ನವೆಂಬರ್ 11ರಂದು ಮಂಗಳೂರಲ್ಲಿ ‘ಕೊರಗಜ್ಜ’ ಚಿತ್ರದ ಗ್ರ್ಯಾಂಡ್ ಈವೆಂಟ್; ಸಿಗಲಿದೆ ಸರ್ಪ್ರೈಸ್
ಸುಧೀರ್ ಅತ್ತಾವರ್ ನಿರ್ದೇಶನದ ‘ಕೊರಗಜ್ಜ’ ಸಿನಿಮಾ 800 ವರ್ಷಗಳ ಪುರಾತನ ಕಥಾಹಂದರ ಹೊಂದಿದೆ. ನವೆಂಬರ್ 11ರಂದು ಮಂಗಳೂರಿನಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ಟ್ರೈಲರ್ ಅಥವಾ ಆಡಿಯೋ ಬಿಡುಗಡೆಗೆ ಸಜ್ಜಾಗಿದೆ. ಗೃಹ ಸಚಿವ ಜಿ. ಪರಮೇಶ್ವರ್ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಕಿಡಿಕೇಡಿಗಳಿಂದ ಬೆದರಿಕೆ ಇದ್ದು, ಭದ್ರತೆಗಾಗಿ ಮನವಿ ಮಾಡಲಾಗಿದೆ. ಈ ಐತಿಹಾಸಿಕ ಚಿತ್ರ ಆರು ಭಾಷೆಗಳಲ್ಲಿ ತೆರೆಕಾಣಲಿದೆ.

ಸುಧೀರ್ ಅತ್ತಾವರ್ ಅವರು ನಿರ್ದೇಶನ ಮಾಡಿರೋ ‘ಕೊರಗಜ್ಜ’ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಸೃಷ್ಟಿ ಆಗಿದೆ. ಈ ಚಿತ್ರದಲ್ಲಿ 800 ವರ್ಷಗಳ ಹಿಂದಿನ ಕಥೆ ಇದೆ. ಈ ಸಿನಿಮಾ ರಿಲೀಸ್ಗೆ ರೆಡಿ ಇದೆ. ನವೆಂಬರ್ 11ರಂದು ಮಂಗಳೂರಿನಲ್ಲಿ ಅದ್ದೂರಿ ಈವೆಂಟ್ ಮಾಡಲು ಪ್ಲ್ಯಾನ್ ರೂಪಿಸಲಾಗಿದೆ. ಈ ವೇಳೆ ಚಿತ್ರದ ಟ್ರೇಲರ್ ಲಾಂಚ್ ಅಥವಾ ಆಡಿಯೋ ಲಾಂಚ್ ನಡೆಸೋ ಪ್ಲ್ಯಾನ್ ಇದೆ. ಇದಕ್ಕೆ ದೊಡ್ಡ ಮಟ್ಟದಲ್ಲಿ ಪ್ಲ್ಯಾನ್ ರೂಪಿಸಲಾಗಿದೆ.
ಸುಧೀರ್ ಅತ್ತಾವರ್ ಅವರು ‘ಕೊರಗಜ್ಜ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾಗೆ ರಾಜ್ಯದ ಗೃಹ ಸಚಿವ ಜಿ ಪರಮೇಶ್ವರ್ ಅವರು ಮೆಚ್ಚುಗೆ ಸೂಚಿಸಿದ್ದಾರೆ. ನಶಿಸಿ ಹೋಗುತ್ತಿರುವ ನಮ್ಮ ಪುರಾತನ ಸಂಸ್ಕ್ರತಿ ಹಾಗೂ ಕಲೆಯನ್ನು ‘ಕೊರಗಜ್ಜ’ ರೀತಿಯ ಚಿತ್ರಗಳ ಮೂಲಕ ಜನರ ಎದುರು ತಂದಿಡುವ ಪ್ರಯತ್ನ ಮಾಡಿರುವುದಕ್ಕೆ ಅವರು ಮೆಚ್ಚುಗೆ ಸೂಚಿಸಿದ್ದಾರೆ.
