Samyuktha Hegde: ‘ಕ್ರೀಮ್​’ ಸಿನಿಮಾ ಶೂಟಿಂಗ್​ ವೇಳೆ ಅವಘಡ; ನಟಿ ಸಂಯುಕ್ತಾ ಹೆಗಡೆಗೆ ಗಂಭೀರ ಪೆಟ್ಟು

‘ಕಿರಿಕ್ ಪಾರ್ಟಿ’ ಖ್ಯಾತಿಯ ಸಂಯುಕ್ತಾ ಹೆಗಡೆ ಕಾಲಿಗೆ ಗಂಭೀರ ಗಾಯ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Samyuktha Hegde: ‘ಕ್ರೀಮ್​’ ಸಿನಿಮಾ ಶೂಟಿಂಗ್​ ವೇಳೆ ಅವಘಡ; ನಟಿ ಸಂಯುಕ್ತಾ ಹೆಗಡೆಗೆ ಗಂಭೀರ ಪೆಟ್ಟು
Edited By:

Updated on: Jul 27, 2022 | 8:44 PM

ಸಿನಿಮಾ ಚಿತ್ರೀಕರಣದ ವೇಳೆ ಎಷ್ಟೇ ಮುಂಜಾಗೃತೆ ತೆಗೆದುಕೊಂಡರೂ ಅದು ಕಡಿಮೆಯೇ. ಹೀಗಿದ್ದರೂ ಅವಘಡಗಳು ಸಂಭವಿಸುತ್ತವೆ. ಈಗ ‘ಕ್ರೀಮ್’​ ಸಿನಿಮಾ ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ‘ಕಿರಿಕ್ ಪಾರ್ಟಿ’ (Kirik Party) ಖ್ಯಾತಿಯ ಸಂಯುಕ್ತಾ ಹೆಗಡೆ (Samyuktha Hegde) ಕಾಲಿಗೆ ಗಂಭೀರ ಗಾಯ ಆಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರು ಬೇಗೆ ಗುಣಮುಖರಾಗಲಿ ಎಂದು ಫ್ಯಾನ್ಸ್ ಕೋರುತ್ತಿದ್ದಾರೆ.

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಇಂದು (ಜುಲೈ 27) ಸಂಜೆ ‘ಕ್ರೀಮ್​’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಈ ವೇಳೆ ಫೈಂಟಿಂಗ್ ದೃಶ್ಯವನ್ನು ಸೆರೆ ಹಿಡಿಯಲಾಗುತ್ತಿತ್ತು. ಡ್ಯೂಪ್​ ಬಳಕೆ ಮಾಡಲು ಚಿತ್ರತಂಡದವರು ನಿರ್ಧರಿಸಿದ್ದರು. ಆದರೆ, ಸಂಯುಕ್ತಾ ಇದಕ್ಕೆ ಒಪ್ಪಿಲ್ಲ. ಹೀಗಾಗಿ, ಅವರೇ ಈ ಸ್ಟಂಟ್ ಮಾಡಿದ್ದಾರೆ. ಈ ವೇಳೆ ಅವಘಡ ಸಂಭವಿಸಿದೆ ಎಂದು ಚಿತ್ರತಂಡದವರು ಹೇಳಿಕೊಂಡಿದ್ದಾರೆ.

‘ಸಂಯುಕ್ತಾ ಅವರು ಈಗ ಚೇತರಿಕೆ ಕಾಣುತ್ತಿದ್ದಾರೆ. ವೈದ್ಯರು 15 ದಿನ ವಿಶ್ರಾಂತಿ ಪಡೆಯಲು ಹೇಳಿದ್ದಾರೆ. ಅವರಿಗೆ ಕಣ್ಣಿನ ಬಳಿ, ಕಾಲಿಗೆ ಪೆಟ್ಟಾಗಿದೆ. ನಾವು ಡ್ಯೂಪ್ ಬಳಸಲು ಹೇಳಿದೆವು. ಆದರೆ, ಇದಕ್ಕೆ ಸಂಯುಕ್ತಾ ಒಪ್ಪಲಿಲ್ಲ. ಒಂದು ಫೈಟ್​ಅನ್ನು ನಿನ್ನೆ (ಜುಲೈ 26) ಶೂಟ್ ಮಾಡಲಾಗಿದೆ. ಸಿನಿಮಾ ಶೂಟಿಂಗ್ ಶೇ.90ರಷ್ಟು ಮುಗಿದಿತ್ತು. ಆಗಲೇ ಈ ರೀತಿ ಆಗಿದೆ. ಇದು ನೈಜ ಘಟನೆ ಆಧರಿಸಿ ಮಾಡಿದ ಸಿನಿಮಾ’ ಎಂದು ನಿರ್ಮಾಪಕರ ಡಿ.ಕೆ. ದೇವೇಂದ್ರ ಅವರು ಟಿವಿ9 ಕನ್ನಡ ಡಿಜಿಟಲ್​ಗೆ ಮಾಹಿತಿ ನೀಡಿದ್ದಾರೆ. ಅಭಿಷೇಕ್ ಬಸಂತ್ ನಿರ್ದೇಶನ,  ಪ್ರಭು ಸಾಹಸ ನಿರ್ದೇಶನ ಹಾಗೂ ಸುನೋಜ್ ವೇಲಾಯುಧನ್ ಛಾಯಾಗ್ರಹಣ ಚಿತ್ರಕ್ಕೆ ಇದೆ.

