Rajkumari Song: ‘ವಿಕ್ರಾಂತ್ ರೋಣ’ ಚಿತ್ರದ ಎರಡನೇ ಸಾಂಗ್ ರಿಲೀಸ್; ಹೇಗಿದೆ ನೋಡಿ ಹೊಸ ಹಾಡು

| Updated By: ರಾಜೇಶ್ ದುಗ್ಗುಮನೆ

Updated on: Jul 02, 2022 | 5:19 PM

ಕನ್ನಡದಲ್ಲಿ ‘Lullaby Song - Rajkumari' ಹಾಡು ಜುಲೈ 2ರಂದು ಸಂಜೆ 5:02 ಗಂಟೆಗೆ ರಿಲೀಸ್ ಆಗಿದೆ. ಮಲಯಾಳಂನಲ್ಲಿ ಜುಲೈ 3, ತೆಲುಗಿನಲ್ಲಿ ಜುಲೈ 4, ಹಿಂದಿಯಲ್ಲಿ ಜುಲೈ 5 ಹಾಗೂ ತಮಿಳಿನಲ್ಲಿ ಜುಲೈ 6ರಂದು ಸಂಜೆ 5:2ಕ್ಕೆ ಈ ಸಾಂಗ್ ಬಿಡುಗಡೆ ಆಗಲಿದೆ.

Rajkumari Song: ‘ವಿಕ್ರಾಂತ್ ರೋಣ’ ಚಿತ್ರದ ಎರಡನೇ ಸಾಂಗ್ ರಿಲೀಸ್; ಹೇಗಿದೆ ನೋಡಿ ಹೊಸ ಹಾಡು
ಸುದೀಪ್
Follow us on

‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ನಾನಾ ವಿಚಾರಕ್ಕೆ ಸದ್ದು ಮಾಡುತ್ತಿದೆ. ಈ ಸಿನಿಮಾದ ಮೊದಲ ಹಾಡು ‘ರಾ ರಾ ರಕ್ಕಮ್ಮ..’ ಸಖತ್ ಹೈಪ್ ಸೃಷ್ಟಿ ಮಾಡಿದೆ. ಈ ಲಿರಿಕಲ್ ಸಾಂಗ್ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ. ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ರೀಲ್ಸ್​ ಮಾಡಿದ್ದಾರೆ. ಎರಡನೇ ಲಿರಿಕಲ್ ಸಾಂಗ್ ರಿಲೀಸ್ ಆಗಿದೆ. ‘ರಾಜಕುಮಾರಿ..’ ಹಾಡು (Rajkumari Song) ಇಂದು (ಜುಲೈ 2) ಸಂಜೆ ರಿಲೀಸ್ ಆಗಿದೆ. ಈ ಹಾಡು ಹೇಗಿದೆ ಎಂಬ ಕೌತುಕಕ್ಕೆ ಚಿತ್ರತಂಡ ತೆರೆ ಎಳೆದಿದೆ.

ಕನ್ನಡದಲ್ಲಿ ‘ರಾಜಕುಮಾರಿ..’ ಹಾಡು ಜುಲೈ 2ರಂದು ಸಂಜೆ 5:02 ಗಂಟೆಗೆ ರಿಲೀಸ್ ಆಗಿದೆ. ಮಲಯಾಳಂನಲ್ಲಿ ಜುಲೈ 3, ತೆಲುಗಿನಲ್ಲಿ ಜುಲೈ 4, ಹಿಂದಿಯಲ್ಲಿ ಜುಲೈ 5 ಹಾಗೂ ತಮಿಳಿನಲ್ಲಿ ಜುಲೈ 6ರಂದು ಸಂಜೆ 5:2ಕ್ಕೆ ಈ ಸಾಂಗ್ ಬಿಡುಗಡೆ ಆಗಲಿದೆ. ಈ ಹಾಡಿನ ಬಗ್ಗೆ ಸುದೀಪ್ ಮೆಚ್ಚುಗೆ ಸೂಚಿಸಿದ್ದು, ‘ನನ್ನ ಫೇವರಿಟ್ ಸಾಂಗ್’ ಎಂದು ಬರೆದುಕೊಂಡಿದ್ದರು. ಅದೇ ರೀತಿಯಲ್ಲಿ ಈ ಹಾಡಿದೆ.

