ಮೊದಲ ಸಿನಿಮಾ ಸೋತಾಗ ಕಿರುತೆರೆಯತ್ತ ಮುಖ ಮಾಡಿದ್ದ ಸುದೀಪ್

Kichcha Sudeep Birthday: ಕಿಚ್ಚ ಸುದೀಪ್ ಅವರಿಗೆ ಜನ್ಮದಿನ. ಈ ಕಾರಣಕ್ಕೆ ಎಲ್ಲರೂ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಹೊಸ ಸಿನಿಮಾಗಳ ಅನೌನ್ಸ್​ಮೆಂಟ್ ಕೂಡ ನಡೆಯುತ್ತಿದೆ. ರಮೇಶ್ ಅರವಿಂದ್ ಜೊತೆ ಸುದೀಪ್ ಸಂದರ್ಶನ ನೀಡಿದ್ದರು. ಆ ಸಂದರ್ಶನದಲ್ಲಿ ಸುದೀಪ್ ಅವರು ಹಳೆಯ ಘಟನೆ ವಿವರಿಸಿದ್ದರು.

ಮೊದಲ ಸಿನಿಮಾ ಸೋತಾಗ ಕಿರುತೆರೆಯತ್ತ ಮುಖ ಮಾಡಿದ್ದ ಸುದೀಪ್
ಸುದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Sep 02, 2024 | 7:12 AM

ಕಿಚ್ಚ ಸುದೀಪ್ ಅವರು ಹೀರೋ ಆಗಿ ಕನ್ನಡ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ. ಅವರು ಚಿತ್ರರಂಗಕ್ಕೆ ಬಂದು 28 ವರ್ಷಗಳು ತುಂಬಿವೆ ಅನ್ನೋದು ಸಾಧನೆಯೇ ಸರಿ. ಸುದೀಪ್​ಗೆ ಇಂದು (ಸೆಪ್ಟೆಂಬರ್ 2) ಜನ್ಮದಿನ. ಅವರು ಸಾಕಷ್ಟು ಕಷ್ಟದಿಂದ ಮೇಲೆ ಬಂದವರು. ಅವರು ದೃಢವಾಗಿ ನಿಲ್ಲಲು ಹಾಕಿದ ಶ್ರಮ ತುಂಬಾನೇ ದೊಡ್ಡದು. ಸುದೀಪ್ ಸಿನಿಮಾ ಮಾಡಿದ್ದು ಹೇಗೆ? ಮೊದಲ ಆಫರ್ ಸಿಕ್ಕಿದ್ದು ಹೇಗೆ ಎಂಬ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಅವರು ಮಾತನಾಡಿದ್ದರು.

ರಮೇಶ್ ಅರವಿಂದ್ ಜೊತೆ ಸುದೀಪ್ ಸಂದರ್ಶನ ನೀಡಿದ್ದರು. ಆ ಸಂದರ್ಶನದಲ್ಲಿ ಸುದೀಪ್ ಅವರು ಹಳೆಯ ಘಟನೆ ವಿವರಿಸಿದ್ದರು. ಸುದೀಪ್ ನಟಿಸಿದ ಮೊದಲ ಸಿನಿಮಾ ‘ತಂಗ್ಯವ್ವ’. ಈ ಚಿತ್ರ ರಿಲೀಸ್ ಆಗಿದ್ದು 1997ರಲ್ಲಿ. ಈ ಸಿನಿಮಾ ಒಂದುವಾರವೂ ಓಡಿರಲಿಲ್ಲ. ಹೀಗಾಗಿ, ಸುದೀಪ್ ಒಂದು ಬ್ರೇಕ್ ತೆಗೆದುಕೊಂಡರು. ಧಾರಾವಾಹಿಗಳತ್ತ ಮುಖ ಮಾಡಿದರು. ಆ ಬಳಿಕ ಅವರು ಮತ್ತೆ ಬಂದಿದ್ದು ‘ಪ್ರತ್ಯರ್ಥ’ ಚಿತ್ರದ ಮೂಲಕ.

