‘ಜನ ನಾಯಗನ್’, ‘ಟಾಕ್ಸಿಕ್’ ಬಳಿಕ ‘ಕೆಡಿ’ ಚಿತ್ರಕ್ಕೆ ಬಂತೊಂದು ಸ್ಟ್ರಾಂಗ್ ಪ್ರತಿಸ್ಪರ್ಧಿ

ಕೆವಿಎನ್ ಪ್ರೊಡಕ್ಷನ್ಸ್‌ನ 'ಜನ ನಾಯಗನ್', 'ಟಾಕ್ಸಿಕ್' ಮತ್ತು 'ಕೆಡಿ' ಚಿತ್ರಗಳು ಬಿಡುಗಡೆ ಸವಾಲು ಎದುರಿಸುತ್ತಿವೆ. 'ಜನ ನಾಯಗನ್' ಸೆನ್ಸಾರ್ ಸಮಸ್ಯೆಯಿಂದ ವಿಳಂಬವಾಗಿದೆ, ರಾಜಕೀಯ ಒತ್ತಡದ ವದಂತಿಗಳಿವೆ. 'ಟಾಕ್ಸಿಕ್' ಮತ್ತು 'ಕೆಡಿ' ಕ್ರಮವಾಗಿ 'ಧುರಂಧರ್ 2' ಮತ್ತು 'ಪೆದ್ದಿ' ಚಿತ್ರಗಳೊಂದಿಗೆ ದೊಡ್ಡ ಬಾಕ್ಸ್ ಆಫೀಸ್ ಸ್ಪರ್ಧೆ ಎದುರಿಸಲಿವೆ.

‘ಜನ ನಾಯಗನ್’, ‘ಟಾಕ್ಸಿಕ್’ ಬಳಿಕ ‘ಕೆಡಿ’ ಚಿತ್ರಕ್ಕೆ ಬಂತೊಂದು ಸ್ಟ್ರಾಂಗ್ ಪ್ರತಿಸ್ಪರ್ಧಿ
ಸಿನಿಮಾ ಸುದ್ದಿ

Updated on: Feb 05, 2026 | 10:50 AM

‘ಕೆವಿಎನ್ ಪ್ರೊಡಕ್ಷನ್ಸ್’ ಅಡಿಯಲ್ಲಿ ‘ಜನ ನಾಯಗನ್’, ‘ಟಾಕ್ಸಿಕ್’ (Toxic) ಹಾಗೂ ‘ಕೆಡಿ’ ಸಿನಿಮಾಗಳು ಒಟ್ಟೊಟ್ಟಿಗೆ ಸಿದ್ಧವಾಗಿವೆ. ‘ಜನ ನಾಯಗನ್’ ಜನವರಿ 9ಕ್ಕೆ ರಿಲೀಸ್ ಆಗಬೇಕಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ‘ಟಾಕ್ಸಿಕ್’ ಚಿತ್ರ ಮಾರ್ಚ್​ 19ರಂದು ತೆರೆಗೆ ಬರುತ್ತಿದೆ. ಇದಕ್ಕೆ ಬಾಲಿವುಡ್​​ನ ‘ಧುರಂಧರ್ 2’ ತೀವ್ರ ಪ್ರತಿಸ್ಪರ್ಧೆ ನೀಡುತ್ತಿದೆ. ಏಪ್ರಿಲ್ 30ಕ್ಕೆ ‘ಕೆಡಿ’ ಸಿನಿಮಾ ಬರುತ್ತಿದ್ದು, ಇದಕ್ಕೆ ದೊಡ್ಡ ಪ್ರತಿಸ್ಪರ್ಧಿ ಒಂದು ಎದುರಾಗಿದೆ. ಅದುವೇ ‘ಪೆದ್ದಿ’ ಸಿನಿಮಾ.

