ಆರು ವರ್ಷಗಳ ಸುಧೀರ್ಘ ಗ್ಯಾಪ್ ಬಳಿಕ ಕೋಮಲ್ (Komal) ನಟನೆಯ ನಟನೆಯ ಮೊದಲ ಸಿನಿಮಾ ಉಂಡೆನಾಮ (Unde Nama) ಕಳೆದ ಶುಕ್ರವಾರವಷ್ಟೆ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸುದ್ದಿಗೋಷ್ಠಿ ಕರೆದಿದ್ದ ಉಂಡೆನಾಮ ಚಿತ್ರತಂಡ ಸಿನಿಮಾ ಹಿಟ್ (Hit Movie) ಎಂದು ಘೋಷಿಸಿದ್ದು ಮಾತ್ರವೇ ಅಲ್ಲದೆ, ಸಿನಿಮಾವನ್ನು ತೆಲುಗು, ತಮಿಳು ಇನ್ನಿತರೆ ಭಾಷೆಗಳಿಗೆ ಡಬ್ ಮಾಡುವ ಬಗ್ಗೆ ಅಥವಾ ರೀಮೇಕ್ ಮಾಡುವ ಬಗ್ಗೆ ಆಲೋಚನೆ ಮಾಡುತ್ತಿರುವುದಾಗಿ ಹೇಳಿದ್ದಾರೆ. ಅಲ್ಲದೆ ಉಂಡೆನಾಮ ಸಿನಿಮಾವನ್ನು ವಿದೇಶದಲ್ಲಿಯೂ ಬಿಡುಗಡೆ ಮಾಡಲು ಮುಂದಾಗಿದೆ ಚಿತ್ರತಂಡ!
ಸಿನಿಮಾ ಬಿಡುಗಡೆ ಆಗಿ ಮೂರು ದಿನವಷ್ಟೆ ಆಗಿದೆ ಆದರೆ ಈ ಮೂರು ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಚೆನ್ನಾಗಿದೆ. ಬಹಳ ಚೆನ್ನಾಗಿದೆ. ನಾವು ಸಿನಿಮಾವನ್ನು ಬಿಡುಗಡೆ ಮಾಡುವಾಗಲೆ ಸುಮಾರು 180-200 ಸ್ಕ್ರೀನ್ಗಳಲ್ಲಿ ಬಿಡುಗಡೆ ಮಾಡಿದ್ದೆವು ಮುಂದಿನ ದಿನಗಳಲ್ಲಿ ಮಲ್ಟಿಪ್ಲೆಕ್ಸ್ಗಳಲ್ಲಿ ಸ್ಕ್ರೀನ್ ಸಂಖ್ಯೆಯನ್ನು ಇನ್ನಷ್ಟು ಹೆಚ್ವಳವಾಗಲಿದೆ. ಇನ್ನು ಕೊಚ್ಚಿ, ಚೆನ್ನೈ ನಗರಗಳಲ್ಲಿ ಮುಂದಿನ ವಾರ ಅಥವಾ ಅದರ ಮುಂದಿನ ವಾರ ಬಿಡುಗಡೆ ಮಾಡಲಿದ್ದೇವೆ. ಅದರ ಜೊತೆಗೆ ಅಮೆರಿಕ, ಕೆನಡ ಹಾಗೂ ಸಿಂಗಪುರಗಳಲ್ಲಿಯೂ ನಮ್ಮ ಸಿನಿಮಾ ಬಿಡುಗಡೆ ಆಗಲಿದೆ ಎಂದಿದ್ದಾರೆ ಸಿನಿಮಾದ ವಿತರಕ ಗಂಗಾಧರ್.
