AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಚಕ್ರವರ್ತಿ’ ಬದಲು ‘ಚತ್ರವರ್ತಿ’ ಎಂದು ತಪ್ಪು ಬರೆದಿದ್ಯಾರು? ರಿವೀಲ್ ಮಾಡಿದ ಸುದೀಪ್

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಆದರೆ, ಚಿತ್ರದ ಟೈಟಲ್​ಕಾರ್ಡ್​ನಲ್ಲಿ ಚಕ್ರವರ್ತಿಯ ಬದಲು ಚತ್ರವರ್ತಿ ಎಂದು ತಪ್ಪಾಗಿ ಬರೆಯಲಾಗಿತ್ತು. ಈ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದು, ತಪ್ಪು ಸಣ್ಣದು ಎಂದೂ, ಚಿತ್ರದ ಯಶಸ್ಸೇ ಮುಖ್ಯ ಎಂದೂ ಹೇಳಿದ್ದಾರೆ. ನಿರ್ದೇಶಕರು ಕನ್ನಡದವರಲ್ಲದ ಕಾರಣ ಅವರಿಗೆ ಗೊತ್ತಾಗಿಲ್ಲ ಎಂದಿದ್ದಾರೆ.

‘ಚಕ್ರವರ್ತಿ’ ಬದಲು ‘ಚತ್ರವರ್ತಿ’ ಎಂದು ತಪ್ಪು ಬರೆದಿದ್ಯಾರು? ರಿವೀಲ್ ಮಾಡಿದ ಸುದೀಪ್
ಸುದೀಪ್
ರಾಜೇಶ್ ದುಗ್ಗುಮನೆ
|

Updated on:Dec 31, 2024 | 7:34 AM

Share

ಕಿಚ್ಚ ಸುದೀಪ್ ನಟನೆಯ ‘ಮ್ಯಾಕ್ಸ್’ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಈ ಸಿನಿಮಾದ ಗಳಿಕೆ 30 ಕೋಟಿ ರೂಪಾಯಿ ದಾಟಿದೆ ಎನ್ನಲಾಗಿದೆ. ಈ ಸಿನಿಮಾ ರಿಲೀಸ್ ಆದ ಸಂದರ್ಭದಲ್ಲಿ ಚಿತ್ರತಂಡ ಮಾಡಿದ ಒಂದು ದೊಡ್ಡ ಎಡವಟ್ಟು ಕಣ್ಣಿಗೆ ಕಾಣಿಸಿತ್ತು. ‘ಅಭಿನಯ ಚಕ್ರವರ್ತಿ ಬಾದ್​ಷಾ ಕಿಚ್ಚ ಸುದೀಪ್’ ಎಂದು ಬರೆಯುವಾಗ ತಪ್ಪು ನಡೆದಿತ್ತು. ಚಕ್ರವರ್ತಿ ಬದಲು ಚತ್ರವರ್ತಿ ಎಂದು ಬರೆಯಲಾಗಿತ್ತು. ಈ ಬಗ್ಗೆ ಸುದೀಪ್ ಮೌನ ಮುರಿದಿದ್ದಾರೆ.

‘ಮ್ಯಾಕ್ಸ್’ ಸಿನಿಮಾದ ಥ್ಯಾಂಕ್ಸ್ ಮೀಟ್​ನಲ್ಲಿ ಸಿನಿಮಾದ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಅವರಿಗೆ ಈ ಬಗ್ಗೆ ಪ್ರಶ್ನೆ ಮಾಡಲಾಯಿತು. ಅವರು ‘ಕ್ಷಮಿಸಿ.. ಕ್ಷಮಿಸಿ..’ ಎಂದು ಕೇಳಿಕೊಂಡರು. ಆಗ ಸುದೀಪ್ ಅವರು ಮೈಕ್ ತೆಗೆದುಕೊಂಡು ಮಾತನಾಡಿದರು. ‘ತುಂಬಾ ಕೊರತೆ ಇರುವ ನನ್ನನ್ನು ನನ್ನ ತಾಯಿಯೇ ಕ್ಷಮಿಸಿ ಬೆಳೆಸಿದ್ದಾರೆ. ಕ್ಷಮೆ ಅನ್ನೋದು ತಾಯಿಯ ಗುಣ. ಟೈಟಲ್ ಕಾರ್ಡ್​ನಲ್ಲಿರೋ ತಪ್ಪನ್ನು ಮೊದಲು ನೋಡಿದಿರಿ. ಆ ಬಳಿಕ ಅವರು ನನ್ನ ಜೊತೆ ಕೊಟ್ಟ ಸಿನಿಮಾನ ನೋಡಿದಿರಿ. ಸಿನಿಮಾದ ಎದುರು ಈ ತಪ್ಪು ಸಣ್ಣದು’ ಎಂದರು ಸುದೀಪ್. ‘ಹೆಸರಲ್ಲೇನಿದೆ? ನನಗೆ ಹುಚ್ಚ ಎಂದೂ ಕರೆಯುತ್ತಾರೆ. ನಿರ್ದೇಶಕರು ಕನ್ನಡದವರಲ್ಲ, ಅವರಿಗೆ ಗೊತ್ತಾಗಿಲ್ಲ. ಅವರಿಗೆ ಕನ್ನಡ ಓದೋಕೆ ಬರಲ್ಲ. ಟೈಪ್ ಮಾಡಿ ಕಳುಹಿಸಿದವರ ತಪ್ಪು. ಇದು ಅಪ್ಪಟ ಕನ್ನಡದವರೇ ಮಾಡಿದ ತಪ್ಪು’ ಎಂದರು ಸುದೀಪ್.

ಇದನ್ನೂ ಓದಿ: ‘ಮ್ಯಾಕ್ಸ್’ ಕಲೆಕ್ಷನ್ ಎಷ್ಟು? ನಿರ್ಮಾಪಕನಾಗಿ ಕಿಚ್ಚ ಸುದೀಪ್ ಹೇಳಿದ್ದೇನು?

‘ಸಿನಿಮಾ ರಿಲೀಸ್​ಗೆ ನಾಲ್ಕೈದು ದಿನ ಇದ್ದಾಗ ಟ್ರೇಲರ್ ಬಂತು. ಕೊನೆಯ ಹಂತದಲ್ಲಿ ನಾವು ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಇದ್ದೆವು. ಸಿನಿಮಾ ಟೈಟಲ್ ಕಾರ್ಡ್ ಬಗ್ಗೆ ಗಮನ ಹರಿಸೋಕೆ ಆಗಲೇ ಇಲ್ಲ. ಸಿನಿಮಾ ರಿಲೀಸ್ ಆದ ಬಳಿಕ ನನಗೆ ಸ್ಕ್ರೀನ್​ಶಾಟ್​ಗಳು ಬಂತು. ನನಗೆ ಆ ಬಗ್ಗೆ ಬೇಸರ ಆಗಿಲ್ಲ. ನಾನು ಅದನ್ನು ಕೇರ್ ಮಾಡೇ ಇಲ್ಲ. ಸಿನಿಮಾ ಸಕ್ಸಸ್​ ಮುಖ್ಯ. ಹೆಸರಲ್ಲೇನಿದೆ ಬದನೆಕಾಯಿ’ ಎಂದರು ಸುದೀಪ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:34 am, Tue, 31 December 24

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