
ಸುದೀಪ್ ನಟನೆಯ (Kichcha Sudeep)‘ಮಾರ್ಕ್’ ಸಿನಿಮಾ ಹೊಸ ವರ್ಷದಂದು ಒಳ್ಳೆಯ ರೀತಿಯ ಆರಂಭ ಕಂಡಿದೆ. ಮೊದಲ ನಾಲ್ಕು ದಿನ ಅಬ್ಬರಿಸಿದ್ದ ಈ ಚಿತ್ರ ನಂತರವೂ ಉತ್ತಮ ಕಲೆಕ್ಷನ್ ಮಾಡಿತ್ತು. ಹೊಸ ವರ್ಷದ ರಜೆ ಚಿತ್ರಕ್ಕೆ ಸಹಕಾರಿ ಆಗಿದೆ. ಜನವರಿ 1ರಂದು ಸಿನಿಮಾ ಕೋಟಿ ಕೋಟಿ ರೂಪಾಯಿ ಬಾಚಿಕೊಂಡಿದೆ.ಇದು ಕಿಚ್ಚನ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಈ ವೀಕೆಂಡ್ ಕೂಡ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ.
‘ಮಾರ್ಕ್’ ಸಿನಿಮಾ ರಿಲೀಸ್ ಆಗಿದ್ದು ಡಿಸೆಂಬರ್ 25ರಂದು. ಈ ಚಿತ್ರ ತೆರೆಗೆ ಬಂದು 9 ದಿನ ಕಳೆದಿದೆ. ಈ ಸಿನಿಮಾ ನಾಲ್ಕು ದಿನಕ್ಕೆ 35 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ತಂಡ ಹೇಳಿಕೊಂಡಿದೆ. ನಂತರದ ಕಲೆಕ್ಷನ್ ಕೂಡ ಸೇರಿದರೆ ಸಿನಿಮಾದ ಗಳಿಕೆ 50 ಕೋಟಿ ರೂಪಾಯಿ ದಾಟಿರಬಹುದು ಎಂದು ಹೇಳಲಾಗುತ್ತಾ ಇದೆ.
ಜನವರಿ ಒಂದರಂದು ಮಾರ್ಕ್ ಸಿನಿಮಾ ಸುಮಾರು 2 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು sacnilk ವರದಿ ಹೇಳಿದೆ. ಈ ಮೂಲಕ ಹೊಸ ವರ್ಷವನ್ನು ದೊಡ್ಡ ಗಳಿಕೆಯೊಂದಿಗೆ ಆರಂಭಿಸಿದಂತೆ ಆಗಿದೆ. ಸಿನಿಮಾ ಇಂದು ಸಾಧಾರಣ ಕಲೆಕ್ಷನ್ ಮಾಡಿದರೂ ವೀಕೆಂಡ್ನಲ್ಲಿ (ಜನವರಿ 3 ಹಾಗೂ ಜನವರಿ 4) ಸಿನಿಮಾ ಅಬ್ಬರದ ಗಳಿಕೆ ಮಾಡುವ ನಿರೀಕ್ಷೆ ಇದೆ.
After A Blockbuster First Week, Mark Continues Its Unstoppable Run🔥
Winning Massive Praise From Fans, Mass Audiences, Youth & Families,
Mark Roars Into Its Electrifying Second Week🎬 Mark In Cinemas Now
Grab your tickets soon 🎟️
Book My Show: https://t.co/QmRNJkyr03… pic.twitter.com/hIHZACAI89— Supriyanvi Picture Studio (@SupriyanviPicS) January 2, 2026
ಸಿನಿಮಾ ಉತ್ತಮ ಕಲೆಕ್ಷನ್ ಮಾಡುತ್ತಿರುವ ಬಗ್ಗೆ ‘ಸುಪ್ರಿಯಾ ಪಿಕ್ಚರ್ ಸ್ಟುಡಿಯೋ’ ಘೋಷಣೆ ಮಾಡಿದೆ. ‘ಮೊದಲ ವಾರದ ಬ್ಲಾಕ್‌ಬಸ್ಟರ್ ಗಳಿಕೆ ನಂತರ, ಮಾರ್ಕ್ ತನ್ನ ಓಟವನ್ನು ಮುಂದುವರೆಸಿದೆ. ಅಭಿಮಾನಿಗಳು, ಪ್ರೇಕ್ಷಕರು, ಯುವಕರು ಮತ್ತು ಕುಟುಂಬಗಳಿಂದ ಭಾರಿ ಪ್ರಶಂಸೆಯನ್ನು ಗಳಿಸುತ್ತಿದೆ’ ಎಂದು ಸುಪ್ರಿಯಾ ಪಿಕ್ಚರ್ ಸ್ಟುಡಿಯೋ ಟ್ವೀಟ್ ಮಾಡಿದೆ.
ಇದನ್ನೂ ಓದಿ: ‘ಮಾರ್ಕ್’ ವೀಕ್ಷಿಸುವಾಗ ಕಿಚ್ಚನ ಎದುರೇ ಗಿಲ್ಲಿ ಗೆಲ್ಲಬೇಕು ಎಂದ ಫ್ಯಾನ್ಸ್; ಸುದೀಪ್ ರಿಯಾಕ್ಷನ್ ಏನು?
‘ಮಾರ್ಕ್’ ಸಿನಿಮಾಗೆ ವಿಜಯ್ ಕಾರ್ತಿಕೇಯ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ಸುದೀಪ್ ಜೊತೆ ಯೋಗಿ ಬಾಬು, ನವೀನ್ ಚಂದ್ರ ಮೊದಲಾದವರು ನಟಿಸಿದ್ದಾರೆ. ಈ ಚಿತ್ರಕ್ಕೆ ನಾಯಕಿಯರಿಲ್ಲ. ‘ಮ್ಯಾಕ್ಸ್’ ಶೈಲಿಯಲ್ಲೇ ಸಿನಿಮಾ ಮೂಡಿ ಬಂದಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.