Kichcha Sudeep: ಕಿಚ್ಚ ಸುದೀಪ್ ನಟನೆಯ 3 ಹೊಸ ಸಿನಿಮಾ ಬಗ್ಗೆ ಸಿಕ್ತು ಅಪ್ಡೇಟ್; ಇಲ್ಲಿದೆ ಸಿಹಿ ಸುದ್ದಿ..
Kichcha 46 | Sudeep New Film: ಇಷ್ಟು ದಿನ ಕಿಚ್ಚ ಸುದೀಪ್ ಅವರು ಕ್ರಿಕೆಟ್ನಲ್ಲಿ ಬ್ಯುಸಿ ಆಗಿದ್ದರು. ಅವರು ನಟಿಸಲಿರುವ ಮೂರು ಸಿನಿಮಾಗಳಿಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ.
‘ಹೊಸ ಸಿನಿಮಾ ಯಾವಾಗ ಅನೌನ್ಸ್ ಮಾಡ್ತೀರಿ ಸರ್’?- ‘ವಿಕ್ರಾಂತ್ ರೋಣ’ ಬಿಡುಗಡೆ ಆದಾಗಿನಿಂದ ನಟ ಕಿಚ್ಚ ಸುದೀಪ್ (Kichcha Sudeep) ಅವರಿಗೆ ಈ ಪ್ರಶ್ನೆ ಸದಾ ಎದುರಾಗುತ್ತಿತ್ತು. ಸುದೀಪ್ ನಟನೆಯ 46ನೇ (Kichcha 46) ಚಿತ್ರದ ಕುರಿತು ಆ ಪರಿ ಕುತೂಹಲ ಸೃಷ್ಟಿ ಆಗಿದೆ. ಆದರೆ ಆ ಬಗ್ಗೆ ಅಪ್ಡೇಟ್ ನೀಡುವಲ್ಲಿ ಸುದೀಪ್ ಅವರು ಅವಸರ ತೋರಿಸಿಲ್ಲ. ‘ವಿಕ್ರಾಂತ್ ರೋಣ’ ಬಿಡುಗಡೆ ಬಳಿಕ ಅವರು ಒಂದು ಬ್ರೇಕ್ ತೆಗೆದುಕೊಂಡರು. ಕ್ರಿಕೆಟ್ ಆಡುತ್ತಾ ಕಾಲ ಕಳೆದರು. ಈಗ ಅಭಿಮಾನಿಗಳ ಪ್ರಶ್ನೆಗೆ ಸುದೀಪ್ ಉತ್ತರ ನೀಡಿದ್ದಾರೆ. ಮುಂದಿನ ಮೂರು ಸಿನಿಮಾಗಳ (Sudeep Next Movie) ಕುರಿತು ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಇದನ್ನು ಕೇಳಿ ಅಭಿಮಾನಿಗಳ ಕೌತುಕ ಇನ್ನಷ್ಟು ಹೆಚ್ಚಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ಗಾಗಿ ಕಿಚ್ಚ ಸುದೀಪ್ ಒಂದು ಪತ್ರ ಬರೆದಿದ್ದಾರೆ.
ಸುದೀಪ್ ಬರೆದ ಪತ್ರದಲ್ಲಿ ಏನಿದೆ?
‘ನೀವೆಲ್ಲರೂ ನನ್ನ ಮುಂದಿನ ಸಿನಿಮಾವನ್ನು ‘ಕಿಚ್ಚ 46’ ಎಂದು ಕರೆಯುತ್ತಿದ್ದೀರಿ. ಅದರ ಬಗ್ಗೆ ನೀವು ಟ್ವೀಟ್ಸ್ ಮತ್ತು ಮೀಮ್ಸ್ ಮಾಡುತ್ತಿರುವುದು ನನಗೆ ಸ್ಪೆಷಲ್ ಎನಿಸುತ್ತದೆ. ಅದಕ್ಕಾಗಿ ಧನ್ಯವಾದಗಳು’ ಎಂದು ಸುದೀಪ್ ಅವರು ಪತ್ರ ಆರಂಭಿಸಿದ್ದಾರೆ. ಇಷ್ಟು ದಿನ ತಾವು ಬ್ರೇಕ್ ತೆಗೆದುಕೊಂಡಿದ್ದು ಯಾಕೆ ಎಂಬುದನ್ನು ಕೂಡ ಅವರ ವಿವರಿಸಿದ್ದಾರೆ.
