ನಟ ಕಿಚ್ಚ ಸುದೀಪ್ (Kichcha Sudeep) ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ‘ವಿಕ್ರಾಂತ್ ರೋಣ’ ಬಳಿಕ ಅವರ ಹೊಸ ಸಿನಿಮಾ ಯಾವುದು ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಅವರ ಅಭಿಮಾನಿಗಳಿಗೆ ಮೂಡಿದೆ. ಈ ನಡುವೆ ರಾಜಕೀಯದ ವಿಚಾರದಲ್ಲಿ ಸುದೀಪ್ ಹೆಸರು ತಳುಕುಹಾಕಿಕೊಂಡಿದೆ. ಶೀಘ್ರದಲ್ಲೇ ಕರ್ನಾಟಕದ ರಾಜಕೀಯಕ್ಕೆ ಕಿಚ್ಚ ಎಂಟ್ರಿ (Sudeep Politics Entry)ನೀಡಲಿದ್ದಾರೆ ಎಂಬ ಗುಸುಗುಸು ಹಬ್ಬಿದೆ. ಅವರು ಕಾಂಗ್ರೆಸ್ ಪಾರ್ಟಿ (Congress Party) ಜೊತೆ ಕೈ ಜೋಡಿಸುತ್ತಾರೆ ಎಂದೆಲ್ಲ ವರದಿಗಳು ಪ್ರಕಟ ಆಗಿವೆ. ಈ ಕುರಿತಾಗಿ ಸ್ವತಃ ಸುದೀಪ್ ಅವರು ಪ್ರತಿಕ್ರಿಯೆ ನೀಡಲಿ ಎಂದು ಅನೇಕರು ನಿರೀಕ್ಷಿಸುತ್ತಿದ್ದಾರೆ. ಆದರೆ ಸುದೀಪ್ ಅವರಿಂದ ಈವರೆಗೂ ಯಾವುದೇ ಸ್ಪಷ್ಟನೆ ಸಿಕ್ಕಿಲ್ಲ. ರಾಜಕೀಯದ ಎಂಟ್ರಿ ಕುರಿತು ಮಾತನಾಡಲು ಅವರು ನಿರಾಕರಿಸಿದ್ದಾರೆ.
ಬೆಂಗಳೂರಿನಲ್ಲಿ ಹೊಸ ಮಲ್ಟಿಪ್ಲೆಕ್ಸ್ ಅನ್ನು ಕಿಚ್ಚ ಸುದೀಪ್ ಅವರು ಇಂದು (ಜ.12) ಉದ್ಘಾಟಿಸಿದ್ದಾರೆ. ಈ ವೇಳೆ ಶಾಸಕರಾದ ಸತೀಶ್ ರೆಡ್ಡಿ ಮತ್ತು ರಾಮಲಿಂಗ ರೆಡ್ಡಿ ಜೊತೆಗಿದ್ದರು. ಸುದೀಪ್ ಅವರ ಆಪ್ತರಾದ ಜಾಕ್ ಮಂಜು ಕೂಡ ಸಾಥ್ ನೀಡಿದ್ದರು. ಈ ಸಮಯದಲ್ಲಿ ರಾಜಕೀಯದ ಎಂಟ್ರಿ ಬಗ್ಗೆ ಮಾಧ್ಯಮದವರಿಂದ ಸುದೀಪ್ ಅವರಿಗೆ ಪ್ರಶ್ನೆ ಎದುರಾಯಿತು. ಆದರೆ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಹೊಸ ಮಲ್ಟಿಪ್ಲೆಕ್ಸ್ ಕುರಿತಾಗಿ ಮಾತ್ರ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: Kichcha Sudeep: ತಮಿಳು ನಿರ್ಮಾಪಕರ ಜೊತೆ ಕಿಚ್ಚ ಸುದೀಪ್ ಸಿನಿಮಾ; ಕೇಳಿಬಂತು ಬಿಗ್ ನ್ಯೂಸ್
ಸುದೀಪ್ ಅವರಿಂದ ಅನೇಕ ಸಮಾಜಮುಖಿ ಕಾರ್ಯಗಳು ಆಗಿವೆ. ನಟನೆ ಮಾತ್ರವಲ್ಲದೆ ಜನಪರ ಕಾಳಜಿಯನ್ನು ತೋರಿಸಿದ ಕಾರಣದಿಂದಲೂ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಕಿಚ್ಚ ಸುದೀಪ್ ಅವರ ಮಾತನ್ನು ಗೌರವದಿಂದ ಪಾಲಿಸುವ ಸಾಕಷ್ಟು ಜನರಿದ್ದಾರೆ. ಅದೇನೇ ಇದ್ದರೂ ಸುದೀಪ್ ಅವರು ರಾಜಕೀಯದಿಂದ ದೂರ ಉಳಿದುಕೊಂಡಿದ್ದಾರೆ. ಈಗ ಅವರು ರಾಜಕೀಯಕ್ಕೆ ಬರುತ್ತಾರೆ ಎಂಬ ಸುದ್ದಿ ಕೇಳಿಬಂದಿರುವುದು ಅಚ್ಚರಿ ಮೂಡಿಸಿದೆ.
ಇದನ್ನೂ ಓದಿ: Kichcha Sudeep: ಫಿನಾಲೆ ವೇದಿಕೆಯಲ್ಲಿ ಕಣ್ಣೀರು ಹಾಕಿದ ಸುದೀಪ್; ಬಿಗ್ ಬಾಸ್ ಶೋನಲ್ಲಿ ಅಂಥದ್ದೇನಾಯ್ತು?
ಸೆಲೆಬ್ರಿಟಿ ಆದ್ದರಿಂದ ಕಿಚ್ಚ ಸುದೀಪ್ ಅವರಿಗೆ ಅನೇಕ ರಾಜಕಾರಣಿಗಳ ಜೊತೆ ಒಡನಾಟ ಇರುವುದು ಸಹಜ. ಆದರೆ ಎಂದಿಗೂ ಸುದೀಪ್ ಅವರು ನೇರವಾಗಿ ರಾಜಕೀಯಕ್ಕೆ ಇಳಿದಿಲ್ಲ. ಈಗ ಅವರ ಮನವೊಲಿಸಲು ಹಲವು ಪ್ರಯತ್ನಗಳು ನಡೆಯುತ್ತಿವೆ ಎಂದೆಲ್ಲ ಹೇಳಲಾಗುತ್ತಿದೆ. ಆದರೆ ಆ ಎಲ್ಲ ಅಂತೆಕಂತೆಗಳಿಗೆ ಪುರಾವೆ ಸಿಕ್ಕಿಲ್ಲ.
ಕಿಚ್ಚ ಸುದೀಪ್ ಅವರ ಮುಂದಿನ ಸಿನಿಮಾಗಾಗಿ ಅಭಿಮಾನಿಗಳು ಕಾದಿದ್ದಾರೆ. ಆದಷ್ಟು ಬೇಗ ಅವರ ಹೊಸ ಸಿನಿಮಾ ಅನೌನ್ಸ್ ಆಗಲಿ ಎಂಬುದು ಫ್ಯಾನ್ಸ್ ಬಯಕೆ. ‘ವಿಕ್ರಾಂತ್ ರೋಣ’ ಚಿತ್ರ ಆಸ್ಕರ್ ಪ್ರಶಸ್ತಿ ಪಡೆಯಲು ಪ್ರಯತ್ನಿಸುತ್ತಿದೆ. ಅದು ಕಿಚ್ಚನ ಅಭಿಮಾನಿಗಳಿಗೆ ಹೆಮ್ಮೆ ತಂದಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:54 pm, Thu, 12 January 23