‘ನಾ ಕಂಡ ಕನಸನ್ನು ಸುದೀಪ್ ಈಡೇರಿಸಿದ್ದಾನೆ’; ಸಂಜೀವ್ ಖುಷಿಯಿಂದ ಹೇಳಿದ್ದ ಮಾತಿದು

ಸುದೀಪ್​ಗೆ ಇಂದು (ಸೆಪ್ಟೆಂಬರ್ 2) ಜನ್ಮದಿನ. ಅವರು ಫ್ಯಾನ್ಸ್ ಭೇಟಿ ಮಾಡಿದ್ದಾರೆ.ಅವರು ಚಿತ್ರರಂಗಕ್ಕೆ ಬಂದು 28 ವರ್ಷಗಳು ತುಂಬಿವೆ. ಅವರಿಗೆ ಆರಂಭದಲ್ಲಿ ಬೆಂಬಲವಾಗಿ ನಿಂತಿದ್ದು ಅವರ ತಂದೆ. ತಂದೆಯ ಬಗ್ಗೆ ಅವರು ಹೆಮ್ಮೆಯಿಂದ ಮಾತನಾಡಿದ್ದರು.

‘ನಾ ಕಂಡ ಕನಸನ್ನು ಸುದೀಪ್ ಈಡೇರಿಸಿದ್ದಾನೆ’; ಸಂಜೀವ್ ಖುಷಿಯಿಂದ ಹೇಳಿದ್ದ ಮಾತಿದು
‘ನಾ ಕಂಡ ಕನಸನ್ನು ಸುದೀಪ್ ಈಡೇರಿಸಿದ್ದಾನೆ’; ಸಂಜೀವ್ ಖುಷಿಯಿಂದ ಹೇಳಿದ್ದ ಮಾತಿದು
Follow us
| Updated By: ರಾಜೇಶ್ ದುಗ್ಗುಮನೆ

Updated on: Sep 02, 2024 | 8:58 AM

ಕಿಚ್ಚ ಸುದೀಪ್ ಅವರು ಕನ್ನಡದ ಸ್ಟಾರ್ ಹೀರೋ ಆಗಿದ್ದಾರೆ. ಅವರು ಚಿತ್ರರಂಗದಲ್ಲಿ 28 ವರ್ಷ ಕಳೆದಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಆರಂಭದಲ್ಲಿ ಸಾಕಷ್ಟು ಏರಿಳಿತ ಕಂಡ ಅವರು ಈಗ ಬೇಡಿಕೆಯ ನಟ ಎನಿಸಿಕೊಂಡಿದ್ದಾರೆ. ಪರಭಾಷೆಯಲ್ಲೂ ಅವರಿಗೆ ಬೇಡಿಕೆ ಇದೆ. ರಾಜಮೌಳಿ ಅವರಂಥ ಸ್ಟಾರ್ ನಿರ್ದೇಶಕರ ಜೊತೆಗೂಡಿ ಅವರು ಸಿನಿಮಾ ಮಾಡಿದ್ದಾರೆ. ಸುದೀಪ್ ಅವರ ಬಗ್ಗೆ ಈ ಮೊದಲು ಸಂಜೀವ್ ಮಾತನಾಡಿದ್ದರು. ಅವರು ಮಗನ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದರು.

ಸಂಜೀವ್ ಅವರು ಹೋಟೆಲ್ ಉದ್ಯಮ ಹೊಂದಿದ್ದರು. ಈ ಹೋಟೆಲ್​ಗೆ ಅನೇಕ ಸೆಲೆಬ್ರಿಟಿಗಳು ಬರುತ್ತಿದ್ದರು. ಹೀಗಾಗಿ, ಚಿತ್ರರಂಗದ ಕಲಾವಿದರ ಜೊತೆ ಅವರಿಗೆ ನಂಟು ಬೆಳೆದಿತ್ತು. ಆಗೆಲ್ಲ ‘ಸಂಜೀವ್ ಅವರ ಮಗ ಸುದೀಪ್’ ಎನ್ನುತ್ತಿದ್ದರು. ಈಗ ಅನೇಕರು ‘ಸುದೀಪ್ ತಂದೆ ಸಂಜೀವ್’ ಎನ್ನುತ್ತಾರೆ. ಈ ವಿಚಾರದಲ್ಲಿ ಸಂಜೀವ್ ಅವರಿಗೆ ಖುಷಿ ಇದೆ. ಆದರೆ, ಇದನ್ನು ಒಪ್ಪಲು ಸುದೀಪ್ ರೆಡಿ ಇಲ್ಲ.

