Kichcha Sudeep: ​ತಮಿಳು ನಿರ್ಮಾಪಕರ ಜೊತೆ ಕಿಚ್ಚ ಸುದೀಪ್​ ಸಿನಿಮಾ; ಕೇಳಿಬಂತು ಬಿಗ್​ ನ್ಯೂಸ್​

Kichcha Sudeep Next Movie: ಕಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆ ಜೊತೆಗೆ ಕಿಚ್ಚ ಸುದೀಪ್​ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ಬಗ್ಗೆ ಇಲ್ಲಿದೆ ವಿವರ..

Kichcha Sudeep: ​ತಮಿಳು ನಿರ್ಮಾಪಕರ ಜೊತೆ ಕಿಚ್ಚ ಸುದೀಪ್​ ಸಿನಿಮಾ; ಕೇಳಿಬಂತು ಬಿಗ್​ ನ್ಯೂಸ್​
ಕಿಚ್ಚ ಸುದೀಪ್
Follow us
TV9 Web
| Updated By: ಮದನ್​ ಕುಮಾರ್​

Updated on: Dec 06, 2022 | 11:49 AM

ನಟ ಕಿಚ್ಚ ಸುದೀಪ್​ (Kichcha Sudeep) ಅವರ ಮುಂದಿನ ಸಿನಿಮಾ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಕಾದಿದ್ದಾರೆ. ಈ ವರ್ಷ ಅವರು ನಟಿಸಿದ ‘ವಿಕ್ರಾಂತ್​ ರೋಣ’ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಯಿತು. ಆ ಬಳಿಕ ಅವರು ಹೊಸ ಸಿನಿಮಾ (Kichcha Sudeep New Movie) ಬಗ್ಗೆ ಯಾವುದೇ ಅನೌನ್ಸ್​ಮೆಂಟ್​ ಮಾಡಿಲ್ಲ. ಈಗ ಒಂದು ಸ್ಪೆಷಲ್​ ನ್ಯೂಸ್​ ಕೇಳಿಬಂದಿದೆ. ಕಿಚ್ಚ ಸುದೀಪ್​ ನಟಿಸಲಿರುವ ಹೊಸ ಚಿತ್ರಕ್ಕೆ ಕಾಲಿವುಡ್​ (Kollywood) ನಿರ್ಮಾಪಕರು ಬಂಡವಾಳ ಹೂಡಲಿದ್ದಾರೆ ಎನ್ನಲಾಗಿದೆ. ಇದು ಕೂಡ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗಲಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ತಮಿಳು ಚಿತ್ರರಂಗದ ದೊಡ್ಡ ನಿರ್ಮಾಣ ಸಂಸ್ಥೆ ಜೊತೆ ಕಿಚ್ಚ ಸುದೀಪ್​ ಕೈ ಜೋಡಿಸುವ ಸಾಧ್ಯತೆ ಕುರಿತು ‘ಟೈಮ್ಸ್ ಆಫ್​ ಇಂಡಿಯಾ’ ವರದಿ ಮಾಡಿದೆ.

ಇದು ಪ್ಯಾನ್​ ಇಂಡಿಯಾ ಸಿನಿಮಾಗಳ ಜಮಾನಾ. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಬಹುಕೋಟಿ ರೂಪಾಯಿ ಬಂಡವಾಳ ಸುರಿದು ಹಲವು ಭಾಷೆಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುತ್ತಿವೆ. ಎಲ್ಲ ಸ್ಟಾರ್ ನಟರ ಸಿನಿಮಾಗಳು ಇದೇ ಮಾದರಿಯಲ್ಲಿ ತಯಾರಾಗುತ್ತಿವೆ. ಇತ್ತೀಚೆಗೆ ತಮಿಳುನಲ್ಲಿ ‘ಪೊನ್ನಿಯಿನ್​ ಸೆಲ್ವನ್​’ ಚಿತ್ರ ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆಯಿತು. ಆ ಚಿತ್ರದ ನಿರ್ಮಾಪಕರ ಜೊತೆ ಸುದೀಪ್​ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಕೇಳಿಬಂದಿದೆ.