ನಟ ಕೋಮಲ್ ಮಾತನಾಡಿ, ”ಸಿನಿಮಾದ ಕತೆ ಯೂನಿವರ್ಸಲ್ ಆದದ್ದು, ಹಾಗಾಗಿ ಸಿನಿಮಾವನ್ನು ಇತರೆ ಭಾಷೆಗಳಿಗೆ ತೆಗೆದುಕೊಂಡು ಹೋಗುವ ಬಗ್ಗೆ ಚರ್ಚೆ ನಡೆಯುತ್ತಿದೆ. ಡಬ್ ಮಾಡುವುದಾ ಅಥವಾ ರೀಮೇಕ್ ಮಾಡುವುದಾ ಯೋಚಿಸುತ್ತಿದ್ದೇವೆ. ಡಬ್ ಹೇಗಿದ್ದರೂ ಆಗಿಯೇ ಆಗುತ್ತದೆ ಅದರ ಜೊತೆಗೆ ರೀಮೇಕ್ ಸಹ ಮಾಡಿ. ಬೇರೆ ರಾಜ್ಯಗಳಲ್ಲಿ ನಾವ್ಯಾರೊ ಗೊತ್ತಿಲ್ಲ ಹಾಗಾಗಿ ಅಲ್ಲಿನ ಕಲಾವಿದರನ್ನು ಇಟ್ಟುಕೊಂಡು ಇದೇ ಸಿನಿಮಾವನ್ನು ಮಾಡಿದರೆ ಖಂಡಿತ ಚೆನ್ನಾಗಿ ಆಗುತ್ತದೆ ಎಂದಿದ್ದಾರೆ ಕೋಮಲ್.
ಉಂಡೆನಾಮ ಸಿನಿಮಾವು ಕೋವಿಡ್ ಕುರಿತ ಕತೆಯನ್ನು ಹೊಂದಿದೆ. ಸಿನಿಮಾದಲ್ಲಿ ಕೋಮಲ್ ಜೊತೆಗೆ ಹರೀಶ್ರಾಜ್, ತಬಲಾ ನಾಣಿ, ಬ್ಯಾಂಕ್ ಜನಾರ್ಧನ್ ಅವರುಗಳು ನಟಿಸಿದ್ದಾರೆ. ಸಿನಿಮಾಕ್ಕೆ ಧನ್ಯಾ ಬಾಲಕೃಷ್ಣ ಹಾಗೂ ತನಿಷಾ ಕುಪ್ಪಂಡ ನಾಯಕಿಯರು. ಮೊದಲ ರಾತ್ರಿ ಮಾಡಿಕೊಳ್ಳಲು ಕಷ್ಟಪಡುತ್ತಿದ್ದ ಯುವಕನೊಬ್ಬ ಕೋವಿಡ್ ಲಾಕ್ಡೌನ್ನಿಂದ ಅನುಭವಿಸುವ ಸಮಸ್ಯೆಗಳ ಬಗೆಗಿನ ಸಿನಿಮಾ ಇದಾಗಿದೆ.
ಮೊದಲಿಗೆ ಈ ಸಿನಿಮಾದ ಹೆಸರು 2020 ಎಂದಿತ್ತು, ಆದರೆ ಚಿತ್ರೀಕರಣದ ಹಂತದಲ್ಲಿ ಸಿನಿಮಾದ ಹೆಸರನ್ನು ಉಂಡೆನಾಮ ಎಂದು ಬದಲಾಯಿಸಲಾಗಿತ್ತು. ಸಿನಿಮಾದ ಪ್ರಚಾರದ ವೇಳೆ ಭಾವುಕರಾಗಿ ಮಾತನಾಡಿದ ನಟ ಕೋಮಲ್, ಚಿತ್ರರಂಗದಿಂದ ದೂರವಿದ್ದ ಈ ಆರು ವರ್ಷ ಬಹಳ ಕಷ್ಟ ಅನುಭವಿಸಿದ್ದೇನೆ, ಸಾವಿನೊಂದಿಗೆ ಹೋರಾಡಿ ಮರಳಿ ಬಂದಿದ್ದೇನೆ ಎಂದಿದ್ದರು. ಕೋಮಲ್ರ ಸಹೋದರ, ನಟ, ಸಂಸದ ಜಗ್ಗೇಶ್ ಸಹ ಕೋಮಲ್ ರ ಕಮ್ಬ್ಯಾಕ್ ಸಿನಿಮಾಕ್ಕಾಗಿ ಜೊತೆಗೆ ನಿಂತಿದ್ದು, ಪ್ರಚಾರ ಕಾರ್ಯದಲ್ಲಿ ಸಕ್ರಿಯರಾಗಿ ಭಾಗವಹಿಸಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