AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುನೀತ್​ ಆತ್ಮದ ಜತೆ ಮಾತನಾಡಿದ್ದೇನೆ ಎಂದು ವಿಡಿಯೋ ಹಂಚಿಕೊಂಡ ವ್ಯಕ್ತಿಗೆ ಅಭಿಮಾನಿಗಳ ಛೀಮಾರಿ

ನಿಮ್ಮ ಮಕ್ಕಳಿಗೆ ಏನಾದರೂ ಸಂದೇಶವಿದೆಯೇ ಎಂದು ಚಾರ್ಲಿ ಕೇಳಿದ್ದಾರೆ. ಇದಕ್ಕೆ ಸ್ಪೀಕರ್​ನಿಂದ ‘ಐ ಲವ್​ ದೆಮ್​’ ಎನ್ನುವ ಉತ್ತರ ಬಂದಿದೆ. ಪುನೀತ್​ ಸಾವಿನ ನಂತರದಲ್ಲಿ ಈ ರೀತಿ ಮಾಡಿರುವುದು ಅನೇಕರಿಗೆ ಬೇಸರ ತರಿಸಿದೆ.

ಪುನೀತ್​ ಆತ್ಮದ ಜತೆ ಮಾತನಾಡಿದ್ದೇನೆ ಎಂದು ವಿಡಿಯೋ ಹಂಚಿಕೊಂಡ ವ್ಯಕ್ತಿಗೆ ಅಭಿಮಾನಿಗಳ ಛೀಮಾರಿ
ಚಾರ್ಲಿ-ಪುನೀತ್​
TV9 Web
| Edited By: |

Updated on:Nov 08, 2021 | 1:43 PM

Share

ಯಾರಾದರೂ ಸೆಲೆಬ್ರಿಟಿಗಳು ಮೃತಪಟ್ಟಾಗ ಅದರ ಲಾಭ ಪಡೆಯೋಕೆ ಕೆಲವರು ಮುಂದಾಗುತ್ತಾರೆ. ಪುನೀತ್​ ರಾಜ್​ಕುಮಾರ್​ ಮೃತಪಟ್ಟಾಗಲೂ ಕೆಲವರು ಇದೇ ರೀತಿಯ ಕೆಲಸಕ್ಕೆ ಕೈ ಹಾಕಿದ್ದಾರೆ. ಈ ಮೊದಲು ಕೆಲ ಡೈಗ್ನಾಸ್​​ ಕೇಂದ್ರಗಳು ಪುನೀತ್​ ಹೃದಯಾಘಾತದಿಂದ ಮೃತಪಟ್ಟಿದ್ದ ಸುದ್ದಿಯನ್ನೇ ಜಾಹೀರಾತಿನ ರೀತಿಯಲ್ಲಿ ಬಳಕೆ ಮಾಡಿಕೊಂಡಿದ್ದರು. ಈಗ ಪುನೀತ್​ ಆತ್ಮದ ಜತೆ ಮಾತನಾಡಿದ್ದೇನೆ ಎಂದು ವ್ಯಕ್ತಿಯೋರ್ವ ವಿಡಿಯೋ ಮಾಡಿ ಪೋಸ್ಟ್​ ಮಾಡಿದ್ದಾರೆ. ಇದಕ್ಕೆ ಪುನೀತ್​ ಅಭಿಮಾನಿಗಳು ಬಾಯಿಗೆ ಬಂದಂತೆ ಉಗಿದಿದ್ದಾರೆ.

ಚಾರ್ಲಿ ಚಿಟ್ಟೆಂಡೆನ್​ ಹೆಸರಿನ ವಿದೇಶಿಗ ಈ ಬಗ್ಗೆ ಯೂಟ್ಯೂಬ್​​ನಲ್ಲಿ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಎದುರು ಭಾಗದಲ್ಲಿ  ಸ್ಪೀಕರ್​ ಮಾದರಿಯ ವಸ್ತು ಒಂದನ್ನು ಚಾರ್ಲಿ ಇಟ್ಟುಕೊಂಡಿದ್ದಾರೆ. ಕೈಯಲ್ಲಿ ಒಂದು ನೋಟ್ಸ್​ ಹಿಡಿದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸುತ್ತಿರುವುದು ಪುನೀತ್​ ಆತ್ಮ ಎಂದು ಅವರು ಹೇಳಿಕೊಂಡಿದ್ದಾರೆ.

ನಿಮ್ಮ ಮಕ್ಕಳಿಗೆ ಏನಾದರೂ ಸಂದೇಶವಿದೆಯೇ ಎಂದು ಚಾರ್ಲಿ ಕೇಳಿದ್ದಾರೆ. ಇದಕ್ಕೆ ಸ್ಪೀಕರ್​ನಿಂದ ‘ಐ ಲವ್​ ದೆಮ್​’ ಎನ್ನುವ ಉತ್ತರ ಬಂದಿದೆ. ಪುನೀತ್​ ಸಾವಿನ ನಂತರದಲ್ಲಿ ಈ ರೀತಿ ಮಾಡಿರುವುದು ಅನೇಕರಿಗೆ ಬೇಸರ ತರಿಸಿದೆ. ಅಲ್ಲದೆ, ಪುನೀತ್​ ಅಭಿಮಾನಿಗಳು ಚಾರ್ಲಿಗೆ ಕಮೆಂಟ್​ ಸೆಕ್ಷನ್​ನಲ್ಲೇ ಕ್ಲಾಸ್ ತೆಗೆದುಕೊಂಡಿದ್ದಾರೆ. ‘ನೀವು ಚೆನ್ನಾಗಿ ನಟಿಸುತ್ತೀರಿ ಎಂಬುದು ಗೊತ್ತಿದೆ. ಮತ್ತೆ ಅದನ್ನು ಸಾಬೀತು ಮಾಡಬೇಕೆಂದಿಲ್ಲ’ ಎಂದು ಟೀಕಿಸಿದ್ದಾರೆ.