ಇದನ್ನೂ ಓದಿ
ಬಿಕಿನಿ ಧರಿಸಿ ಪೋಸ್​ ನೀಡಿದ ಸಂಯುಕ್ತಾ ಹೆಗಡೆ; ಟೆಂಪ್ರೇಚರ್​ ಹೆಚ್ಚಿಸಿದ್ದೀರಿ ಎಂದ ಅಭಿಮಾನಿಗಳು
‘ರಾಣ’ ಚಿತ್ರದ ವಿಶೇಷ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಸಂಯುಕ್ತಾ; ಶ್ರೇಯಸ್​ ಜತೆ ‘ಕಿರಿಕ್​ ಪಾರ್ಟಿ’ ಹುಡುಗಿ
ಸಂಯುಕ್ತಾ ಹೆಗ್ಡೆ ಹಲ್ಲೆ ಪ್ರಕರಣ: ಕಾಂಗ್ರೆಸ್​ ವಕ್ತಾರೆ ಕವಿತಾ ರೆಡ್ಡಿ ಅರೆಸ್ಟ್​
ಕಿರಿಕ್ ಹುಡುಗಿ ಸಂಯುಕ್ತಾ ಹೆಗ್ಡೆ ಫಿಟ್ನೆಸ್​ ಸೀಕ್ರೆಟ್​!

ಇದನ್ನೂ ಓದಿ: ಪಾರ್ಕ್​ನಲ್ಲಿ ನನ್ನ ಮೇಲೆ ಹಲ್ಲೆಗೆ ಯತ್ನ -ಕಾಂಗ್ರೆಸ್​ ವಕ್ತಾರೆ ವಿರುದ್ಧ ಸಂಯುಕ್ತಾ ಹೆಗ್ಡೆ ದೂರು

2016ರಲ್ಲಿ ತೆರೆಗೆ ಬಂದ ‘ಕಿರಿಕ್ ಪಾರ್ಟಿ’ ಸಿನಿಮಾ ಸೂಪರ್ ಹಿಟ್ ಆಯಿತು. ಆರ್ಯಾ ಹೆಸರಿನ ಪಾತ್ರದಲ್ಲಿ ಸಂಯುಕ್ತಾ ಮಿಂಚಿದರು. ಈ ಚಿತ್ರದಿಂದ ಅವರಿಗೆ ದೊಡ್ಡ ಯಶಸ್ಸು ಸಿಕ್ಕಿತು. ನಂತರ ತೆರೆಗೆ ಬಂದ ‘ಕಾಲೇಜ್ ಕುಮಾರ್’ ಚಿತ್ರದಲ್ಲಿ ಅವರು ನಟಿಸಿದ್ದರು. ‘ಕಿರಿಕ್ ಪಾರ್ಟಿ’ ರಿಮೇಕ್​ನಲ್ಲೂ ಸಂಯುಕ್ತಾ ನಟಿಸಿದ್ದರು. ನಂತರ ಹಲವು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ‘ರಾಣ’ ಚಿತ್ರದಲ್ಲಿ ಸಂಯುಕ್ತಾ ವಿಶೇಷ ಹಾಡಿಗೆ ಹೆಜ್ಜೆ ಹಾಕಿದ್ದು, ಈ ಸಿನಿಮಾ ತೆರೆಗೆ ಬರಬೇಕಿದೆ. ‘ಕ್ರೀಮ್’ ಸಿನಿಮಾಗೆ ಕೊನೆಯ ಹಂತದ ಶೂಟಿಂಗ್ ನಡೆಯುತ್ತಿದೆ. ಹೀಗಿರುವಾಗಲೇ ಈ ಅವಘಡ ಸಂಭವಿಸಿದೆ.

 

Published On - 8:03 pm, Wed, 27 July 22