ಟಾಲಿವುಡ್​ನಲ್ಲಿ ಕಿಚ್ಚ ಸುದೀಪ್ ಫೇವರಿಟ್ ಹೀರೋಯಿನ್ ಯಾರು ಗೊತ್ತಾ?

ಕಿಚ್ಚ ಸುದೀಪ್ ಅವರ ಹಳೆಯ ಸಂದರ್ಶನದ ವೀಡಿಯೋ ವೈರಲ್ ಆಗಿದೆ. ಈ ವೀಡಿಯೋದಲ್ಲಿ ಅವರು ತಮ್ಮ ನೆಚ್ಚಿನ ನಟಿಯರ ಬಗ್ಗೆ ಮಾತನಾಡಿದ್ದಾರೆ. ಸಮಂತಾ, ನಯನತಾರಾ, ಸಾಯಿ ಪಲ್ಲವಿ ಮತ್ತು ತಮನ್ನಾ ಅವರಲ್ಲಿ ಸಮಂತಾ ಅವರನ್ನು ತಮ್ಮ ನೆಚ್ಚಿನ ನಟಿ ಎಂದು ಹೇಳಿದ್ದಾರೆ.

ಟಾಲಿವುಡ್​ನಲ್ಲಿ ಕಿಚ್ಚ ಸುದೀಪ್ ಫೇವರಿಟ್ ಹೀರೋಯಿನ್ ಯಾರು ಗೊತ್ತಾ?
ಸುದೀಪ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on:Oct 25, 2024 | 7:50 AM

ಕಿಚ್ಚ ಸುದೀಪ್ ಅವರಿಗೆ ದಕ್ಷಿಣ ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಇದೆ. ಅವರು ಸದ್ಯ ತಾಯಿ ಕಳೆದುಕೊಂಡ ಶೋಕದಲ್ಲಿ ಇದ್ದಾರೆ. ಈ ದುಃಖಕ್ಕೆ ಅನೇಕರು ಜೊತೆಯಾಗಿದ್ದಾರೆ. ಟಾಲಿವುಡ್​ನವರು ಕೂಡ ಸುದೀಪ್​ಗೆ ಹೆಗಲು ಕೊಟ್ಟಿದ್ದಾರೆ. ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರು ಕನ್ನಡದಲ್ಲೇ ಟ್ವೀಟ್ ಮಾಡಿ ಧೈರ್ಯ ತುಂಬಿದ್ದಾರೆ. ಈಗ ಸುದೀಪ್ ಅವರ ಒಂದು ಹಳೆಯ ವಿಡಿಯೋದ ಬಗ್ಗೆ ನೋಡೋಣ. ಹಾಗಂತ ಇದು ಅವರ ತಾಯಿಗೆ ಸಂಬಂಧಿಸಿದ ವಿಡಿಯೋ ಅಲ್ಲ.

ಸುದೀಪ್ ಅವರು ಈ ಮೊದಲು ಸಾಕಷ್ಟು ಸಂದರ್ಶನಗಳನ್ನು ನೀಡಿದ್ದರು. ಈ ಸಂದರ್ಶನದ ಪೈಕಿ ಒಂದು ಸಂದರ್ಶನವು ಸಾಕಷ್ಟು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಸುದೀಪ್ ತಮ್ಮಿಷ್ಟದ ಹೀರೋಯಿನ್​ಗಳ ಬಗ್ಗೆ ಮಾತನಾಡಿದ್ದರು. ಅವರಿಗೆ ಆಯ್ಕೆಗಳೆಲ್ಲವೂ ಇದ್ದಿದ್ದು ತೆಲುಗು ಹಾಗೂ ತಮಿಳು ಹೀರೋಯಿನ್​ಗಳ ಹೆಸರೇ ಆಗಿತ್ತು. ಇದರಲ್ಲಿ ಅವರು ಒಂದು ಹೆಸರನ್ನು ಆಯ್ಕೆ ಮಾಡಿಕೊಂಡಿದ್ದರು.

