ಸುದೀಪ್ ಹೀರೋ ಆಗುವ ಮುನ್ನವೇ ನಡೆದಿತ್ತೊಂದು ದುರ್ಘಟನೆ

Sudeep: ಸುದೀಪ್ ಸೆಪ್ಟೆಂಬರ್ 2ರಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರು ಪೂರ್ಣ ಪ್ರಮಾಣದ ನಾಯಕ ಆಗುವ ಮುನ್ನವೇ ಸೆಟ್​ನಲ್ಲಿ ನಡೆದ ಅಪಘಾತದಿಂದಾಗಿ ವೃತ್ತಿ ಜೀವನವನ್ನೇ ಕಳೆದುಕೊಳ್ಳುವಂಥಾಗಿದ್ದು, ಆದರೆ ಆ ನೋವನ್ನೆಲ್ಲ ಮೀರಿದ್ದಕ್ಕೆ ಇಂದು ಸೂಪರ್ ಸ್ಟಾರ್ ಆಗಿದ್ದಾರೆ. ಅಂದು ನಡೆದಿದ್ದ ಆ ಅಪಘಾತ ಏನು? ಇಲ್ಲಿದೆ ಮಾಹಿತಿ.

ಸುದೀಪ್ ಹೀರೋ ಆಗುವ ಮುನ್ನವೇ ನಡೆದಿತ್ತೊಂದು ದುರ್ಘಟನೆ
ಸುದೀಪ್
Follow us
ಮಂಜುನಾಥ ಸಿ.
|

Updated on: Aug 31, 2023 | 8:55 PM

ನಟ ಸುದೀಪ್ (Sudeep) ಸಿನಿಮಾ ಜರ್ನಿ ಸರಳವಾಗಿರಲಿಲ್ಲ. ಬಹುತೇಕ ಹೊಸ ನಟರು ಅನುಭವಿಸುವ ಕಷ್ಟಗಳನ್ನು ಸುದೀಪ್ ಅವರೂ ಅನುಭವಿಸಿದ್ದರು. ಖ್ಯಾತರಾಗಿಲ್ಲದ ನಟರನ್ನು ಏನು ನಿಕೃಷ್ಟತೆಗಳನ್ನು ಎದುರಿಸಬೇಕೊ ಅವುಗಳನ್ನು ಸುದೀಪ್ ಸಹ ಅನುಭವಿಸಿದ್ದರು. ಸುದೀಪ್ ಪೂರ್ಣ ಪ್ರಮಾಣದ ನಾಯಕ ನಟನಾಗುವ ಮುನ್ನವೇ ಅಪಘಾತವೊಂದಕ್ಕೆ ಸಿಲುಕಿದ್ದರು. ಆ ಅಪಘಾತದಿಂದ ಅವರ ಸಿನಿ ಜೀವನ ಅರಳುವ ಮುನ್ನವೇ ಮುದುಡುವ ಅಪಾಯ ಎದುರಾಗಿತ್ತು. ಆ ಘಟನೆ ಬಗ್ಗೆ ಸುದೀಪ್ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು.

ಸುದೀಪ್​ರ ಮೊದಲ ಸಿನಿಮಾ ‘ತಾಯವ್ವ’ ವಿಮರ್ಶಕರಿಂದ ಮೆಚ್ಚುಗೆ ಗಳಿಸಿತಾದರೂ ಚಿತ್ರಮಂದಿರಗಳಲ್ಲಿ ಅಷ್ಟೊಳ್ಳೆ ಪ್ರದರ್ಶನ ಕಂಡಿರಲಿಲ್ಲ. ಆ ಸಿನಿಮಾ ಆಗಿ ಎರಡು ವರ್ಷಗಳ ವರೆಗೆ ಸುದೀಪ್​ಗೆ ಅವಕಾಶವೇ ಸಿಕ್ಕಿರಲಿಲ್ಲ. ಬಳಿಕ 1999ರಲ್ಲಿ ಸುನಿಲ್ ಕುಮಾರ್ ದೇಸಾಯಿ ಅವರ ‘ಪ್ರತ್ಯರ್ಥ’ ಸಿನಿಮಾದಲ್ಲಿ ಸುದೀಪ್​ಗೆ ಅವಕಾಶ ಕೊಟ್ಟರು. ಆ ಸಿನಿಮಾಕ್ಕೆ ರಮೇಶ್ ಅರವಿಂದ್ ನಾಯಕ. ಸುದೀಪ್ ಪೋಷಕ ನಟ. ಆ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಸುದೀಪ್​ ಅಪಘಾತವೊಂದಕ್ಕೆ ಈಡಾಗಿದ್ದರು.

