಬ್ಬರದ ನಡುವೆಯೂ ಈ ಚಿತ್ರ ಗೆದ್ದು ಬೀಗಿದೆ. ಅನೇಕ ಸೆಲೆಬ್ರಿಟಿಗಳು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ‘ಕಾಟೇರ’ ಚಿತ್ರವನ್ನು ಸುದೀಪ್ ನೋಡಿದರೇ ಎನ್ನುವ ಪ್ರಶ್ನೆ ಮೂಡಿದೆ. ಇದಕ್ಕೆ ಸ್ವತಃ ಸುದೀಪ್ ಅವರೇ ಉತ್ತರ ನೀಡಿದ್ದಾರೆ. ಅವರು ಮಾಡಿರೋ ಟ್ವೀಟ್ ವೈರಲ್ ಆಗಿದೆ.

ಕಿಚ್ಚ ಸುದೀಪ್ ಅವರು ಇಂದಿನಿಂದ (ಜನವರಿ 16) ‘ಮ್ಯಾಕ್ಸ್’ ಸಿನಿಮಾ ಶೂಟ್​ಗೆ ತೆರಳಿದ್ದಾರೆ. ವಿಮಾನ ಏರುವುದಕ್ಕೆ ಸಾಕಷ್ಟು ಸಮಯ ಇದೆ ಎಂಬ ಕಾರಣಕ್ಕೆ ಅವರು ‘ಆಸ್ಕ್​ ಕಿಚ್ಚ’ ಸೆಷನ್ ನಡೆಸಿದ್ದಾರೆ. ಈ ವೇಳೆ ಅವರಿಗೆ ‘ಕಾಟೇರ ಯಾವಾಗ ನೋಡ್ತೀರಾ ಸರ್’ ಎಂದು ಕೇಳಲಾಗಿದೆ. ಇದಕ್ಕೆ ಸುದೀಪ್ ಕೊಟ್ಟಿರೋ ಉತ್ತರ ಗೊಂದಲಮಯವಾಗಿದೆ.

‘ಕಾಟೇರ ನೋಡಿದ್ರಾ’ ಎಂಬ ಟ್ವೀಟ್​ನ ರೀಟ್ವೀಟ್ ಮಾಡಿಕೊಂಡಿರೋ ಸುದೀಪ್ ಅವರು ‘Hasn’t Anyone Told You I Haven’t Already’ ಎಂದು ಬರೆದಿದ್ದಾರೆ. ಇದರ ಅರ್ಥ ಗೊತ್ತಾಗದೇ ಅಭಿಮಾನಿಗಳು ಗೊಂದಲಕ್ಕೆ ಒಳಗಾಗಿದ್ದಾರೆ. ‘ನಾನು ನೋಡಿಲ್ಲ ಎಂದು ನಿಮಗೆ ಯಾರಾದ್ರೂ ಹೇಳಿದ್ರ’ ಎಂದು ಬರೆಯಲು ಹೋಗಿ ಸುದೀಪ್ ಈ ರೀತಿ ಬರೆದಿರಬಹುದು ಎಂದು ಅನೇಕರು ಊಹಿಸಿದ್ದಾರೆ. ಇನ್ನೂ ಕೆಲವರು ಉದ್ದೇಶಪೂರ್ವಕವಾಗಿಯೇ ಹೀಗೆ ಹೇಳಿದ್ದಾರೆ ಎಂದಿದ್ದಾರೆ. ಈ ಬಗ್ಗೆ ಸುದೀಪ್ ಅವರೇ ಸ್ಪಷ್ಟನೆ ನೀಡಬೇಕಿದೆ.

ಇದನ್ನೂ ಓದಿ: Kichcha Sudeep: ‘ಸಮಯ ಸಿಕ್ಕಾಗಲೆಲ್ಲ ಇದನ್ನು ಮಾಡ್ತೀನಿ’; ಅಭಿಮಾನಿಗಳಿಗೆ ಕಿಚ್ಚ ಸುದೀಪ್ ಸರ್​ಪ್ರೈಸ್​

ಇತ್ತೀಚೆಗೆ ‘ಕಾಟೇರ’ ಸೆಲೆಬ್ರಿಟಿ ಶೋ ಆಯೋಜನೆ ಮಾಡಲಾಗಿತ್ತು. ಸುದೀಪ್ ಅವರಿಗೂ ನಿರ್ಮಾಪಕ ರಾಕ್​ಲೈನ್ ವೆಂಕಟೇಶ್ ಅವರು ಆಹ್ವಾನ ನೀಡಿದ್ದರು ಎನ್ನಲಾಗಿದೆ. ಆದರೆ, ಶೂಟ್ ಇದ್ದ ಕಾರಣ ಅವರು ಆಗಮಿಸಿರಲಿಲ್ಲ. ಈಗ ಸುದೀಪ್ ಅವರು ‘ಕಾಟೇರ’ ಸಿನಿಮಾ ವೀಕ್ಷಿಸಿದ್ದಾರೋ ಅಥವಾ ಇಲ್ಲವೋ ಎನ್ನುವ ಗೊಂದಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:17 pm, Tue, 16 January 24