ಅಡುಗೆ ಮಾಡುತ್ತಾ ರಿಷಬ್, ಮೇಘನಾ, ಸುದೀಪ್ ಹರಟೆ; ಅಪರೂಪದ ವಿಡಿಯೋ ಇಲ್ಲಿದೆ

ರಿಷಬ್ ಶೆಟ್ಟಿ ಅವರ ‘ಕಾಂತಾರ: ಚಾಪ್ಟರ 1’ ಬಿಡುಗಡೆ ಸಮೀಪಿಸುತ್ತಿದ್ದಂತೆ, ಸುದೀಪ್ ಹಾಗೂ ಮೇಘನಾ ರಾಜ್ ಜೊತೆಗಿನ ಅವರ ಹಳೆಯ ಕುಕಿಂಗ್ ಶೋ ವಿಡಿಯೋ ವೈರಲ್ ಆಗಿದೆ. ಈ ಕಾರ್ಯಕ್ರಮದಲ್ಲಿ ಸುದೀಪ್ ಅವರು ಮೇಘನಾ ಹಾಗೂ ಚಿರಂಜೀವಿ ಸರ್ಜಾ ಅವರ ಸುಂದರ ಪ್ರೇಮಕಥೆಯನ್ನು ಕೇಳಿ ತಿಳಿದಿದ್ದರು.

ಅಡುಗೆ ಮಾಡುತ್ತಾ ರಿಷಬ್, ಮೇಘನಾ, ಸುದೀಪ್ ಹರಟೆ; ಅಪರೂಪದ ವಿಡಿಯೋ ಇಲ್ಲಿದೆ
ಮೇಘನಾ-ರಿಷಬ್-ಸುದೀಪ್
Updated By: ರಾಜೇಶ್ ದುಗ್ಗುಮನೆ

Updated on: Oct 01, 2025 | 7:46 AM

ರಿಷಬ್ ಶೆಟ್ಟಿ ಅವರ ನಟನೆಯ ‘ಕಾಂತಾರ: ಚಾಪ್ಟರ 1’ ಸಿನಿಮಾ ಅಕ್ಟೋಬರ್ 2ರಂದು ರಿಲೀಸ್ ಆಗುತ್ತಿದೆ. ಈ ಸಂದರ್ಭದಲ್ಲಿ ಅವರ ಹಳೆಯ ವಿಡಿಯೋಗಳು ವೈರಲ್ ಆಗಲು ಪ್ರಾರಂಭಿಸಿವೆ. ಈ ಮಧ್ಯೆ ಒಂದು ವಿಡಿಯೋ ಗಮನ ಸೆಳೆದಿದೆ. ಕುಕಿಂಗ್ ಶೋ ಒಂದರಲ್ಲಿ ಸುದೀಪ್, ರಿಷಬ್ ಹಾಗೂ ಮೇಘನಾ ರಾಜ್ (Meghana Raj) ಅಡುಗೆ ಮಾಡುತ್ತಿರುವುದು ಇದೆ. ಇದರಲ್ಲಿ ಮೇಘನಾ ಲವ್​ಸ್ಟೋರಿ ಕೆದಕಲಾಗಿದೆ. ಈ ವಿಡಿಯೋ ಗಮನ ಸೆಳೆದಿದೆ.

ರಿಷಬ್ ಶೆಟ್ಟಿ, ಸುದೀಪ್ ಅವರು ಅಡುಗೆ ಮಾಡಿದ್ದಾರೆ. ಅವರು ನಾನ್ ವೆಜ್ ಪದಾರ್ಥ ಸಿದ್ಧಪಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆಗ ಸುದೀಪ್ ಅವರು ಮೇಘನಾ ಲವ್​​ಸ್ಟೋರಿ ಬಗ್ಗೆ ಕೇಳಿದ್ದಾರೆ. ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಅವರದ್ದು ಪ್ರೇಮ ವಿವಾಹ. ಈ ವೇದಿಕೆ ಮೇಲೆ ಅವರ ಲವ್​ಸ್ಟೋರಿ ಚರ್ಚೆ ಆಯಿತು.