ಇದನ್ನೂ ಓದಿ: Kichcha Sudeep: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಸುದೀಪ್​-ಪ್ರಿಯಾ ದಂಪತಿ

ಇದನ್ನೂ ಓದಿ
Image
ಮುಖ ತೋರಿಸದೇ ಫೇಮಸ್​ ಆದ ಭಾಸ್ಕರ್​; ಕಿಚ್ಚ ಸುದೀಪ್​ ಬದುಕಿನಲ್ಲೂ ಇದ್ದಾನೆ ಅಂಥ ಒಬ್ಬ ವ್ಯಕ್ತಿ
Image
Kichcha Sudeep: ‘ಕನ್ನಡ್​’ ಎಂದರೆ ಸಹಿಸಲ್ಲ ಸುದೀಪ್​; ಹಿಂದಿ ಮಂದಿಗೆ ಕಿಚ್ಚ ಖಡಕ್​ ತಿರುಗೇಟು ನೀಡಿದ ವಿಡಿಯೋ ವೈರಲ್​
Image
Bigg Boss OTT: ಬಿಗ್​​ ಬಾಸ್​ ಶೋ ಹಿಂದೆ ಸುದೀಪ್​ಗೆ ಹಲವು ಚಾಲೆಂಜ್​; ವೇದಿಕೆಯಲ್ಲಿ ಎಲ್ಲವನ್ನೂ ವಿವರಿಸಿದ ಕಿಚ್ಚ
Image
Kichcha Sudeep: ಕಿಚ್ಚನ ಹೃದಯವಂತಿಕೆ; ಹಾರ್ಟ್​ ಸಮಸ್ಯೆ ಹೊಂದಿರುವ ಪುಟ್ಟ ಬಾಲಕನನ್ನು ಭೇಟಿಯಾದ ಸುದೀಪ್​

ತಮಿಳಿನಲ್ಲಿ ‘ಲೈಕಾ ಪ್ರೊಡಕ್ಷನ್ಸ್​’ ಸಂಸ್ಥೆ ಸಾಕಷ್ಟು ಖ್ಯಾತಿ ಹೊಂದಿದೆ. ರಜನಿಕಾಂತ್​ ನಟನೆಯ ‘2.0’, ದಳಪತಿ ವಿಜಯ್​ ನಟನೆಯ ‘ಕತ್ತಿ’, ಬಹುತಾರಾಗಣದ ‘ಪೊನ್ನಿಯಿನ್​ ಸೆಲ್ವನ್​’ ಮುಂತಾದ ಚಿತ್ರಗಳು ಈ ಬ್ಯಾನರ್​ನಿಂದ ನಿರ್ಮಾಣ ಆಗಿವೆ. ಕಮಲ್​ ಹಾಸನ್​ ನಟನೆಯ ‘ಇಂಡಿಯನ್​ 2’ ಸಿನಿಮಾ ಕೂಡ ಇದೇ ಸಂಸ್ಥೆಯಡಿಯಲ್ಲಿ ತಯಾರಾಗುತ್ತಿದೆ. ಕೆಲವು ತೆಲುಗು ಚಿತ್ರಗಳನ್ನೂ ಮಾಡಿರುವ ಈ ಸಂಸ್ಥೆ ಈಗ ಕನ್ನಡಕ್ಕೆ ಎಂಟ್ರಿ ನೀಡುತ್ತಿದೆ.

ಇದನ್ನೂ ಓದಿ: Kichcha Sudeep: ಪಿವಿಆರ್​ ಹೊಸ ಮಲ್ಟಿಪ್ಲೆಕ್ಸ್​ ಆವರಣದಲ್ಲಿ ಕನ್ನಡ ನಟರ ಫೋಟೋ ಇಲ್ಲ; ಸುದೀಪ್​ ಪ್ರತಿಕ್ರಿಯೆ ಏನು?

ಸುದೀಪ್​ ಅವರ ಹೊಸ ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ? ನಿರ್ದೇಶನ ಮಾಡೋದು ಯಾರು? ತೆರೆ ಹಿಂದೆ ಕೆಲಸ ಮಾಡಲಿರುವ ತಂತ್ರಜ್ಞರು ಯಾರು? ಸದ್ಯ ಈ ಯಾವ ಪ್ರಶ್ನೆಗಳಿಗೂ ಉತ್ತರ ಸಿಕ್ಕಿಲ್ಲ. 2023ರ ಜನವರಿಯಲ್ಲಿ ಈ ಚಿತ್ರ ಸೆಟ್ಟೇರುವ ನಿರೀಕ್ಷೆ ಇದೆ ಎನ್ನಲಾಗಿದೆ. ಸುದೀಪ್​ ಅವರು ಸದ್ಯ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ ಶೋ ನಡೆಸಿಕೊಡುತ್ತಿದ್ದಾರೆ. ಅದು ಜನವರಿಗೆ ವೇಳೆಗೆ ಮುಕ್ತಾಯ ಆಗಲಿದೆ. ಆ ಬಳಿಕ ಹೊಸ ಚಿತ್ರದ ಕೆಲಸಗಳಲ್ಲಿ ಸುದೀಪ್​ ತೊಡಗಿಕೊಳ್ಳಲಿದ್ದಾರೆ ಎಂದು ವರದಿ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.