‘ಕೊತ್ತಲವಾಡಿ’ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?

ಯಶ್ ತಾಯಿಯ ಪುಷ್ಪಾ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರವು ಆಗಸ್ಟ್ 1 ರಂದು ಬಿಡುಗಡೆಯಾಯಿತು. ಆದರೆ, ನಿರೀಕ್ಷಿತ ಗಳಿಕೆ ಸಾಧಿಸಲು ವಿಫಲವಾಗಿದೆ. sacnilk ವರದಿಯ ಪ್ರಕಾರ, ಮೊದಲ ದಿನದ ಗಳಿಕೆ ಲಕ್ಷಗಳಲ್ಲಿದೆ. ‘ಸು ಫ್ರಮ್ ಸೋ’ ಚಿತ್ರದ ಯಶಸ್ಸಿನಿಂದಾಗಿ ‘ಕೊತ್ತಲವಾಡಿ’ ಚಿತ್ರಕ್ಕೆ ಕಡಿಮೆ ಶೋ ಸಿಕ್ಕಿದೆ.

‘ಕೊತ್ತಲವಾಡಿ’ ಸಿನಿಮಾದ ಮೊದಲ ದಿನದ ಗಳಿಕೆ ಎಷ್ಟು?
ಕೊತ್ತಲವಾಡಿ

Updated on: Aug 04, 2025 | 3:00 PM

ಯಶ್ ತಾಯಿ ಪುಷ್ಪಾ ನಿರ್ಮಾಣದ ‘ಕೊತ್ತಲವಾಡಿ’ ಸಿನಿಮಾ (Kothalavadi) ಆಗಸ್ಟ್ 1ರಂದು ರಿಲೀಸ್ ಆಗಿದೆ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೇಕಿಂಗ್ ವಿಚಾರದಲ್ಲಿ ಹಳೆಯ ಸಿದ್ಧ ಸೂತ್ರಗಳನ್ನು ಬಳಕೆ ಮಾಡಲಾಗಿದೆ ಎಂದು ಅನೇಕರು ಬೇಸರ ಹೊರಹಾಕಿದ್ದಾರೆ. ಹೀಗಿರುವಾಗಲೇ ‘ಕೊತ್ತಲವಾಡಿ’ ಚಿತ್ರದ ಗಳಿಕೆಯ ಬಗ್ಗೆ ಬಾಕ್ಸ್ ಆಫೀಸ್ ಟ್ರ್ಯಾಕರ್ sacnilk ವರದಿ ಮಾಡಿದೆ. ಈ ಸಿನಿಮಾದ ಗಳಿಕೆ ಹೇಳಿಕೊಳ್ಳುವ ರೀತಿಯಲ್ಲಿ ಇಲ್ಲ.

‘ಕೊತ್ತಲವಾಡಿ’ ಸಿನಿಮಾದಲ್ಲಿ ಪೃಥ್ವಿ ಅಂಬರ್, ಗೋಪಾಲ್ ದೇಶಪಾಂಡೆ, ಕಾವ್ಯಾ ಶೈವ ರಾಜೇಶ್ ನಟರಂಗ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾಗೆ ಶ್ರೀರಾಜು ನಿರ್ದೇಶನ ಮಾಡಿದ್ದಾರೆ. ಪುಷ್ಪಾ ಹಾಗೂ ಅರುಣ್ ಕುಮಾರ್ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಆದರೆ, ನಿರೀಕ್ಷೆ ಹುಸಿಯಾಗಿದೆ.