‘ಸಮಂತಾ, ನಯನತಾರಾ, ಸಾಯಿ ಪಲ್ಲವಿ ಅಥವಾ ತಮನ್ನಾ. ಇವರಲ್ಲಿ ನಿಮ್ಮ ಫೇವರಿಟ್​ ಯಾರು’ ಎಂದು ಕೇಳಲಾಯಿತು. ಇದಕ್ಕೆ ಸಮಂತಾ ಹೆಸರನ್ನು ಆಯ್ಕೆ ಮಾಡಿಕೊಂಡರು ಸುದೀಪ್. ‘ಸಮಂತಾ ಯಾವಾಗಲೂ ನನ್ನ ಫೇವರಿಟ್. ಅವರು ಸ್ವೀಟ್ ಹುಡುಗಿ. ನಾನು ಅವರ ಸಿನಿಮಾ ನೋಡಿದ್ದೇನೆ. ಅವರು ಅದ್ಭುತವಾಗಿ ನಟಿಸಿದ್ದಾರೆ. ಅವರು ತಮ್ಮನ್ನು ತಾವು ಒಳ್ಳೆಯ ರೀತಿಯಲ್ಲಿ ಕಾಯ್ದುಕೊಂಡಿದ್ದಾರೆ’ ಎಂದು ಸುದೀಪ್ ಅವರು ಹೇಳಿಕೊಂಡಿದ್ದರು. ಕೆಲವರು ಈ ವಿಡಿಯೋನ ವೈರಲ್ ಮಾಡಿದ್ದಾರೆ.

ಸುದೀಪ್ ಹಾಗೂ ಸಮಂತಾ ಮಧ್ಯೆ ಒಂದು ಫ್ರೆಂಡ್​ಶಿಪ್ ಬೆಳೆಯಲು ಕಾರಣ ‘ಈಗ’ ಚಿತ್ರ. ಎಸ್​ಎಸ್​ ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಸುದೀಪ್ ಹಾಗೂ ಸಮಂತಾ ಒಟ್ಟಾಗಿ ನಟಿಸಿದ್ದರು. ಸುದೀಪ್ ವಿಲನ್ ಪಾತ್ರದಲ್ಲಿ ಗಮನ ಸೆಳೆದಿದ್ದರು. ಈ ಚಿತ್ರದುದ್ದಕ್ಕೂ ಸಮಂತಾ ಹಾಗೂ ಸುದೀಪ್ ಮಧ್ಯೆ ಹಲವು ದೃಶ್ಯಗಳು ಇವೆ. ಈ ಕಾರಣಕ್ಕೆ ಸೆಟ್​ನಲ್ಲಿ ಇವರ ಮಧ್ಯೆ ಗೆಳೆತನ ಬೆಳೆದಿದೆ ಎಂದು ಹೇಳಬಹುದು. ಆ ಗೆಳೆತನ ಈಗಲೂ ಉಳಿದುಕೊಂಡಿದೆ ಎಂದು ಹೇಳಬಹುದು.

ಇದನ್ನೂ ಓದಿ: ಸುದೀಪ್ ಎಚ್ಚರಿಕೆ ನೀಡಿದ ಮೇಲೂ ಉದ್ಧಟತನ ಮುಂದುವರಿಸಿದ ಚೈತ್ರಾ ಕುಂದಾಪುರ

ಸುದೀಪ್ ತಾಯಿ ಸರೋಜಾ ಅವರು ಇತ್ತೀಚೆಗೆ ನಿಧನ ಹೊಂದಿದರು. ಈ ನೋವಲ್ಲಿ ಸುದೀಪ್ ಇದ್ದಾರೆ. ಅವರು ಬಿಗ್ ಬಾಸ್​ನ ನಡೆಸಿಕೊಡೋಕೆ ಬರುತ್ತಾರೋ ಅಥವಾ ಇಲ್ಲವೋ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. ಈ ಪ್ರಶ್ನೆಗೆ ಶನಿವಾರ ಉತ್ತರ ಸಿಗಲಿದೆ ಎಂದು ಹೇಳಬಹುದು. ಈ ಮಧ್ಯೆ ಸುದೀಪ್ ಅವರು ‘ಮ್ಯಾಕ್ಸ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:40 am, Fri, 25 October 24

ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಮದುವೆ ಮಂಟಪದಲ್ಲಿ ಕೋಪಗೊಂಡ ಪೂಜಾರಿ, ಮಾಡಿದ್ದೇನು ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
ಸಂಸತ್ತನ್ನು ನಗೆಗಡಲಲ್ಲಿ ತೇಲಿಸಿದ್ದ ಮನಮೋಹನ್​ ಸಿಂಗ್ ಕಾವ್ಯ! ವಿಡಿಯೋ ನೋಡಿ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್