ನವೆಂಬರ್ 11ರಂದು ಮಂಗಳೂರಿನಲ್ಲಿ ‘ಕೊರಗಜ್ಜ’ ಚಿತ್ರದ ಪತ್ರಿಕಾಗೋಷ್ಠಿ ನಡೆಯಲಿದೆ. ಈ ವೇಳೆ ಭಾರತದ ವಿವಿಧ ಕಡೆಗಳಿಂದ ಪತ್ರಕರ್ತರು ಆಗಮಿಸಲಿದ್ದಾರೆ. ಈ ಚಿತ್ರ ಕನ್ನಡ ಸೇರಿದಂತೆ ಆರು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಹೀಗಾಗಿ, ದೊಡ್ಡ ಮಟ್ಟದಲ್ಲಿ ಈವೆಂಟ್ ಮಾಡಲಾಗುತ್ತಿದೆ. ಸಿನಿಮಾದ ಟ್ರೇಲರ್ ಅಥವಾ ಆಡಿಯೋ ಲಾಂಚ್ ಮಾಡುವ ಆಲೋಚನೆ ತಂಡಕ್ಕೆ ಇದೆ.
ಕೆಲ ಕಿಡಿಕೇಡಿಗಳು ‘ಕೊರಗಜ್ಜ’ ತಂಡಕ್ಕೆ ಬೆದರಿಕೆ ಹಾಕುತ್ತಿದ್ದಾರೆ. ಹೀಗಾಗಿ, ಇಡೀ ತಂಡದವರು ಪರಮೇಶ್ವರ್ ಬಳಿ ಈ ಬಗ್ಗೆ ಮನವಿ ಮಾಡಿ ಭದ್ರತೆ ನೀಡುವಂತೆ ಕೋರಿದೆ. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ ಪರಮೇಶ್ವರ್, ಮಂಗಳೂರಿನ ಪೋಲಿಸ್ ಕಮಿಷನರ್ ಜೊತೆ ವಿಷಯ ಪ್ರಸ್ತಾಪಿಸಿದ್ದಾರೆ.
‘ಕೊರಗಜ್ಜ’ ಸಿನಿಮಾದಲ್ಲಿ ಸುಮಾರು 800 ವರ್ಷಗಳ ಹಿಂದಿನ ಕಥೆ ಇದೆ. ಈ ಚಿತ್ರದಲ್ಲಿ ನಟ ಕಬೀರ್ ಬೇಡಿ ಅವರು ಉದ್ಯಾವರ ಅರಸರ ಪಾತ್ರ ನಿಭಾಯಿಸಿದ್ದಾರೆ. ಪದ್ಮಶ್ರೀ ಪ್ರಶಸ್ತಿ ವಿಜೇತ ಎಂ.ಎಸ್. ಸತ್ಯು ಅವರು ತಮ್ಮ 96ನೇ ವಯಸ್ಸಿನಲ್ಲಿ ‘ಕೊರಗಜ್ಜ’ ಚಿತ್ರಕ್ಕೆ ವಸ್ತ್ರ ವಿನ್ಯಾಸಕ್ಕೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: 6 ಭಾಷೆಗಳಲ್ಲಿ ಬಿಡುಗಡೆಗೆ ಸಿದ್ಧವಾಯ್ತು ಬಹುನಿರೀಕ್ಷಿತ ‘ಕೊರಗಜ್ಜ’ ಸಿನಿಮಾ
‘ಕೊರಗಜ್ಜ’ ಚಿತ್ರವನ್ನು ತ್ರಿವಿಕ್ರಮ ಸಪಲ್ಯ ನಿರ್ಮಾಣ ಮಾಡಿದ್ದಾರೆ. ಗೋಪಿ ಸುಂದರ್ ಸಂಗೀತ ಸಂಯೋಜನ ಮಾಡಿದ್ದಾರೆ. ಶ್ರೇಯಾ ಘೋಷಾಲ್, ಶಂಕರ್ ಮಹದೇವನ್, ಸುನಿಧಿ ಚೌಹಾನ್, ಜಾವೆದ್ ಆಲಿ, ಸ್ವರೂಪ್ ಖಾನ್, ಶರೋನ್ ಪ್ರಭಾಕರ್, ಅರ್ಮನ್ ಮಲಿಕ್ ಜೊತೆಗೆ ದಕ್ಷಿಣ ಭಾರತದ ಪ್ರತಿಭೆಗಳಾದ ರಮೇಶ್ ಚಂದ್ರ, ಸನ್ನಿದಾನಂದನಮ್, ವಿಜೇಶ್ ಗೋಪಾಲ್, ಅನಿಲ ರಾಜಿವ್, ಪ್ರತಿಮ ಭಟ್, ಕಾಂಜನ ಮೊದಲಾದವರು ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ. ಚಿತ್ರಕ್ಕೆ ಮನೋಜ್ ಪಿಳ್ಳೈ ಮತ್ತು ಪವನ್ ಛಾಯಾಗ್ರಹಣ, ವಿದ್ಯಾಧರ್ ಶೆಟ್ಟಿ ಮತ್ತು ಜಿತ್ ಜೋಶ್ ಸಂಕಲನ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




