‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಖರೀದಿಸಿದ ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್ ಆನಂದ್

ಬಾಲಿವುಡ್​ನ ಸ್ಟಾರ್ ನಿರ್ದೇಶಕ ಸಿದ್ದಾರ್ಥ್ ಆನಂದ್ ಅವರು ‘ಟಾಕ್ಸಿಕ್’ ಸಿನಿಮಾ ನೋಡಲು ಉತ್ಸುಕರಾಗಿದ್ದಾರೆ. ಮೊದಲ ದಿನದ ಟಿಕೆಟ್ ಖರೀದಿ ಮಾಡಿರುವ ಅವರು ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಆದರೆ ಈ ಮೊದಲು ಅವರು ದಕ್ಷಿಣದ ಸಿನಿಮಾಗಳ ಬಗ್ಗೆ ವ್ಯಂಗ್ಯ ಮಾಡಿದ್ದನ್ನು ನೆಟ್ಟಿಗರು ನೆನಪಿಸಿದ್ದಾರೆ.

‘ಟಾಕ್ಸಿಕ್’ ಸಿನಿಮಾದ ಟಿಕೆಟ್ ಖರೀದಿಸಿದ ಬಾಲಿವುಡ್ ನಿರ್ದೇಶಕ ಸಿದ್ದಾರ್ಥ್ ಆನಂದ್
Siddharth Anand, Yash

Updated on: Aug 24, 2026 | 6:35 PM

ಕನ್ನಡದ ಸ್ಟಾರ್ ನಟ ಯಶ್ (Yash) ಅಭಿನಯದ, ಅತ್ಯಂತ ನಿರೀಕ್ಷಿತ ಪ್ಯಾನ್-ಇಂಡಿಯಾ ಸಿನಿಮಾ ‘ಟಾಕ್ಸಿಕ್: ಎ ಫೇರಿಟೇಲ್ ಫಾರ್ ಗ್ರೋನ್ ಅಪ್ಸ್’ (Toxic: A FairyTale for GrownUps) ಬಿಡುಗಡೆಗೆ ಸಜ್ಜಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವು ಆಗಸ್ಟ್ 26ರಂದು ಬೆಳ್ಳಿಪರದೆಗೆ ಬರಲಿದೆ. ಈ ನಡುವೆ ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಸಿದ್ಧಾರ್ಥ್ ಆನಂದ್ (Siddharth Anand) ಅವರು ಈ ಸಿನಿಮಾದ ಮೊದಲ ದಿನದ ಮೊದಲ ಶೋ ವೀಕ್ಷಿಸಲು ಟಿಕೆಟ್ ಕಾಯ್ದಿರಿಸಿದ್ದು, ಯಶ್ ಅಭಿನಯವನ್ನು ಕಣ್ತುಂಬಿಕೊಳ್ಳಲು ಕಾತುರದಿಂದಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದುಕೊಂಡಿರುವ ಸಿದ್ಧಾರ್ಥ್ ಆನಂದ್, ‘ಟಾಕ್ಸಿಕ್ ಚಿತ್ರದ ಮೊದಲ ದಿನದ ಪ್ರದರ್ಶನಕ್ಕೆ ಟಿಕೆಟ್ ಬುಕ್ ಮಾಡಿದ್ದೇನೆ. ಚಿತ್ರಮಂದಿರಕ್ಕೆ ಹೋಗುವಾಗ ಅಲ್ಲಿ ಏನನ್ನು ನಿರೀಕ್ಷಿಸಬೇಕು ಎಂದು ತಿಳಿಯದೇ ಹೋಗುವ ಆ ಅನುಭವವೇ ಅದ್ಭುತ. ಯಶ್ ಅಂತಹ ಸೂಪರ್‌ಸ್ಟಾರ್, ಅತ್ಯಂತ ಎಕ್ಸೈಟಿಂಗ್ ಹಾಗೂ ಊಹಿಸಲು ಸಾಧ್ಯವಾಗದ ನಟ. ಅವರು ಹೊಸ ಹಾದಿ ನಿರ್ಮಿಸಿದ್ದಾರೆ. ಚಿತ್ರದ ಪ್ರತಿಯೊಂದು ಅಂಶವೂ ಫೆಂಟಾಸ್ಟಿಕ್ ಹಾಗೂ ಡೈನಾಮಿಕ್ ಆಗಿದೆ. ಇಡೀ ತಂಡಕ್ಕೆ ನನ್ನ ಶುಭಾಶಯಗಳು’ ಎಂದು ಪ್ರಶಂಸಿದ್ದಾರೆ.

