ಡಾರ್ಲಿಂಗ್​ ಕೃಷ್ಣ-ಮಿಲನಾ ವಿವಾಹ ವಾರ್ಷಿಕೋತ್ಸವ; ಈ ಜೋಡಿಗೆ ವ್ಯಾಲೆಂಟೈನ್ಸ್​ ಡೇ ತುಂಬ ಸ್ಪೆಷಲ್​

| Updated By: ಮದನ್​ ಕುಮಾರ್​

Updated on: Feb 14, 2022 | 8:51 AM

‘ನಿಮ್ಮ ಜೊತೆ ಜೀವನ ಹಂಚಿಕೊಂಡಿರುವುದು ನನ್ನ ಬದುಕಿನ ಅತ್ಯುತ್ತಮ ನಿರ್ಧಾರ. ನೀವೇ ನನ್ನ ಪ್ರಪಂಚ. ಹ್ಯಾಪಿ ಆ್ಯನಿವರ್ಸರಿ ಡಾರ್ಲಿಂಗ್​ ಕೃಷ್ಣ’ ಎಂದು ಮಿಲನಾ ನಾಗರಾಜ್ ವಿಶ್​ ಮಾಡಿದ್ದಾರೆ.

ಡಾರ್ಲಿಂಗ್​ ಕೃಷ್ಣ-ಮಿಲನಾ ವಿವಾಹ ವಾರ್ಷಿಕೋತ್ಸವ; ಈ ಜೋಡಿಗೆ ವ್ಯಾಲೆಂಟೈನ್ಸ್​ ಡೇ ತುಂಬ ಸ್ಪೆಷಲ್​
ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್
Follow us on

ಕನ್ನಡ ಚಿತ್ರರಂಗದ ದಿ ಬೆಸ್ಟ್​ ಜೋಡಿ ಎನಿಸಿಕೊಂಡಿರುವ ಮಿಲನಾ ನಾಗರಾಜ್​ ಮತ್ತು ಡಾರ್ಲಿಂಗ್​ ಕೃಷ್ಣ (Darling Krishna) ಅವರು ಸಖತ್​ ಖುಷಿಯಲ್ಲಿದ್ದಾರೆ. ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟು 1 ವರ್ಷ ಕಳೆದಿದೆ. ಇಂದು (ಫೆ.14) ಇವರಿಬ್ಬರು ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ (Wedding Anniversary) ಆಚರಿಸಿಕೊಳ್ಳುತ್ತಿದ್ದಾರೆ. 2021ರ ಫೆ.14ರಂದು ಮಿಲನಾ ನಾಗರಾಜ್ (Milana Nagaraj)​ ಮತ್ತು ಡಾರ್ಲಿಂಗ್​ ಕೃಷ್ಣ ಅವರ ಮದುವೆ ನೆರವೇರಿತ್ತು. ನೋಡನೋಡುತ್ತಿದ್ದಂತೆಯೇ ಒಂದು ವರ್ಷ ಕಳೆದುಹೋಗಿದೆ. ಪ್ರೀತಿಯ ಜೊತೆಗೆ ವೃತ್ತಿಜೀವದಲ್ಲೂ ಜೊತೆ ಜೊತೆಯಾಗಿ ಸಾಗುತ್ತಿರುವ ಈ ಜೋಡಿ ಅನೇಕರಿಗೆ ಮಾದರಿ ಆಗಿದ್ದಾರೆ. ವೆಡ್ಡಿಂಗ್​ ಆ್ಯನಿವರ್ಸರಿ ಪ್ರಯುಕ್ತ ಎಲ್ಲರೂ ಅವರಿಗೆ ವಿಶ್​ ಮಾಡುತ್ತಿದ್ದಾರೆ. ಇಂದು ಮಿಲನಾ ನಾಗರಾಜ್​ ಮತ್ತು ಡಾರ್ಲಿಂಗ್ ಕೃಷ್ಣ ಅವರಿಗೆ ಡಬಲ್​ ಸಂಭ್ರಮ. ಅವರಿಬ್ಬರು ನಟಿಸಿರುವ ‘ಲವ್​ ಮಾಕ್ಟೇಲ್​ 2’ ಚಿತ್ರ ಯಶಸ್ಸು ಕಂಡಿದೆ. ಈ ಸಿನಿಮಾ ಎಲ್ಲ ಕಡೆಗಳಲ್ಲಿ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿದೆ. ಈ ಖುಷಿಯ ಜೊತೆಗೆ ಅವರು ವೆಡ್ಡಿಂಗ್​ ಆ್ಯನಿವರ್ಸರಿ ಮತ್ತು ವ್ಯಾಲೆಂಟೈನ್ಸ್​ ಡೇ ಆಚರಿಸಿಕೊಳ್ಳುತ್ತಿದ್ದಾರೆ.

ಮಿಲನಾ ನಾಗರಾಜ್​ ಮತ್ತು ಡಾರ್ಲಿಂಗ್​ ಕೃಷ್ಣ ಅವರು ಹಲವು ವರ್ಷಗಳ ಕಾಲ ಪ್ರೀತಿಸಿದರೂ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಎಲ್ಲಿಯೂ ಹೇಳಿಕೊಂಡಿರಲಿಲ್ಲ. 2020ರಲ್ಲಿ ‘ಲವ್​ ಮಾಕ್ಟೇಲ್​’ ಸಿನಿಮಾ ಯಶಸ್ವಿ ಆದ ನಂತರವೇ ಅವರು ಈ ವಿಷಯ ಬಾಯಿ ಬಿಟ್ಟಿದ್ದರು. ಈಗ ಇಬ್ಬರು ಸುಖವಾಗಿ ಸಂಸಾರ ಮಾಡುತ್ತಿದ್ದಾರೆ. ಯುವಪ್ರೇಮಿಗಳಿಗೆ ಮಾದರಿ ಆಗಿದ್ದಾರೆ.

