Sign In

By signing in or creating an account, you agree with Associated Broadcasting Company's Terms & Conditions and Privacy Policy.

Komal Kumar: ‘ನಮೋ ಭೂತಾತ್ಮ 2’ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್​; ಟೀಸರ್​ ನೋಡಿ ಖುಷಿಪಟ್ಟ ಕೋಮಲ್​ ಫ್ಯಾನ್ಸ್​

Namo Bhootatma 2: ‘ನಮೋ ಭೂತಾತ್ಮ’ ಸಿನಿಮಾ 2014ರಲ್ಲಿ ಬಿಡುಗಡೆ ಆಗಿತ್ತು. ಇಷ್ಟು ವರ್ಷಗಳ ಬಳಿಕ ಸೀಕ್ವೆಲ್​ ಬರುತ್ತಿದೆ. ಧ್ರುವ ಸರ್ಜಾ ಅವರು ಈ ಟೀಸರ್​ ಬಿಡುಗಡೆ ಮಾಡಿದ್ದಾರೆ.

Komal Kumar: ‘ನಮೋ ಭೂತಾತ್ಮ 2’ ಚಿತ್ರಕ್ಕೆ ಧ್ರುವ ಸರ್ಜಾ ಸಾಥ್​; ಟೀಸರ್​ ನೋಡಿ ಖುಷಿಪಟ್ಟ ಕೋಮಲ್​ ಫ್ಯಾನ್ಸ್​
‘ನಮೋ ಭೂತಾತ್ಮ 2’ ಟೀಸರ್ ಬಿಡುಗಡೆ ಕಾರ್ಯಕ್ರಮ
Follow us
ಮದನ್​ ಕುಮಾರ್​
|

Updated on: Jul 04, 2023 | 1:18 PM

ಕಾಮಿಡಿ ಪಾತ್ರಗಳ ಮೂಲಕ ನಟ ಕೋಮಲ್​ ಕುಮಾರ್​ (Komal Kumar) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಒಂದಷ್ಟು ದಿನಗಳ ಕಾಲ ಸೈಲೆಂಟ್​ ಆಗಿದ್ದ ಅವರು ಈಗ ಮತ್ತೆ ಆ್ಯಕ್ಟೀವ್​ ಆಗಿದ್ದಾರೆ. ಬ್ಯಾಕ್​ ಟು ಬ್ಯಾಕ್​ ಸಿನಿಮಾ ಕೆಲಸಗಳಲ್ಲಿ ಅವರು ತೊಡಗಿಕೊಂಡಿದ್ದಾರೆ. ಕೋಮಲ್​ ಕುಮಾರ್​ ಅಭಿನಯಿಸಿರುವ ‘ನಮೋ ಭೂತಾತ್ಮ 2’ (Namo Bhootatma 2) ಸಿನಿಮಾ ಟೀಸರ್​ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಖ್ಯಾತ ನಟ ಧ್ರುವ ಸರ್ಜಾ (Dhruva Sarja) ಅವರು ಈ ಟೀಸರ್​ ಬಿಡುಗಡೆ ಮಾಡಿದರು. ಡ್ಯಾನ್ಸ್ ಮಾಸ್ಟರ್​ ಮುರಳಿ ಅವರು ‘ನಮೋ ಭೂತಾತ್ಮ 2’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದಾರೆ. ಟೀಸರ್​ ನೋಡಿದ ಕೋಮಲ್​ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಕೋಮಲ್​ ಅವರ ನಟನೆ ಎಂದರೆ ಧ್ರುವ ಸರ್ಜಾ ಅವರಿಗೂ ಇಷ್ಟ. ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಮಾತನಾಡಿದರು. ‘ನಾನು ಆರಂಭದಿಂದಲೂ ಕೋಮಲ್ ಅವರ ಫ್ಯಾನ್​. ಅವರು ನಟಿಸಿದ ಎಲ್ಲ ಸಿನಿಮಾಗಳನ್ನು ನೋಡಿ ಎಂಜಾಯ್​ ಮಾಡಿದ್ದೇನೆ. ಈಗ ‘ನಮೋ ಭೂತಾತ್ಮ 2’ ಸಿನಿಮಾದ ರಿಲೀಸ್​ಗಾಗಿ ಕಾಯುತ್ತಿದ್ದೇನೆ. ಮುರಳಿ ಮಾಸ್ಟರ್ ಅವರು ನನ್ನ ಸಿನಿಮಾದ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ‘ನಮೋ ಭೂತಾತ್ಮ 2’ ಸಿನಿಮಾ ಯಶಸ್ವಿ ಆಗಲಿ’ ಎಂದು ಅವರು ವಿಶ್​ ಮಾಡಿದರು.