ಇನ್ನೂ ಕೆಲವರು ಇದನ್ನು ನಂಬಿದ್ದಾರೆ. ಈ ವಿಡಿಯೋದಲ್ಲಿ ಸ್ಪೀಕರ್​ನಿಂದ ಹೊರ ಬಂದ ಮಾತು ಸ್ಪಷ್ಟವಾಗಿಲ್ಲ. ಈ ಕಾರಣಕ್ಕೆ ಕೆಲವರು ವಿಡಿಯೋವನ್ನು ಮತ್ತೆ ಮಾಡಿ. ಮಾತು ಸರಿಯಾಗಿ ಕೇಳಿಸುತ್ತಿಲ್ಲ ಎನ್ನುವ ಬೇಡಿಕೆ ಇಟ್ಟಿದ್ದಾರೆ. ಮಿಸ್​ ಯು ಅಪ್ಪು ಎಂದು ಕಮೆಂಟ್​ ಮಾಡಿದ್ದಾರೆ. ಈ ವಿಡಿಯೋ ಅಸಲಿಯೋ ಅಥವಾ ನಕಲಿಯೋ ಎಂಬುದು ಇನ್ನೂ ದೃಢವಾಗಿಲ್ಲ.

ಸುಶಾಂತ್​ ಸಿಂಗ್​ ರಜಪೂತ್, ಸಿದ್ದಾರ್ಥ್​ ಶುಕ್ಲಾ​ ನಿಧನದ ನಂತರ ಸ್ಟೀವ್​ ಹಫ್ ಸುಶಾಂತ್ ಆತ್ಮದ ಜೊತೆ ಮಾತನಾಡಿದ್ದ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಆದರೆ, ಪುನೀತ್​ ರಾಜ್​ಕುಮಾರ್​ ಬಗ್ಗೆ ಅವರು ಯಾವುದೇ ವಿಡಿಯೋ ಬಿಡುಗಡೆ ಮಾಡಿಲ್ಲ.

ಇದನ್ನೂ ಓದಿ: ಅಪ್ಪು ಮೇಲೆ ಜನರಿಟ್ಟ ಅಭಿಮಾನಕ್ಕೆ ಸಾಟಿ ಇಲ್ಲ; ಪುನೀತ್​ ಸಮಾಧಿ ಬಳಿ ಜನಸಾಗರ ಇನ್ನೂ ಕಮ್ಮಿ ಆಗಿಲ್ಲ

ಅಪ್ಪು ಪುಣ್ಯ ಸ್ಮರಣೆಗೆ ಹೇಗಿದೆ ಸಮಾಧಿ ಅಲಂಕಾರ? ವಿವಿಧ ಹೂವುಗಳಿಂದ ಪುನೀತ್​ಗೆ ನಮನ

Published On - 1:43 pm, Mon, 8 November 21

Follow Us
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಮೀನ ರಾಶಿಗೆ ಈ ವರ್ಷ ಹೇಗಿರಲಿದೆ?
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಯುಗಾದಿ ವರ್ಷ ಭವಿಷ್ಯ; ಈ ರಾಶಿಗೆ ವಿವಾಹ ಯೋಗ ಹಾಗೂ ಹೊಸ ಉದ್ಯೋಗಾವಕಾಶ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಏರ್ ಇಂಡಿಯಾ ವಿಮಾನ ಹಾರ್ಡ್​ ಲ್ಯಾಂಡಿಂಗ್, ಪುಡಿ ಪುಡಿಯಾದ ಚಕ್ರ
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಗ್ಯಾಸ್ ನೋ ಸ್ಟಾಕ್: ಬೆಂಗಳೂರಿನಲ್ಲಿ ಬಂಕ್ ಬಂದ್, ಆಟೋದವರ ದುಡಿಮೆಗೂ ಕುತ್ತು
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ
ಕಾರು ಓಡಿಸುವಾಗ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್
ಕಾರು ಓಡಿಸುವಾಗ ವ್ಯಕ್ತಿಗೆ ಹೃದಯಾಘಾತ, ಸಿಪಿಆರ್ ನೀಡಿ ಜೀವ ಉಳಿಸಿದ ಪೊಲೀಸ್
ನಿಮ್ಮ 10 ಕೋಟಿ ರೂ. ಎಲ್ಲಿ ಸಾಕಾಗುತ್ತದೆ
ನಿಮ್ಮ 10 ಕೋಟಿ ರೂ. ಎಲ್ಲಿ ಸಾಕಾಗುತ್ತದೆ
ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ
ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯ ಬೀಳಿಸಿ ಸರ ಕದ್ದ ಕಳ್ಳ
LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂ.?
LPG ಕೊರತೆ: ಬ್ಲ್ಯಾಕ್​​ ಮಾರ್ಕೆಟ್‌ನಲ್ಲಿ ಸಿಲಿಂಡರ್​​ ದರ 4 ಸಾವಿರ ರೂ.?
ಕಬ್ಬಿಣದ ಸ್ಟ್ಯಾಂಡ್ ಹಿಡಿದು ಬರುತ್ತಿದ್ದವರಿಗೆ ವಿದ್ಯುತ್ ತಗುಲಿ 2 ಸಾವು
ಕಬ್ಬಿಣದ ಸ್ಟ್ಯಾಂಡ್ ಹಿಡಿದು ಬರುತ್ತಿದ್ದವರಿಗೆ ವಿದ್ಯುತ್ ತಗುಲಿ 2 ಸಾವು