‘ಕೆವಿಎನ್ ಪ್ರೊಕ್ಷನ್ಸ್’ ಕನ್ನಡದ ನಿರ್ಮಾಣ ಸಂಸ್ಥೆ. ‘ಜನ ನಾಯಗನ್’ ಸಿನಿಮಾನ ಇದೇ ಸಂಸ್ಥೆ ಅದ್ದೂರಿ ಬಜೆಟ್ ಅಲ್ಲಿ ನಿರ್ಮಾಣ ಮಾಡಿದೆ. ಈ ಸಿನಿಮಾ ತಿಂಗಳ ಹಿಂದೆಯೇ ತೆರೆಗೆ ಬರಬೇಕಿತ್ತು. ಆದರೆ, ಇನ್ನೂ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ. ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡದೆ ಇರುವುದೆ ಇದಕ್ಕೆ ಕಾರಣ. ಇದು ಚಿತ್ರದ ಚಿಂತೆಗೆ ಕಾರಣ ಆಗಿದೆ. ಈ ಚಿತ್ರ ರಿಲೀಸ್ ಆಗದೆ ಇರುವುದರ ಹಿಂದೆ ರಾಜಕೀಯ ಒತ್ತಡಗಳೂ ಇವೆ ಎಂಬ ಮಾತುಗಳು ಕೇಳಿ ಬಂದಿವೆ.

ಇನ್ನು, ‘ಟಾಕ್ಸಿಕ್’ ಚಿತ್ರಕ್ಕೆ ಬಾಲಿವುಡ್​​ನ ‘ಧುರಂಧರ್ 2’ ಸಿನಿಮಾ ದೊಡ್ಡ ಪ್ರತಿಸ್ಪರ್ಧಿಯಾಗಿ ನಿಂತಿದೆ. ಎರಡೂ ಸಿನಿಮಾಗೆ ಸಾಕಷ್ಟು ಹೈಪ್ ಇದೆ. ಈ ಎರಡೂ ಚಿತ್ರಗಳು ಒಟ್ಟಿಗೆ ರಿಲೀಸ್ ಆಗುತ್ತಿರುವುದರಿಂದ ಬಾಕ್ಸ್ ಆಫೀಸ್​​​ನಲ್ಲಿ ದೊಡ್ಡ ಕ್ಲ್ಯಾಶ್ ನಿರೀಕ್ಷಿಸಬಹುದಾಗಿದೆ. ಸದ್ಯದ ಮಟ್ಟಿಗೆ ಈ ಚಿತ್ರಕ್ಕೆ ಕಾನೂನಾತ್ಮವಾಕವಾಗಿ ಯಾವುದೇ ತೊಂದರೆ ಎದುರಾಗಿಲ್ಲ. ಸೆನ್ಸಾರ್ ಸಮಯದಲ್ಲಿ ಯಾವುದಾದರೂ ಅಡಚಣೆ ಉಂಟಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಬಗ್ಗೆ ಭಯವಿಲ್ಲ ಎಂದಿದ್ದ ಹೀರೋ ಈಗ ಹೆಜ್ಜೆ ಹಿಂದಿಟ್ಟಿದ್ದೇಕೆ?

ಇನ್ನು, ‘ಕೆಡಿ’ ಸಿನಿಮಾ ಕೂಡ ‘ಕೆವಿಎನ್’ ಸಂಸ್ಥೆಯೇ ನಿರ್ಮಿಸಿದೆ. ಇದು ಸೋಲೋ ರಿಲೀಸ್ ಕಾಣೋ ನಿರೀಕ್ಷೆ ಇತ್ತು. ಆದರೆ, ಅದು ಸುಳ್ಳಾಗಿದೆ. ಈ ಚಿತ್ರಕ್ಕೆ ರಾಮ್ ಚರಣ್ ನಟನೆಯ ‘ಪೆದ್ದಿ’ ಸಿನಿಮಾ ಪ್ರತಿ ಸ್ಪರ್ಧಿಯಾಗಿ ನಿಂತಿದೆ. ಈ ಮೂಲಕ ಕೆವಿಎನ್​​ಗೆ ಇಲ್ಲಿಯೂ ಅಡ್ಡಗಾಲು ಬಿದ್ದಂತಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:05 am, Thu, 5 February 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us