‘ನಮೋ ಭೂತಾತ್ಮ’ ಸಿನಿಮಾ 2014ರಲ್ಲಿ ಬಿಡುಗಡೆ ಆಗಿತ್ತು. ಇಷ್ಟು ವರ್ಷಗಳ ಬಳಿಕ ಸೀಕ್ವೆಲ್​ ಬರುತ್ತಿದೆ. ಆ ಬಗ್ಗೆ ಕೋಮಲ್​ ಮಾತನಾಡಿದ್ದಾರೆ. ‘ನಾನು ನಿರ್ಮಿಸಿ, ನಟಿಸಿದ್ದ ನಮೋ ಭೂತಾತ್ಮ ಚಿತ್ರದ ಮೊದಲ ಭಾಗಕ್ಕೆ ಮೆಚ್ಚುಗೆ ಸಿಕ್ಕಿತ್ತು. ನಂತರ ಮುರಳಿ ಮಾಸ್ಟರ್ ಮತ್ತು ನಾನು ಇನ್ನೆರಡು ಸಿನಿಮಾಗಳ ಬಗ್ಗೆ ಚರ್ಚೆ ಮಾಡಿದ್ದೆವು. ಆದರೆ ಎಷ್ಟೋ ವರ್ಷಗಳ ನಂತರ ‘ನಮೋ ಭೂತಾತ್ಮ 2’ ಸಿನಿಮಾ ಮಾಡುತ್ತಿದ್ದೇವೆ. ಮೊದಲ ಭಾಗದಲ್ಲಿ ಹಾರರ್​ ಹೆಚ್ಚಾಗಿತ್ತು. ಆದರೆ 2ನೇ ಪಾರ್ಟ್​ನಲ್ಲಿ ಕಾಮಿಡಿ ಕೂಡ ಜಾಸ್ತಿ ಇರುತ್ತದೆ’ಎಂದಿದ್ದಾರೆ ಕೋಮಲ್ ಕುಮಾರ್. ಈ ಸಿನಿಮಾದಲ್ಲಿ ನಾಯಕಿಯಾಗಿ ಲೇಖಾ ಚಂದ್ರ ನಟಿಸಿದ್ದಾರೆ. ಜಿ.ಜಿ, ಮೋನಿಕಾ, ವರುಣ್ ರಾಜ್ ಕೂಡ ಚಿತ್ರತಂಡದಲ್ಲಿದ್ದಾರೆ.

ಇದನ್ನೂ ಓದಿ: ಈಗ ನಮೋ ಭೂತಾತ್ಮ ನಂತರ ರೋಬೋ, ಒಟ್ನಲ್ಲಿ ಕೋಮಲ್ ಬಹು ಬ್ಯುಸಿ

ಮತ್ತೊಮ್ಮೆ ಕೋಮಲ್​ ಕುಮಾರ್​ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದಕ್ಕೆ ಮುರಳಿ ಮಾಸ್ಟರ್​ ಸಂತಸ ವ್ಯಕ್ತಪಡಿಸಿದ್ದಾರೆ. ‘ನನ್ನ ಅಕ್ಕನ ಮಗ ಸಂತೋಷ್ ಶೇಖರ್ ಅವರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಕೊರೊನಾ ಸಮಯದಲ್ಲಿ ಈ ಸಿನಿಮಾದ ಕಥೆಯನ್ನು ಸಿದ್ಧ ಮಾಡಿಕೊಂಡಿದ್ದೆ. ನಂತರ ಕೋಮಲ್ ಅವರಿಗೆ ಕಥೆ ಹೇಳಿದೆವು. ಅವರು ಅಭಿನಯಿಸಲು ಒಪ್ಪಿಕೊಂಡರು. ಶೀಘ್ರದಲ್ಲೇ ಚಿತ್ರವನ್ನು ತೆರೆಗೆ ತರುತ್ತೇವೆ’ ಎಂದು ನಿರ್ದೇಶಕ ಮುರಳಿ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ಬುಸ್ ಬುಸ್ ನಾಗಪ್ಪನಿಂದ ಬೈಕ್ ಸವಾರ ಬಚಾವ್: ಎದೆ ಝಲ್​ ಎನ್ನಿಸುವ ವಿಡಿಯೋ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ವರದಿಯ ಬಗ್ಗೆ ಸಿಎಂ ಎಲ್ಲರ ಅಭಿಪ್ರಾಯ ಕೇಳಿದ್ದಾರೆ: ರಾಮಲಿಂಗಾರೆಡ್ಡಿ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಬಿಜೆಪಿಯನ್ನು ಬಹುಮತದೊಂದಿಗೆ ಅಧಿಕಾರಕ್ಕೆ ತರೋದು ಎಲ್ಲರ ಸಂಕಲ್ಪ: ವಿಜಯೇಂದ್ರ
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮೋದಿಯನ್ನು ಭೇಟಿಯಾಗಿ ವಕ್ಫ್ ಕಾಯ್ದೆಗೆ ಧನ್ಯವಾದ ಸಲ್ಲಿಸಿದ ಮುಸ್ಲಿಂ ನಿಯೋಗ!
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ
ಮುಷ್ಕರದಿಂದ ಸಾರ್ವಜನಿಕರಿಗಾದ ತೊಂದರೆಗಾಗಿ ವಿಷಾದಿಸುತ್ತೇವೆ: ಷಣ್ಮುಗಪ್ಪ