ಸೌತ್ ಸಿನಿಮಾ ವರ್ಸಸ್ ಬಾಲಿವುಡ್ ಎಂಬ ಚರ್ಚೆಯ ನಡುವೆ ಯಶ್ ಸಿನಿಮಾಗೆ ಬೆಂಬಲ ನೀಡಿದ ಸಿದ್ಧಾರ್ಥ್ ಆನಂದ್ ಅವರ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಇತ್ತೀಚೆಗೆ ಸೌತ್ ಸಿನಿಮಾಗಳ ಬಗ್ಗೆ ಸಿದ್ಧಾರ್ಥ್ ಆನಂದ್ ಮಾಡಿದ್ದ ‘Oops’ ಟ್ವೀಟ್ ನೆನಪಿಸಿಕೊಂಡು ಕೆಲ ಟಾಲಿವುಡ್ ಅಭಿಮಾನಿಗಳು ಕಿಡಿಕಾರಿದ್ದಾರೆ.

ಇತ್ತೀಚೆಗೆ ‘ಎಕ್ಸ್’ ಬಳಕೆದಾರರೊಬ್ಬರು ಟಾಲಿವುಡ್‌ನ ಪ್ರಮುಖ ನಟರ ಚಿತ್ರಗಳಾದ ‘ದೇವರ’, ‘ಓಜಿ’, ‘ಕಿಂಗ್‌ಡಮ್’, ‘ಪೆದ್ದಿ’, ‘ದಿ ರಾಜಾ ಸಾಬ್’, ‘ಗುಂಟೂರು ಖಾರಂ’ ಮತ್ತು ‘ಡಾಕು ಮಹಾರಾಜ್’ ಸಿನಿಮಾಗಳ ಪಟ್ಟಿ ಮಾಡಿ ಅವುಗಳು ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್ ಮಾಡಿಲ್ಲ ಎಂದು ಬರೆದುಕೊಂಡಿದ್ದರು. ಈ ಪೋಸ್ಟ್‌ಗೆ ಸಿದ್ಧಾರ್ಥ್ ಆನಂದ್ ಕೇವಲ ‘Oops’ ಎಂದು ಕಾಮೆಂಟ್ ಮಾಡಿದ್ದು ತೆಲುಗು ಚಿತ್ರರಂಗದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು.

ಇದನ್ನೂ ಓದಿ: ಟಾಕ್ಸಿಕ್ ಅಡ್ವಾನ್ಸ್ ಬುಕಿಂಗ್ ಧಮಾಕ; ಬಿಡುಗಡೆಗೆ ಮುನ್ನವೇ 30 ಕೋಟಿ ದಾಟಿದ ಯಶ್ ಸಿನಿಮಾ ಗಳಿಕೆ

‘ಫೈಟರ್’ ಸಿನಿಮಾದ ಸೋಲಿಗೆ ಪ್ರೇಕ್ಷಕರನ್ನು ಹೊಣೆಗಾರರನ್ನಾಗಿ ಮಾಡಿದ ನಿರ್ದೇಶಕ ಸಿದ್ಧಾರ್ಥ್ ಆನಂದ್ ಈಗ ತೆಲುಗು ಸಿನಿಮಾಗಳನ್ನು ಟೀಕಿಸುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದರು. ಅದರ ನಡುವೆ ಅವರು ‘ಟಾಕಿಕ್ಸ್’ ನೋಡಲು ಈ ಪರಿ ಉತ್ಸಾಹ ತೋರಿಸಿರುವುದು ಅಚ್ಚರಿಗೆ ಕಾರಣ ಆಗಿದೆ. ಸಿದ್ಧಾರ್ಥ್ ಆನಂದ್ ಪ್ರಸ್ತುತ ಶಾರುಖ್ ಖಾನ್ ಅಭಿನಯದ ‘ಕಿಂಗ್’ ಸಿನಿಮಾದ ನಿರ್ದೇಶನದಲ್ಲಿ ಬ್ಯುಸಿಯಾಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us