‘ಪ್ರತ್ಯರ್ಥ’ ಸಿನಿಮಾದಲ್ಲಿ ಸುದೀಪ್​ಗೆ ಫೈಟ್ ದೃಶ್ಯವೊಂದಿತ್ತು. ಕೆಡಿ ವೆಂಕಟೇಶ್ ಸಾಹಸ ನಿರ್ದೇಶನ ಮಾಡಿದ್ದರು. ಕೆಡಿ ವೆಂಕಟೇಶ್ ಸೂಚನೆಯಂತೆ ಜಂಪ್ ಮಾಡಿ ನೆಲದ ಮೇಲೆ ಲ್ಯಾಂಡ್ ಆಗುವ ದೃಶ್ಯ, ಹೊಸಬರಾಗಿದ್ದ ಸುದೀಪ್ ಸಹ ಉತ್ಸಾಹದಲ್ಲಿ ಜಂಪ್ ಮಾಡಿದರು. ಕೆಳಗೆ ಬಿದ್ದಾಗ ಅವರ ಎದೆಯಲ್ಲಿ ಅಸಾಧ್ಯ ನೋವು ಕಾಣಿಸಿಕೊಂಡಿತಂತೆ.

ಇದನ್ನೂ ಓದಿ:ಆಕಾಶದಲ್ಲಿನ ನಕ್ಷತ್ರಕ್ಕೆ ಕಿಚ್ಚ ಸುದೀಪ್​ ಹೆಸರು; ಹುಟ್ಟುಹಬ್ಬದ ಹೊಸ್ತಿಲಲ್ಲಿ ಹೀಗೊಂದು ಗೌರವ

ಅವರೇ ಹೇಳಿಕೊಂಡಂತೆ, ”ಅದು ಅಸಾಧ್ಯ ನೋವು, ಅಂಥಹಾ ನೋವು ಎದೆ ಭಾಗದಲ್ಲಿ ಎಂದೂ ಆಗಿರಲಿಲ್ಲ, ನನಗೆ ಉಸಿರಾಡಲು ಸಹ ಆಗುತ್ತಿರಲಿಲ್ಲ, ಒಳಗಡೆ ರಕ್ತಸ್ರಾವ ಆಗುತ್ತಿರುವ ಅನುಭವ ಬಂತು. ಸುನಿಲ್ ಕುಮಾರ್ ದೇಸಾಯಿ, ಕೆಡಿ ವೆಂಕಟೇಶ್​ಗೆ ಆ ಬಗ್ಗೆ ಹೇಳಿದೆ. ಆದರೆ ಅವರು ಹೆಚ್ಚೇನು ತಲೆಕಡೆಸಿಕೊಳ್ಳದೆ, ಮುಂದಿನ ಶಾಟ್​ಗೆ ರೆಡಿಯಾಗಿಬಿಟ್ಟರು. ಫೇಮಸ್ ಆಗುವ ಮುನ್ನ ಇದೆಲ್ಲವನ್ನೂ ನೋಡಬೇಕಾಗುತ್ತದೆ ಅದು ಸಹಜ ಸಹ. ಆದರೆ ಬೆಂಗಳೂರಿಗೆ ಬಂದು ಪರೀಕ್ಷೆಗೆ ಒಳಗಾದಾಗಲೇ ನನಗೆ ಏನಾಗಿತ್ತು ಎಂಬುದು ಗೊತ್ತಾಯ್ತು” ಎಂದು ಅಂದಿನ ಘಟನೆ ವಿವರಿಸಿದ್ದರು ಸುದೀಪ್.