‘ನಿಮ್ಮ ನಂಬರ್ ಎಕ್ಸ್​ಚೇಂಜ್ ಆಗಿದ್ದು ಹೇಗೆ’ ಎಂದು ಸುದೀಪ್ ಕೇಳಿದರು. ‘ನಂಬರ್​ನ ಚಿರು ಅವರೇ ತೆಗೆದುಕೊಂಡ್ರು. ಬಹುಶಃ ಬೇರೆ ಯಾರಿಂದಲೋ ನಂಬರ್ ಪಡೆದುಕೊಂಡಿದ್ರು ಅನಿಸುತ್ತದೆ. ಹಾಯ್ ಎಂದು ಮೆಸೇಜ್ ಮಾಡಿದ್ರು. ನಾನು ಚಿರಂಜೀವಿ ಸರ್ಜಾ. ನನ್ನ ನೆನಪಿದೆಯಲ್ಲ ಎಂದರು. ನನಗೆ ಅವರು ಯಾರು ಎಂದು ಗೊತ್ತಿತ್ತು. ಆದರೂ ಇಲ್ಲ ಎಂದು ಹೇಳಿದೆ. ಓಕೆ ಫೈನ್, ಬಾಯ್ ಎಂದರು’ ಎಂಬುದಾಗಿ ಮೇಘನಾ ವಿವರಿಸಿದ್ದರು.

ಇದನ್ನೂ ಓದಿ
ಸ್ತನ ಕ್ಯಾನ್ಸರ್​ನಿಂದ ಕಿರುತೆರೆ ನಟಿ ಕಮಲಶ್ರೀ ನಿಧನ
‘ನಾನೇನು ಸುಮ್ಮನೆ ಬಿಡಲಿಲ್ಲ’; ಮಾಜಿ ಪತಿ ಮಾಡಿದ ಕೆಟ್ಟ ಕೆಲಸ ಹೇಳಿದ ಜಾನ್ವಿ
ರಿಷಬ್ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಅಳುವವರು ಈ ವಿಡಿಯೋ ನೋಡಿ
ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಎಷ್ಟು ಸಾಮ್ಯತೆ ಇದೆ ನೋಡಿ

ರಿಷಬ್, ಸುದೀಪ್, ಮೇಘನಾ ಅಪರೂಪದ ವಿಡಿಯೋ

ಆಗ ಸುದೀಪ್ ಅವರು, ‘ಬಹುಶಃ ಉರಿದಿರುತ್ತದೆ’ ಎಂದರು. ‘ಜೋಕ್ ಮಾಡಿದೆ, ನೆನಪಿದೆ ಎಂದೆ. ಆ ಬಳಿಕ ಗೆಳೆತನ ಬೆಳೆಯಿತು. ಆ ಬಳಿಕ ಎಂಗೇಜ್​​ಮೆಂಟ್​ ಆಯ್ತು. ಇಷ್ಟೇ ನೆನಪಿರೋದು’ ಎಂದು ಮೇಘನಾ ರಾಜ್ ಹೇಳಿದ್ದರು. ‘ಮೊದಲು ಸಿಗೋಣ ಎಂದು ಇನಿಶೀಯೇಟ್ ಮಾಡಿದ್ದು ಚಿರು. ಅಮ್ಮನ ಬಳಿ ಬಂದು ಮಾತನಾಡಿದ್ದು ಕೂಡ ಚಿರುನೆ. ನಮ್ಮ ಮನೆಯಲ್ಲಿ ಒಪ್ಪಿಸಿದ್ದು ಅವನೇ’ ಎಂದು ಮೇಘನಾ ರಾಜ್ ವಿವರಿಸಿದ್ದರು. ಈ ವಿಡಿಯೋಗೆ ಭರ್ಜರಿ ಲೈಕ್ಸ್ ಸಿಗುತ್ತಿದೆ.

ಇದನ್ನೂ ಓದಿ: ‘ರಾಯನ್ ಫ್ರೆಂಡ್ಸ್​ಗೆ ಬೈಸೆಪ್ಸ್ ತೋರಿಸ್ತಾನೆ’; ಎಲ್ಲಾ ಧ್ರುವಾ ಎಫೆಕ್ಟ್ ಎಂದ ಮೇಘನಾ ರಾಜ್

ಮೇಘನಾ ರಾಜ್ ವಿವಾಹ ಆಗಿ ಕೆಲವೇ ವರ್ಷಗಳಲ್ಲಿ ಚಿರು ನಿಧನ ಹೊಂದಿದರು. ಮೇಘನಾಗೆ ಆಗ ಆರು ತಿಂಗಳು. ನಂತರ ರಾಯನ್ ಜನಿಸಿದ. ಮಗನಲ್ಲಿ ಪತಿಯನ್ನು ಮೇಘಣಾ ಕಾಣುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.