ರಶ್ಮಿಕಾ ಮಂದಣ್ಣ ಅವರು ಇಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಲೇ ಇದೆ. ರಶ್ಮಿಕಾ ಮಂದಣ್ಣ ಅವರು ಇಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದ್ದು ಅನೇಕರಿಗೆ ಅಚ್ಚರಿ ತಂದಿದೆ. ಅವರು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ಹೆಸರು ಮಾಡಿದ್ದಾರೆ. ಅವರ ಜರ್ನಿ ಆರಂಭ ಆಗಿದ್ದು ಕನ್ನಡದಿಂದ. ಇಷ್ಟೆಲ್ಲ ಹೆಸರು ಮಾಡಿರೋ ರಶ್ಮಿಕಾ ಆರಂಭದ ದಿನಗಳು ಸುಲಭದಲ್ಲಿ ಇರಲಿಲ್ಲ. ಈ ಬಗ್ಗೆ ಅವರು ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು.
ರಶ್ಮಿಕಾ ಮಂದಣ್ಣ ನಟಿಸಿದ ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’. ಈ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ರಶ್ಮಿಕಾ ಮಂದಣ್ಣ ಹಿಂದಿರುಗಿ ನೋಡಲೇ ಇಲ್ಲ. ರಶ್ಮಿಕಾಗೆ ಸುಲಭದಲ್ಲಿ ಅವಕಾಶ ಸಿಕ್ಕಿತು, ಅವರು ಸುಲಭದಲ್ಲಿ ನಾಯಕಿ ಆದರು ಎಂಬುದು ಅನೇಕರ ಊಹೆ. ಆದರೆ, ಅಸಲಿ ವಿಚಾರ ಆ ರೀತಿಯಲ್ಲಿ ಇಲ್ಲ ಎಂಬುದು ನಿಮಗೆ ಗೊತ್ತೇ? ಆ ಬಗ್ಗೆ ನಾವು ಹೇಳುತ್ತಿದ್ದೇವೆ.
ರಶ್ಮಿಕಾ ಮಂದಣ್ಣ ಓದಿದ್ದು ಬೆಂಗಳೂರಿನಲ್ಲಿ. ಆಗ ಅವರು ಸಿನಿಮಾ ಮಾಡುವ ಆಸೆ ಇಟ್ಟುಕೊಂಡಿದ್ದರು. ಈ ಕಾರಣದಿಂದಲೇ ಅವರು ಸಾಕಷ್ಟು ಆಡಿಷನ್ಗಳನ್ನು ಕೂಡ ನೀಡಿದರು. ಆದರೆ, ಯಾವುದೂ ಯಶಸ್ಸು ಕಾಣಲಿಲ್ಲ. ಅವರೇ ಹೇಳುವ ಪ್ರಕಾರ 20ರಿಂದ 25 ಸಿನಿಮಾಗಳಿಗೆ ರಶ್ಮಿಕಾ ಆಡಿಷನ್ ನೀಡಿದ್ದರು. ಎಲ್ಲರೂ ‘ನೀವು ನಟನೆಗೆ ಸೂಕ್ತರಲ್ಲ, ನಿಮ್ಮ ಮುಖ ಸರಿ ಹೊಂದಲ್ಲ’ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ದರು. ಇದು ರಶ್ಮಿಕಾಗೆ ಬೇಸರ ಮೂಡಿಸುತ್ತಿತ್ತು ಮತ್ತು ಅವರು ಮನೆಗೆ ಬಂದು ಅಳುತ್ತಿದ್ದರು.
‘ಗೆಳೆಯರೇ ಗೆಳತಿಯರೇ ಹೆಸರಿನ ಸಿನಿಮಾಗೆ ನಾನು ಆಡಿಷನ್ ಕೊಟ್ಟೆ. ಈ ಚಿತ್ರಕ್ಕಾಗಿ 2-3 ತಿಂಗಳು ನಟನಾ ತರಬೇತಿ ಕೂಡ ನಡಯಿತು. ಆ ಬಳಿಕ ಸಿನಿಮಾ ಸೆಟ್ಟೇರಲಿಲ್ಲ. ಮರಳಿ ಮನೆಗೆ ಬಂದೆ. ನಂತರ ಶಿಕ್ಷಣ ಮುಗಿಸಿ ಮನೆಗೆ ಹೋಗಬೇಕು ಎಂದುಕೊಂಡೆ. ಕುಟುಂಬದವರು ಹಾಗೆ ಹೇಳಿದರು. ಆಗ ಕಿರಿಕ್ ಪಾರ್ಟಿ ತಂಡದಿಂದ ಕರೆ ಬಂತು’ ಎಂದಿದ್ದಾರೆ ರಶ್ಮಿಕಾ ಮಂದಣ್ಣ. ಅಲ್ಲಿಂದ ರಶ್ಮಿಕಾ ಮಂದಣ್ಣ ಲಕ್ ಪೂರ್ತಿ ಬದಲಾಗಿ ಹೋಯಿತು.
ಇದನ್ನೂ ಓದಿ: ವಿಜಯ್ ದೇವರಕೊಂಡ ಕುಟುಂಬಕ್ಕೆ ‘ಪುಷ್ಪ 2’ ತೋರಿಸಿದ ರಶ್ಮಿಕಾ ಮಂದಣ್ಣ
2016ರ ಡಿಸೆಂಬರ್ನಲ್ಲಿ ‘ಕಿರಿಕ್ ಪಾರ್ಟಿ’ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ನಟಿಸಿದ ಬಹುತೇಕ ಎಲ್ಲಾ ಕಲಾವಿದರು ಯಶಸ್ಸು ಕಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.