ನಿರ್ದೇಶಕ ಸುನಿಲ್ ಕುಮಾರ್ ದೇಸಾಯಿ ಅವರ ಮನೆಗೆ ಬಂದು ಸುದೀಪ್ ಫೋಟೋ ಕೊಟ್ಟು ಹೋದರು. ಅವರು ಸಿನಿಮಾದಲ್ಲಿ ನಟಿಸಲು ಆಫರ್ ಕೇಳಿದರು. ಸುನಿಲ್ ಅವರು ಹೇಳುತ್ತೇನೆ ಎಂದು ಕಳುಹಿಸಿದರು. ಮರುದಿನವೇ ಸುದೀಪ್​ಗೆ ಕರೆಬಂತು. ಸುದೀಪ್ ಖುಷಿಯಿಂದ ಸುನಿಲ್ ಕುಮಾರ್ ದೇಸಾಯಿ ಮನೆಗೆ ಬಂದರು. ‘ನೀವು ಸಂಜಯ್ ಅವರ ಮಗನಾ? ಏಕೆ ಹೇಳಿಲ್ಲ’ ಎಂದು ಸುದೀಪ್ ಬಳಿ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಸುದೀಪ್ ಅವರು, ‘ಅವರು ಇದ್ಯಾವುದಕ್ಕೂ ಬರಲ್ಲ. ನಾನೇ ನಟಿಸೋದು’ ಎಂದು ನೇರ ಮಾತುಗಳಲ್ಲಿ ಹೇಳಿದ್ದರು.

‘ಹುಚ್ಚ’ ಸಿನಿಮಾ ಮೆಚ್ಚುಗೆ ಪಡೆಯುವುದಕ್ಕೂ ಮೊದಲು ಸುದೀಪ್ ಅವರು ಬೇಸರಗೊಂಡಿದ್ದರು. ಅವರ ನಟನೆಯ ಯಾವ ಸಿನಿಮಾಗಳೂ ಗೆಲುವು ಕಾಣುತ್ತಾ ಇರಲಿಲ್ಲ ಅನ್ನೋದು ಬೇಸರಕ್ಕೆ ಕಾರಣ ಆಗಿತ್ತು ಎನ್ನಬಹುದು. ‘ಹುಚ್ಚ’ ರಿಲೀಸ್ ಆದ ಬಳಿಕ ಅವರು ‘ಪ್ರಸನ್ನ’ ಥಿಯೇಟರ್​ಗೆ ಹೋಗಿದ್ದರು. ಅಂದು ಜನರು ಮುತ್ತಿಕೊಂಡಿದ್ದರು. ಆಗ ಅವರಿಗೆ ಸ್ಟಾರ್​ಡಂ ಸಿಕ್ಕ ಭಾವನೆ ಬಂದಿತ್ತು.

ಇದನ್ನೂ ಓದಿ: ಬಿಗ್ ಬಾಸ್ ಪ್ರೋಮೋ ರಿಲೀಸ್; ಕಿಚ್ಚ ಸುದೀಪ್​ ಇರ್ತಾರಾ, ಇರಲ್ವಾ? ಸ್ಪಷ್ಟಪಡಿಸಿದ ಕಲರ್ಸ್

ಕಿಚ್ಚ ಸುದೀಪ್ ಅವರು ಇಷ್ಟು ವರ್ಷ ಒಂದೇ ಸಿನಿಮಾಗಳ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಆದರೆ, ಈ ಬಾರಿ ಅವರು ಈ ನಿಯಮ ಮುರಿಯುತ್ತಿದ್ದಾರೆ. ಅವರು ಇನ್ನುಮುಂದೆ ಮೂರ್ನಾಲ್ಕು ಸಿನಿಮಾಗಳನ್ನು ಮಾಡಲಿದ್ದಾರಂತೆ. ಸುದೀಪ್ ಜನ್ಮದಿನದ ಪ್ರಯುಕ್ತ ಹಲವು ಸಿನಿಮಾಗಳ ಬಗ್ಗೆ ಅಪ್​ಡೇಟ್ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.