Kichcha Sudeep: ಕಿಚ್ಚ ಸುದೀಪ್ ಮನೆಯಲ್ಲಿ ಚಾಹಲ್, ಪೃಥ್ವಿ ಶಾ
ಇದೇ ನನ್ನ ಮೊದಲ ಬ್ರೇಕ್:
‘ನಾನು ಬ್ರೇಕ್ ತೆಗೆದುಕೊಂಡೆ. ಇದು ನನ್ನ ಮೊದಲ ಬ್ರೇಕ್. ತುಂಬ ಶ್ರಮವಹಿಸಿ, ಬಹಳ ಸಮಯ ತೆಗೆದುಕೊಂಡು ವಿಕ್ರಾಂತ್ ರೋಣ ಶೂಟಿಂಗ್ ಮಾಡಿದ್ದರಿಂದ ಹಾಗೂ ಸತತವಾಗಿ ಬಿಗ್ಬಾಸ್ ಒಟಿಟಿ ಮತ್ತು ಟಿವಿ ಸೀಸನ್ನಲ್ಲಿ ಪಾಲ್ಗೊಂಡಿದ್ದರಿಂದ ವಿಕ್ರಾಂತ್ ರೋಣ ಸಿನಿಮಾ ಬಳಿಕ ಈ ಬ್ರೇಕ್ನ ಅವಶ್ಯಕತೆ ಇತ್ತು. ನನ್ನನ್ನು ಹೆಚ್ಚು ಖುಷಿಯಾಗಿಸುವ ರೀತಿಯಲ್ಲಿ ಈ ದಿನಗಳನ್ನು ಕಳೆಯಬೇಕು ಎನಿಸಿತು. ಕ್ರಿಕೆಟ್ನಿಂದ ನನಗೆ ರಿಲ್ಯಾಕ್ಸ್ ಸಿಗುತ್ತದೆ. ಕೆಸಿಸಿಯಲ್ಲಿ ತೊಡಗಿಕೊಂಡು ಸಮಯ ಕಳೆದಿದ್ದು ತುಂಬ ಖುಷಿ ನೀಡಿತು’ ಎಂದು ಸುದೀಪ್ ಬರೆದುಕೊಂಡಿದ್ದಾರೆ.
About my Next ❤️? pic.twitter.com/3vkCmS6FBF
— Kichcha Sudeepa (@KicchaSudeep) April 2, 2023
ಮೂರು ಹೊಸ ಸಿನಿಮಾಗಳ ಬಗ್ಗೆ ಅಪ್ಡೇಟ್:
‘ಬ್ರೇಕ್ನಲ್ಲಿ ಹೊಸ ಸ್ಕ್ರಿಪ್ಟ್ ಬಗ್ಗೆ ಚರ್ಚೆ ಮತ್ತು ಮೀಟಿಂಗ್ಗಳು ಪ್ರತಿದಿನದ ಕೆಲಸ ಆಗಿತ್ತು. ಮೂರು ಸ್ಕ್ರಿಪ್ಟ್ಗಳನ್ನು ಫೈನಲ್ ಮಾಡಿದ್ದೇನೆ. ಅಂದರೆ, 3 ಸಿನಿಮಾಗಳನ್ನು ಆಯ್ಕೆ ಮಾಡಿದ್ದೇನೆ. ಇವುಗಳಿಗೆ ದೊಡ್ಡ ಮಟ್ಟದ ತಯಾರಿ ಬೇಕು. ಮೂರೂ ಚಿತ್ರಗಳಿಗೆ ಹೋಮ್ವರ್ಕ್ ನಡೆಯುತ್ತಿದೆ. ಆ ತಂಡದವರು ಹಗಲು-ರಾತ್ರಿ ಕೆಲಸ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅನೌನ್ಸ್ ಮಾಡುತ್ತೇನೆ’ ಎಂದು ಸುದೀಪ್ ಅವರು ಪತ್ರ ಪೂರ್ಣಗೊಳಿಸಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:26 pm, Sun, 2 April 23