ಸಾಧು ಕೋಕಿಲ ನಗಿಸ್ತಾರೆ, ಆದ್ರೆ ಲಯ ಹೆದರಿಸ್ತಾರೆ; ‘ತಾಯ್ತ’ ಸಿನಿಮಾದ ಟೀಸರ್ ಇಲ್ಲಿದೆ ನೋಡಿ

Thaytha Kannada Movie: ಹಾರರ್​ ಕಥಾಹಂದರದ ‘ತಾಯ್ತ’ ಚಿತ್ರಕ್ಕೆ ಲಯ ಕೋಕಿಲ ನಿರ್ದೇಶನ ಮಾಡಿದ್ದಾರೆ. ಸಂಗೀತ ಸಂಯೋಜನೆಯ ಜವಾಬ್ದಾರಿಯನ್ನೂ ಅವರೇ ನಿಭಾಯಿಸಿದ್ದಾರೆ.

ಸಾಧು ಕೋಕಿಲ ನಗಿಸ್ತಾರೆ, ಆದ್ರೆ ಲಯ ಹೆದರಿಸ್ತಾರೆ; ‘ತಾಯ್ತ’ ಸಿನಿಮಾದ ಟೀಸರ್ ಇಲ್ಲಿದೆ ನೋಡಿ
ರಿಯಾನ್, ಹರ್ಷಿಕಾ ಪೂಣಚ್ಚ, ತಾಯ್ತ ಸಿನಿಮಾ ಪೋಸ್ಟರ್​

Updated on: Mar 27, 2023 | 5:58 PM

ನಟ ಸಾಧು ಕೋಕಿಲ ಅವರದ್ದು ಕಲಾವಿದರ ಕುಟುಂಬ. ಚಿತ್ರರಂಗದಲ್ಲಿ ಅವರ ಇಡೀ ಫ್ಯಾಮಿಲಿ ತೊಡಗಿಕೊಂಡಿದೆ. ಈಗ ಅವರ ಅಣ್ಣ ಲಯ ಕೋಕಿಲ (Laya Kokila) ಅವರು ಹೊಸ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ಹೆಸರು ‘ತಾಯ್ತ’. ಹಾರರ್​ ಕಥಾಹಂದರ ಇರುವ ‘ತಾಯ್ತ’ ಸಿನಿಮಾದ ಟೀಸರ್​ (Thaytha Movie Teaser) ಬಿಡುಗಡೆ ಆಗಿದೆ. ಜಂಕಾರ್​ ಮ್ಯೂಸಿಕ್​ ಮೂಲಕ ರಿಲೀಸ್​ ಆಗಿರುವ ಈ ಟೀಸರ್​ ಭಯ ಹುಟ್ಟಿಸುವಂತಿದೆ. ಹಾರರ್​ ಪ್ರಿಯರ ವಲಯದಲ್ಲಿ ಈ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ‘ತಾಯ್ತ’ ಚಿತ್ರದಲ್ಲಿ ಹರ್ಷಿಕಾ ಪೂಣಚ್ಚ (Harshika Poonacha) ಮತ್ತು ರಿಯಾನ್ ಅವರು ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ಶಾಹಿದ್​ ಅವರು ನಿರ್ಮಾಣ ಮಾಡಿದ್ದಾರೆ. ಒಂದೇ ದಿನಕ್ಕೆ ಯೂಟ್ಯೂಬ್​ನಲ್ಲಿ 10 ಲಕ್ಷಕ್ಕೂ ಅಧಿಕ ವೀವ್ಸ್​ ಪಡೆಯುವ ಮೂಲಕ ‘ತಾಯ್ತ’ ಟೀಸರ್​ ವೈರಲ್​ ಆಗಿದೆ.

ನಗಿಸೋದರಲ್ಲಿ ಸಾಧು ಕೋಕಿಲ ಫೇಮಸ್​. ಆದರೆ ಅವರ ಅಣ್ಣ ಲಯೇಂದ್ರ ಅವರು ಮೊದಲ ನಿರ್ದೇಶನದ ‘ತಾಯ್ತ’ ಸಿನಿಮಾದಲ್ಲಿ ಹೆದರಿಸಲು ಬರ್ತಿದ್ದಾರೆ. ಈ ಚಿತ್ರದ ಟೀಸರ್​ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಸಿನಿಮಾ ಬಗ್ಗೆ ಲಯ ಕೋಕಿಲ ಮಾಹಿತಿ ಹಂಚಿಕೊಂಡರು.

