ಸುದೀಪ್​ಗೆ ನಡೆದಿತ್ತು ಎರಡನೇ ಮದುವೆ? ಶಾಕಿಂಗ್ ವಿಚಾರ ರಿವೀಲ್ ಮಾಡಿದ ಕಿಚ್ಚ

| Updated By: ರಾಜೇಶ್ ದುಗ್ಗುಮನೆ

Updated on: Dec 31, 2024 | 8:03 AM

ಕಿಚ್ಚ ಸುದೀಪ್ ಅವರು ತಮ್ಮ ಎರಡನೇ ಮದುವೆಯ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಪತ್ರಿಕೆಯಲ್ಲಿ ಬಂದ ಒಂದು ವರದಿಯ ಬಗ್ಗೆ ಅವರು ಮಾತನಾಡಿದ್ದಾರೆ. ಸೆಲೆಬ್ರಿಟಿ ಎಂದಾಕ್ಷಣ ವದಂತಿಗಳು ಸರ್ವೇ ಸಾಮಾನ್ಯ. ಅದೇ ವೈಯಕ್ತಿಕ ವಿಚಾರ ಎಂದಾಗ ಸೆಲೆಬ್ರಿಟಿಗಳಿಗೆ ಚಿಂತೆ ಉಂಟಾಗುತ್ತದೆ. ಆದರೆ, ಸುದೀಪ್ ಆ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿಲ್ಲ.

ಸುದೀಪ್​ಗೆ ನಡೆದಿತ್ತು ಎರಡನೇ ಮದುವೆ? ಶಾಕಿಂಗ್ ವಿಚಾರ ರಿವೀಲ್ ಮಾಡಿದ ಕಿಚ್ಚ
ಪ್ರಿಯಾ-ಸುದೀಪ್
Follow us on

ಕಿಚ್ಚ ಸುದೀಪ್ ಅವರು ಪ್ರಿಯಾ ಅವರ ಜೊತೆ ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ. ಇವರ ಮಧ್ಯೆ ಒಮ್ಮೆ ಮಸ್ತಾಪ ಬಂದಿದ್ದು ನಿಜ. ಆದರೆ, ಅದನ್ನು ಮರೆತು ಇವರು ಮತ್ತೆ ಒಂದಾಗಿದ್ದಾರೆ. ಇವರು ಹಾಯಾಗಿ ಸಂಸಾರ ನಡೆಸುತ್ತಾ ಇದ್ದಾರೆ. ಒಮ್ಮೆ ಸುದೀಪ್ ಅವರು ಎರಡನೇ ಮದುವೆ ಆದ ಬಗ್ಗೆ ವರದಿ ಆಗಿತ್ತು. ಈ ವಿಚಾರದ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಹಲವು ವರ್ಷಗಳ ಬಳಿಕ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ.

ಸೆಲೆಬ್ರಿಟಿ ಎಂದಾಕ್ಷಣ ವದಂತಿಗಳು ಸರ್ವೇ ಸಾಮಾನ್ಯ. ಇದಕ್ಕೆ ಕಿಚ್ಚ ಸುದೀಪ್ ಕೂಡ ಹೊರತಾಗಿಲ್ಲ. ಸಾಮಾನ್ಯವಾಗಿ, ಸಿನಿಮಾ ವಿಚಾರಗಳ ಬಗ್ಗೆ ವದಂತಿ ಹಬ್ಬಿದರೆ ಸೆಲೆಬ್ರಿಟಿಗಳು ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಅದೇ ವೈಯಕ್ತಿಕ ವಿಚಾರ ಎಂದಾಗ ಸೆಲೆಬ್ರಿಟಿಗಳಿಗೆ ಚಿಂತೆ ಉಂಟಾಗುತ್ತದೆ. ಸುದೀಪ್ ಅವರು ಈಗ ಆ ಬಗ್ಗೆ ಮಾತನಾಡಿದ್ದಾರೆ.