ಇದನ್ನೂ ಓದಿ
Kichcha Sudeep: ಕೇರಳದಲ್ಲಿ ‘ವಿಕ್ರಾಂತ್​ ರೋಣ’: ಕೊಚ್ಚಿಗೆ ತೆರಳಿದ ಕಿಚ್ಚ ಸುದೀಪ್​ಗೆ ಅಭಿಮಾನಿಗಳ ಆತ್ಮೀಯ ಸ್ವಾಗತ
Vikrant Rona: ಮುಂಬೈನಲ್ಲಿ ಸುದೀಪ್​ ಜತೆ ರಕ್ಕಮ್ಮ ಜಾಕ್ವೆಲಿನ್​ ಫರ್ನಾಂಡಿಸ್​ ಮಿರಿಮಿರಿ ಮಿಂಚಿಂಗ್
‘ವಿಕ್ರಾಂತ್​ ರೋಣ’ ರಿಲೀಸ್​ ಸಮಯದಲ್ಲಿ ಸುದೀಪ್​ಗೆ ಸ್ಟ್ರೆಸ್​ ಇದೆಯಾ? ನೇರ ಉತ್ತರ ನೀಡಿದ ಕಿಚ್ಚ
Vikrant Rona: ಕಿಚ್ಚನ ‘ರಾ ರಾ ರಕ್ಕಮ್ಮ..’ ಹಾಡಿಗೆ ಹೆಜ್ಜೆ ಹಾಕಿದ ಬಾಲಿವುಡ್​ ಸ್ಟಾರ್​ ನಟ ರಿತೇಶ್​ ದೇಶಮುಖ್​

‘ರಾಜಕುಮಾರಿ..’ ಅಪ್ಪ-ಮಗಳ ಬಾಂಧವ್ಯವವನ್ನು ಹೇಳುತ್ತದೆ. ಇದೊಂದು ಲಾಲಿ ಗೀತೆ. ಈ ಹಾಡು ಮೆಲೋಡಿಯಾಗಿದೆ. ‘ರಾಜಕುಮಾರಿ..’  ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದರೆ, ವಿಜಯ್ ಪ್ರಕಾಶ್ ಧ್ವನಿಯಾಗಿದ್ದಾರೆ. ಅನೂಪ್ ಭಂಡಾರಿ ಅವರು ಈ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.

ಇತ್ತೀಚೆಗೆ ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೇಲರ್ ರಿಲೀಸ್ ಆಯಿತು. ಈ ಟ್ರೇಲರ್​ ಸಾಕಷ್ಟು ಸಸ್ಪೆನ್ಸ್​ನಿಂದ ಕೂಡಿದೆ. ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರ ಮಾಡಿದ್ದಾರೆ. ಸುದೀಪ್​ ಜತೆಗೆ ನಿರೂಪ್ ಭಂಡಾರಿ ಕೂಡ ನಟಿಸಿದ್ದಾರೆ. ಜಾಕ್ ಮಂಜು ನಿರ್ಮಾಣದ ಈ ಚಿತ್ರಕ್ಕೆ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ:  ‘ವಿಕ್ರಾಂತ್ ರೋಣ’ ಹಾಡಿಗೆ ಬೋಲ್ಡ್ ಆಗಿ ಸ್ಟೆಪ್ ಹಾಕಿದ ನಿವೇದಿತಾ ಗೌಡ-ಚಂದನ್

Kichcha Sudeep: ಭಯಾನಕ ಕಥೆಯಲ್ಲಿ ಹೊಸ ಅಧ್ಯಾಯ ಆರಂಭ; ಗಮನ ಸೆಳೆದ ‘ವಿಕ್ರಾಂತ್ ರೋಣ’ ಟ್ರೇಲರ್

Published On - 5:09 pm, Sat, 2 July 22