ಇದನ್ನೂ ಓದಿ
‘ಕೈ ನಡುಕ ಬರುತ್ತಿತ್ತು’; ‘ಜೇಮ್ಸ್​’ ಡಬ್ಬಿಂಗ್​ ವೇಳೆ ಸಾಧು ಕೋಕಿಲಗೆ ಆದ ಅನುಭವ ಎಂಥದ್ದು?
ಮೇಕೆದಾಟು ಪಾದಯಾತ್ರೆ ವೇಳೆ ಪರಸ್ಪರ ತಬ್ಬಿಕೊಂಡು ಉಭಯ ಕುಶಲೋಪರಿ ವಿಚಾರಿಸಿಕೊಂಡ ಸಾಧು ಕೋಕಿಲ-ಮಧು ಬಂಗಾರಪ್ಪ
‘ಕಾಂಗ್ರೆಸ್​ ಸದಸ್ಯತ್ವ ನಾನು ಪಡೆದಿಲ್ಲ; ಕಲಾವಿದರಿಗೆ ಪಕ್ಷ ಇಲ್ಲ’: ಮೇಕೆದಾಟು ಪಾದಯಾತ್ರೆ ಬಗ್ಗೆ ಸಾಧು ಕೋಕಿಲ ಮಾತು
Kannada Serial: ಧಾರಾವಾಹಿ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದ ಸಾಧು ಕೋಕಿಲ! ಕಾಮಿಡಿ ಕಲಾವಿದನ ಹೊಸ ಸಾಹಸ

‘ಯಾರಾದರೂ ತುಂಬಾ ಹೆದರಿಕೊಂಡಾಗ ತಾಯ್ತ ಕಟ್ಟಿಸಿಕೋ ಅಂತಾರೆ. ನಮ್ಮದು ಪ್ರೇಮಕಥೆಯ ಸಿನಿಮಾವಾದರೂ, ಇದರಲ್ಲಿ ಹಾರಾರ್, ಥ್ರಿಲ್ಲರ್, ಕಾಮಿಡಿ ಎಲ್ಲವೂ ಇದೆ. ಸಾಧುಕೋಕಿಲ, ಪುಷ್ಪಸ್ವಾಮಿ, ಶಾಹಿದ್, ಶೋಭ್ ರಾಜ್ ಅವರ ಜೊತೆಗೆ ನಾನು ಕೂಡ ಅಭಿನಯಿಸಿದ್ದೇನೆ. ಸಂಗೀತ ಕೂಡ ನೀಡಿದ್ದೇನೆ’ ಎಂದಿದ್ದಾರೆ ಲಯ ಕೋಕಿಲ.

‘ತಾಯ್ತ’ ಸಿನಿಮಾ ತಂಡ

ನಟ ರಿಯಾನ್ ಅವರಿಗೆ ಇದು ಮೊದಲ ಸಿನಿಮಾ. ಅವರಿಗೆ ಜೋಡಿಯಾಗಿ ನಟಿಸಿರುವ ಹರ್ಷಿಕಾ ಪೂಣಚ್ಚ ಅವರು ವಿದ್ಯಾರ್ಥಿನಿಯಾಗಿ ಕಾಣಿಸಿಕೊಂಡಿದ್ದಾರೆ. ‘ನಾನು ನಟಿಸಿದ ಮೊದಲ ಹಾರಾರ್ ಚಿತ್ರ ಇದು. ಕಾಲೇಜ್ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಒಂದು ಸ್ಥಳಕ್ಕೆ ಹೋದಾಗ ಅಲ್ಲಿ ಏನೇನು ಆಗುತ್ತದೆ ಎಂಬುದು ಈ ಸಿನಿಮಾದ ಕಥೆ’ ಎಂದು ಹರ್ಷಿಕಾ ಪೂಣಚ್ಚ ಹೇಳಿದ್ದಾರೆ.

ಇದನ್ನೂ ಓದಿ: Sadhu Kokila: ಸಾಧು ಹೆಸರಿನ ಜೊತೆ ಕೋಕಿಲ ಅಂತ ಸೇರಿಸಿದ್ದು ಕನ್ನಡದ ಈ ಸ್ಟಾರ್​ ಹೀರೋ

‘ತಾಯ್ತ’ ಸಿನಿಮಾದ ಟೀಸರ್​ ಬಿಡುಗಡೆ ಕಾರ್ಯಕ್ರಮಕ್ಕೆ ಹಿರಿಯ ನಿರ್ದೇಶಕ ಸಾಯಿ ಪ್ರಕಾಶ್​, ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ. ಹರೀಶ್​ ಹಾಗೂ ನಟ ಧರ್ಮ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಚಿಕ್ಕಮಗಳೂರು, ಬೇಲೂರು ಮುಂತಾದ ಕಡೆ ‘ತಾಯ್ತ’ ಸಿನಿಮಾಗೆ ಚಿತ್ರೀಕರಣ ಮಾಡಲಾಗಿದೆ. ನಿರ್ಮಾಪಕ ಶಾಹಿದ್ ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ನಿರ್ದೇಶನದ ಜೊತೆಗೆ ಸಂಗೀತದ ಜವಾಬ್ದಾರಿಯನ್ನೂ ಲಯ ಕೋಕಿಲ ಅವರೇ ನಿಭಾಯಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.