”ಬೆಂಗಳೂರಿಗೆ ಬಂದು ಪರೀಕ್ಷೆ ಮಾಡಿಸಿದಾಗ ಗೊತ್ತಾಯ್ತು ಶ್ವಾಸಕೋಶದಲ್ಲಿ ಎರಡು ಕವಾಟಗಳು ಒಡೆದು ಹೋಗಿದ್ದವು. ಇನ್ನು ಮುಂದೆ ಓಡುವಂತೆ ಇಲ್ಲ, ಹೊರಗೆ ಹೆಚ್ಚು ಹೋಗುವಂತಿಲ್ಲ, ರೆಸ್ಟ್ ತೆಗೆದುಕೊಳ್ಳಬೇಕು, ಉಸಿರಾಟ ಕ್ರಮವಾಗಿಯೇ ಇರಬೇಕು ಎಂದು ವೈದ್ಯರು ಹೇಳಿದ್ದರು. ಇದಕ್ಕೆ ಚಿಕಿತ್ಸೆ ಇಲ್ಲ, ಅದು ತಾನಾಗಿಯೇ ಸರಿ ಹೋಗಬೇಕು ಎಂದಿದ್ದರು” ಎಂದು ಸುದೀಪ್ ನೆನಪಿಸಿಕೊಂಡಿದ್ದರು. ಅದೇ ಸ್ಥಿತಿಯಲ್ಲಿ ಸುದೀಪ್, ‘ಸ್ಪರ್ಷ’ ಸಿನಿಮಾದ ಚಿತ್ರೀಕರಣವನ್ನೂ ಮಾಡಿದರು. ಅದಾದ ಬಳಿಕ ‘ಹುಚ್ಚ’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಕಾಲಿನ ಮೂಳೆ ಮುರಿದುಕೊಂಡರು. ಆದರೂ ಚಿತ್ರೀಕರಣ ಮುಂದುವರೆಸಿದರು.

”ಈಗಲೂ ಸಹ ಸೆಟ್​ಗೆ ಹೋದಾಗ, ಶೂಟಿಂಗ್ ಮಾಡುವ ಒಮ್ಮೆ ಸೆಟಪ್ ಗಮನಿಸುತ್ತೇನೆ, ಅವಲೋಕಿಸುತ್ತೇನೆ. ಸರಿ, ನಾನಿದನ್ನು ಹ್ಯಾಂಡಲ್ ಮಾಡಬಲ್ಲೆ ಎಂದು ಮುಂದುವರೆಯುತ್ತೇನೆ. ನನ್ನ ಜೀವನದಲ್ಲಿ ನಡೆದ ಆ ಘಟನೆಗಳೆಲ್ಲ ನನಗೆ ಒಳ್ಳೆಯ ಪಾಠಗಳನ್ನು ಕಲಿಸಿವೆ. ಈಗ ಅಪಾಯಕಾರಿ ಸನ್ನಿವೇಶಗಳನ್ನು ಹೇಗೆ ಎದುರಿಸಬಹುದು ಎಂಬುದು ಗೊತ್ತಾಗಿದೆ. ಜೀವನದಲ್ಲಿ ಬಿದ್ದಂಥಹಾ ಇಂಥಹಾ ಪೆಟ್ಟುಗಳೇ ನನಗೆ ಗುರುಗಳಾಗಿವೆ. ಪೆಟ್ಟುಗಳಿಂದಲೇ ನಾನು ಸಾಕಷ್ಟು ಕಲಿತಿದ್ದೇನೆ” ಎಂದಿದ್ದರು ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್