ವಿವಾಹ ವಾರ್ಷಿಕೋತ್ಸವದ ದಿನದಂದು ಪತಿಗೆ ಮಿಲನಾ ನಾಗರಾಜ್​ ವಿಶ್​ ಮಾಡಿದ್ದಾರೆ. ‘ಲವ್​ ಮಾಕ್ಟೇಲ್​ 2’ ಸಿನಿಮಾ ಶೂಟಿಂಗ್ ಸಂದರ್ಭದ ಒಂದು ಫೋಟೋ ಹಂಚಿಕೊಂಡಿರುವ ಅವರು ಕೃಷ್ಣ ಬಗ್ಗೆ ಎರಡು ಸಾಲು ಬರೆದುಕೊಂಡಿದ್ದಾರೆ. ‘ನಿಮ್ಮ ಜೊತೆ ಜೀವನ ಹಂಚಿಕೊಂಡಿರುವುದು ನನ್ನ ಬದುಕಿನ ಅತ್ಯುತ್ತಮ ನಿರ್ಧಾರ. ನೀವೇ ನನ್ನ ಪ್ರಪಂಚ. ಹ್ಯಾಪಿ ಆ್ಯನಿವರ್ಸರಿ ಡಾರ್ಲಿಂಗ್​ ಕೃಷ್ಣ’ ಎಂದು ಮಿಲನಾ ನಾಗರಾಜ್​ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ನಟನಾಗಿ, ನಿರ್ದೇಶಕನಾಗಿ ಡಾರ್ಲಿಂಗ್​ ಕೃಷ್ಣ ಅವರು 2ನೇ ಬಾರಿಗೆ ಗೆಲುವು ಕಂಡಿದ್ದಾರೆ. ನಟಿ, ನಿರ್ಮಾಪಕಿಯಾಗಿ ಮಿಲನಾ ನಾಗರಾಜ್​ ಅವರು ಗೆದ್ದಿದ್ದಾರೆ. ಇಬ್ಬರೂ ಜೊತೆಯಾಗಿ ಮಾಡಿರುವ ‘ಲವ್​ ಮಾಕ್ಟೇಲ್​ 2’ ಚಿತ್ರಕ್ಕೆ ಎಲ್ಲ ಕಡೆಗಳಲ್ಲೂ ಅತ್ಯುತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಬಹುತೇಕ ಚಿತ್ರಮಂದಿರಗಳಲ್ಲಿ ಹೌಸ್​ ಫುಲ್​ ಪ್ರದರ್ಶನ ಕಾಣುತ್ತಿದೆ. ಇದು ಈ ಜೋಡಿಯ ಸಂತಸವನ್ನು ಹೆಚ್ಚಿಸಿದೆ.

‘ಲವ್ ಮಾಕ್ಟೇಲ್​ 2’ ಸಿನಿಮಾ ಫೆ.11ರಂದು ತೆರೆಕಂಡಿತು. ಒಂದು ದಿನ ಮುನ್ನ, ಅಂದರೆ ಫೆ.10ರ ರಾತ್ರಿಯೇ ಅನೇಕ ಕಡೆಗಳಲ್ಲಿ ಪೇಯ್ಡ್​ ಪ್ರೀಮಿಯರ್​ ಆಯೋಜಿಸಲಾಗಿತ್ತು. ಆ ಎಲ್ಲ ಶೋಗಳ ಟಿಕೆಟ್​ಗಳು ಹೌಸ್​ಫುಲ್​ ಆಗುವ ಮೂಲಕ ಪಾಸಿಟಿವ್ ಪ್ರತಿಕ್ರಿಯೆ ಸಿಕ್ಕಿತ್ತು. ಶುಕ್ರವಾರ (ಫೆ.11) ಬೆಳಗ್ಗೆ ಕೂಡ ಈ ಚಿತ್ರ ಭರ್ಜರಿ ಓಪನಿಂಗ್​ ಪಡೆದುಕೊಂಡಿತು. ವೀಕೆಂಡ್​ನಲ್ಲೂ ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರು ಚಿತ್ರಮಂದಿರದತ್ತೆ ಹೆಜ್ಜೆ ಹಾಕಿದ್ದಾರೆ. ಪ್ರೀತಿಯ ಬಗ್ಗೆ ಆಳವಾದ ಮೆಸೇಜ್​ ನೀಡುವ ಈ ಸಿನಿಮಾ ಪ್ರೇಮಿಗಳ ದಿನವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

ಇದನ್ನೂ ಓದಿ:

‘ಲವ್​ ಮಾಕ್ಟೇಲ್​ 3’ ಕೂಡ ಬರುತ್ತಾ? ಗೆದ್ದ ಖುಷಿಯಲ್ಲಿ ಡಾರ್ಲಿಂಗ್​ ಕೃಷ್ಣ ನೀಡಿದ ಉತ್ತರ ಇಲ್ಲಿದೆ..

Love Mocktail 2 Review: ಮತ್ತಷ್ಟು ಲವ್​, ಮತ್ತಷ್ಟು ರಂಜನೆ, ಮತ್ತೆ ಮಿಲನಾ; ಅಂತ್ಯವಾಗಿದ್ದ ಕಥೆಗೆ ಸಿಕ್ಕಿದೆ ಹೊಸ ಆದಿ