Meghana Raj: ಮೇಘನಾ ರಾಜ್ ಪೋಸ್ಟ್ ಮೂಡಿಸಿದ ಕುತೂಹಲ; ಫೆಬ್ರವರಿ 12ಕ್ಕೆ ಚಿರಂಜೀವಿ ಸರ್ಜಾ ಮಗುವಿನ ನಾಮಕರಣ?

Meghana Raj Son: ಅಕ್ಟೋಬರ್ 22ರಂದು ಮೇಘನಾ ತಾಯಿ ಆಗಿದ್ದರು. ಅವರಿಗೆ ಗಂಡು ಮಗು ಹುಟ್ಟಿದ್ದರಿಂದ ಎಲ್ಲರೂ ಜೂ. ಸರ್ಜಾ ಅವರ ಆಗಮನವಾಗಿದೆ ಎಂದೇ ಹೇಳಿದ್ದರು.

Meghana Raj: ಮೇಘನಾ ರಾಜ್ ಪೋಸ್ಟ್ ಮೂಡಿಸಿದ ಕುತೂಹಲ; ಫೆಬ್ರವರಿ 12ಕ್ಕೆ ಚಿರಂಜೀವಿ ಸರ್ಜಾ ಮಗುವಿನ ನಾಮಕರಣ?
ಮೇಘನಾ-ಚಿರು ಸರ್ಜಾ
Edited By:

Updated on: Feb 10, 2021 | 9:24 PM

ಬೆಂಗಳೂರು: ನಟಿ ಮೇಘನಾ ರಾಜ್​ ಎಕ್ಸೈಟ್​ ಆಗಿದ್ದಾರಂತೆ. ಶುಕ್ರವಾರ ವಿಶೇಷ ದಿನ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಮೇಘನಾ ಮಗುವಿಗೆ ನಾಮಕರಣ ನಡೆಯಬಹುದು ಎಂದು ಅಂದಾಜಿಸಲಾಗಿದೆ. ಸ್ಯಾಂಡಲ್​ವುಡ್​ ಸ್ಟಾರ್​ ಚಿರಂಜೀವಿ ಸರ್ಜಾ ಜೂನ್​ 7ರಂದು ಮೃತಪಟ್ಟಿದ್ದರು. ಆ ವೇಳೆಗೆ ಮೇಘನಾ ತುಂಬು ಗರ್ಭಿಣಿ. ಗಂಡನನ್ನು ಕಳೆದುಕೊಂಡ ನೋವಲ್ಲೇ ಮೇಘನಾಗೆ ಸೀಮಂತ ಶಾಸ್ತ್ರ ಕೂಡ ಮಾಡಲಾಗಿತ್ತು. ಚಿರಂಜೀವಿ ಕಟೌಟ್​ ಪಕ್ಕದಲ್ಲಿ ಇರಿಸಿಕೊಂಡು ಮೇಘನಾ ಸೀಮಂತ ಮಾಡಿಕೊಂಡಿದ್ದು, ಅಭಿಮಾನಿಗಳು ಸಾಕಷ್ಟು ನೊಂದುಕೊಂಡಿದ್ದರು.

ಅಕ್ಟೋಬರ್ 22ರಂದು ಮೇಘನಾ ತಾಯಿ ಆಗಿದ್ದರು. ಅವರಿಗೆ ಗಂಡು ಮಗು ಹುಟ್ಟಿದ್ದರಿಂದ ಎಲ್ಲರೂ ಜೂ. ಸರ್ಜಾ ಅವರ ಆಗಮನವಾಗಿದೆ ಎಂದೇ ಹೇಳಿದ್ದರು. ಚಿರು ತಮ್ಮ ಧ್ರುವ ಮಗುವನ್ನು ಎತ್ತಿಕೊಂಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು.

ಇದಾದ ನಂತರ ಚಿರು ಕುಟುಂಬದಿಂದ ಮಗುವಿನ ವಿಚಾರವಾಗಿ ಯಾವುದೇ ಅಪ್​​ಡೇಟ್​ ಬಂದಿರಲಿಲ್ಲ. ಅನೇಕರು ಮಗುವಿನ ನಾಮಕರಣ ಯಾವಾಗ? ಅವರಿಗೆ ಏನು ಹೆಸರಿಡುತ್ತೀರಿ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದರು. ಅದಕ್ಕೆ ಕೊನೆಗೂ ಉತ್ತರ ಸಿಗುವ ಲಕ್ಷಣ ಗೋಚರವಾಗಿದೆ.

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಹಾಕಿರುವ ಮೇಘನಾ, ಫೆಬ್ರವರಿ 12ರಂದು ಎಕ್ಸೈಟಿಂಗ್ ನ್ಯೂಸ್​ ಬರುತ್ತಿದೆ ಎಂದು ಬರೆದುಕೊಂಡಿದ್ದಾರೆ. ಇದು ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ.

ಇದನ್ನೂ ಓದಿ: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ..ಎಲ್ಲ ಪಾಲಕರಿಗೆ ನಟಿ ಮೇಘನಾ ರಾಜ್​ ಸಂದೇಶ