‘ಈತರಹದ ಆಸೆ ಎಲ್ಲ ತಂದೆಗಳಿಗೂ ಇರುತ್ತದೆ. ಕೆಲವರು ಡಿಸಪಾಯಿಂಟ್ ಮಾಡುತ್ತಾರೆ. ದೇವರ ದಯೆಯಿಂದ ನನ್ನ ಮಗ ನನ್ನ ಆಸೆಯನ್ನು ಈಡೇರಿಸಿದ್ದಾನೆ’ ಎಂದು ಸಂಜೀವ್ ಅವರು ಹೇಳಿಕೊಂಡಿದ್ದರು. ಆದರೆ, ಇದನ್ನು ಸುದೀಪ್ ಒಪ್ಪಿಲ್ಲ. ‘ಕನ್ನಡ ಚಿತ್ರರಂಗದ ಅಭಿಮಾನಿಗಳು, ಥಿಯೇಟರ್​ಗೆ ಬರೋ ವೀಕ್ಷಕರಿಗೆ ಮಾತ್ರ ಇದು ಸೀಮಿತ. ಇದೇ ಪ್ರಪಂಚ ಅಲ್ಲ. ಇದನ್ನು ಬಿಟ್ಟು ಬೇರೆ ಜಗತ್ತು ಇದೆ. ಅನೇಕರು ಈಗಲೂ ಸಂಜು ಮಗ ಸುದೀಪ್ ಎಂದು ನನ್ನನ್ನು ಗುರುತಿಸುತ್ತಾರೆ’ ಎಂದಿದ್ದರು ಸುದೀಪ್.

ಇದನ್ನೂ ಓದಿ: ಸುದೀಪ್ ಜನ್ಮದಿನ: ‘ಅಪ್ಪಂಗೆ ಹುಟ್ಟಿದ್ರೆ ತೊಡೆತಟ್ಟಿ ಬಾರೋ’ ಎಂದ ಮ್ಯಾಕ್ಸ್​

ಸುದೀಪ್​ಗೆ ತಂದೆ ಗಾಡ್ ಫಾದರಾ? ಈ ಪ್ರಶ್ನೆಗೆ ಸುದೀಪ್ ಅವರು ಉತ್ತರ ನೀಡಿದ್ದರು. ‘ನನಗೆ ಅವರು ಫಾದರ್ ಅಷ್ಟೇ. ಯಾರೋ ಸಂಬಂಧವೇ ಇಲ್ಲದವರು ಬಂದು ನಮ್ಮನ್ನು ಬೆಳೆಸಿದರೆ ಅವರು ಗಾಡ್ ಫಾದರ್ ಆಗುತ್ತಾರೆ’ ಎಂದಿದ್ದರು ಅವರು. ಸುದೀಪ್ ಅವರು ಮೊದಲು ಸಿನಿಮಾ ರಂಗಕ್ಕೆ ಕಾಲಿಡುತ್ತೇನೆ ಎಂದಾಗ ಅವರ ತಂದೆ ಬೇಡ ಎಂದು ಹೇಳಲಿಲ್ಲ. ಅವರು ಚಿತ್ರರಂಗಕ್ಕೆ ಹೋಗುತ್ತೇನೆ ಎಂದಾಗ ಒಪ್ಪಿಗೆ ಕೊಟ್ಟರು. ಆದರೆ, ತಂದೆಯ ಹೆಸರನ್ನು ಬಳಕೆ ಮಾಡಿಕೊಳ್ಳದೆ ಸುದೀಪ್ ಗೆದ್ದರು ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.