Sacnilk ವರದಿ ಪ್ರಕಾರ, ಈ ಸಿನಿಮಾದ ಮೊದಲ ದಿನದ ಗಳಿಕೆ 4 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ. ಇದು ಆರಂಭಿಕ ಲೆಕ್ಕವೇ ಆಗಿರಬಹುದು. ಒಂದೊಮ್ಮೆ ಪೂರ್ತಿ ಲೆಕ್ಕ ಸಿಕ್ಕರೂ ಚಿತ್ರದ ಗಳಿಕೆ ಅರ್ಧ ಕೋಟಿ ದಾಟೋದು ಅನುಮಾನ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ
ಗಂಟೆಗೆ 11 ಸಾವಿರ ಟಿಕೆಟ್ ಮಾರಿದ ಸು ಫ್ರಮ್ ಸೋ; ಶುಕ್ರವಾರ ದಾಖಲೆ ಕಲೆಕ್ಷನ್
‘ನೀವು ಗಂಡಸರ ರೀತಿ ಕಾಣ್ತೀರಾ’ ಎಂದಿದ್ದಕ್ಕೆ ಖುಷಿ ಆಗಿದ್ದೇಕೆ ತಾಪ್ಸಿ?
‘ಕಿಂಗ್ಡಮ್’ ಕಲೆಕ್ಷನ್; ಮೊದಲ ದಿನವೇ ಬಾಕ್ಸ್ ಆಫೀಸ್ ಲೂಟಿ ಮಾಡಿದ ವಿಜಯ್
‘ಸು ಫ್ರಮ್ ಸೋ’ ಗೆದ್ದ ಖುಷಿಯಲ್ಲಿ ಬಾವ ಹೇಳೋದೇನು? ಯಾರಿವರು?

ಈ ಸಿನಿಮಾ ಇಷ್ಟು ಕಡಿಮೆ ಗಳಿಕೆ ಮಾಡಲು ‘ಸು ಫ್ರಮ್ ಸೋ’ ಚಿತ್ರದ ಅಬ್ಬರ ಕೂಡ ಕಾರಣ. ರಾಜ್ ಬಿ. ಶೆಟ್ಟಿ ನಿರ್ಮಾಣದ ಈ ಚಿತ್ರ ಸದ್ಯ ದಾಖಲೆಯ ಬುಕಿಂಗ್ ಕಾಣುತ್ತಿದೆ. ಈ ಚಿತ್ರದ ಎದುರು ‘ಕೊತ್ತಲವಾಡಿ’ ಸಿನಿಮಾ ಡಲ್ ಆಗಿರಬಹುದು ಎಂದು ಹೇಳಲಾಗುತ್ತಿದೆ. ಈ ಚಿತ್ರದ ಅಬ್ಬರ ಇನ್ನೂ ಕೆಲವು ದಿನ ಮುಂದುವರಿಯಲಿದೆ. ಇದರ ಮಧ್ಯೆ ‘ಕೊತ್ತಲವಾಡಿ’ ಸಿನಿಮಾ ಎದ್ದೇಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಕೊತ್ತಲವಾಡಿ’; ಅಪೂರ್ಣತೆಯ ಮಧ್ಯೆ ಹರಿಯುವ ಕಣ್ಣೀರ ಕೋಡಿ

ಇನ್ನು, ಈ ಚಿತ್ರಕ್ಕೆ ಸಿಕ್ಕ ಶೋಗಳ ಸಂಖ್ಯೆ ಕೂಡ ಕಡಿಮೆಯೇ. ‘ಕೊತ್ತಲವಾಡಿ’ ಸಿನಿಮಾಗೆ ಬೆಂಗಳೂರಿನಲ್ಲಿ ಇಂದು (ಆಗಸ್ಟ್ 2) ಕೇವಲ 25 ಶೋಗಳು ಸಿಕ್ಕಿವೆ. ‘ಕಿಂಗ್ಡಮ್’, ‘ಸು ಫ್ರಮ್ ಸೋ’ ಮೊದಲಾದ ಸಿನಿಮಾಗಳ ಅಬ್ಬರದ ಮಧ್ಯೆ ಈ ಚಿತ್ರ ಕಳೆದು ಹೋಗುವ ಭೀತಿ ನಿರ್ಮಾಪಕರಿಗೆ ಎದುರಾಗಿದೆ. ಈ ಸಿನಿಮಾಗೆ ಬುಕ್ ಮೈ ಶೋನಲ್ಲಿ 10ಕ್ಕೆ 7.5 ರೇಟಿಂಗ್ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:32 am, Sat, 2 August 25