ಸುದೀಪ್ ಎರಡನೇ ಮದುವೆ ಆಗಿದ್ದಾರೆ ಎಂಬ ಸುದ್ದಿ ಈ ಮೊದಲು ಹುಟ್ಟಿಕೊಂಡಿತ್ತು. ನಟಿಯ ಜೊತೆ ಈ ವಿವಾಹ ನಡೆದಿತ್ತು ಎಂದು ಹೇಳಲಾಗಿತ್ತು. ಇದು ಹಳೆಯ ಸುದ್ದಿ. ಈ ಬಗ್ಗೆ ಸುದೀಪ್ ಅವರು ಈಗ ಮೌನಮುರಿದಿದ್ದಾರೆ. ಮಿರ್ಚಿ ಕನ್ನಡದಲ್ಲಿ ಮಾತನಾಡಿದ್ದರು.

‘ನಟಿಯ ಜೊತೆ ಸುದೀಪ್​ಗೆ ಅಫೇರ್ ಇತ್ತು, ದೇವಸ್ಥಾನದಲ್ಲಿ ಮದುವೆ ಆದರು ಎಂಬ ಸುದ್ದಿ ಇತ್ತಲ್ಲ’ ಎನ್ನುವ ಪ್ರಶ್ನೆ ಎದುರಾಯಿತು. ‘ಹೌದು ಮದುವೆ ಆಗಿದೆ. ಆದರೆ, ಅವರು (ಮದುವೆ ಆದ ಹುಡುಗಿ) ಮನೆಗೆ ಬಂದಿಲ್ಲ. ನಾನು ದೇವಸ್ಥಾನಕ್ಕೆ ಹೋಗಿಲ್ಲ, ತಾಳಿಯನ್ನೂ ಕಟ್ಟಿಲ್ಲ. ಆದರೂ ಮದುವೆ ಆಗಿದೆ. ವರ್ಚುವಲ್ ಮದುವೆ ಎಂದು ಹೇಳೋಕೆ ಆಗ ವರ್ಚುವಲ್ ಎನ್ನುವ ಕಾನ್ಸೆಪ್ಟ್ ಇರಲಿಲ್ಲ’ ಎಂದಿದ್ದಾರೆ ಸುದೀಪ್.

ಇದನ್ನೂ ಓದಿ: ‘ಚಕ್ರವರ್ತಿ’ ಬದಲು ‘ಚತ್ರವರ್ತಿ’ ಎಂದು ತಪ್ಪು ಬರೆದಿದ್ಯಾರು? ರಿವೀಲ್ ಮಾಡಿದ ಸುದೀಪ್

‘ಪೇಪರ್​ನಲ್ಲಿ ಒಂದು ಆರ್ಟಿಕಲ್ ಬಂದಿತ್ತು. ಪ್ರಿಯಾ ಜೊತೆ ಕುಳಿತು ಓದುತ್ತಿದ್ದೆ. ಯಾವುದೋ ಹೀರೋ ಎರಡನೇ ಮದುವೆ ಆಗಿದ್ದಾನಂತೆ ಎಂಬ ಸುದ್ದಿ ಅದಾಗಿತ್ತು. ಓದುತ್ತಾ ಹೋದಂತೆ ಕೊನೆಯಲ್ಲಿ ಗೊತ್ತಾಗಿದ್ದು ಅದು ನಾನೇ ಅಂತ. ನಾನು ಹಾಗೂ ಪ್ರಿಯಾ ಇದನ್ನು ನೋಡಿ ನಕ್ಕಿದ್ದೆವು. ನಾನು ಮದುವೆ ಆದ ಹುಡುಗಿ ಇನ್ನು ಮನೆಗೆ ಬರಲೇ ಇಲ್ಲ’ ಎಂದು ಸುದೀಪ್ ಫನ್ ಆಗಿ ಹಳೆಯ ಘಟನೆ ಹೇಳಿದ್ದಾರೆ.

ಸಿನಿಮಾ ವಿಚಾರಕ್ಕೆ ಸುದೀಪ್ ನಟನೆಯ ‘ಮ್ಯಾಕ್ಸ್’ ಭರ್ಜರಿ ಯಶಸ್ಸು ಕಂಡಿದೆ. ಚಿತ್ರ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಈ ಬಾರಿಯ ಕ್ರಿಸ್​ಮಸ್ ಸಂದರ್ಭದಲ್ಲಿ ರಿಲೀಸ್ ಆಗಿ ಗೆದ್ದ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.