ನಟಿ ಮೇಘನಾ ರಾಜ್ ಸರ್ಜಾ (Meghana Raj) ಅವರು ಹೊಸ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದಾರೆ. ಅಭಿಮಾನಿಗಳಿಗೆ ಒಂದು ಸರ್ಪ್ರೈಸ್ ನೀಡುವುದಾಗಿ ಅವರು ಡಿ.24ರಂದು ಹೇಳಿದ್ದರು. ಅದೇನು ಎಂದು ಕಾದಿದ್ದ ಅಭಿಮಾನಿಗಳಿಗೆಲ್ಲ ಇಂದು (ಡಿ.25) ಉತ್ತರ ಸಿಕ್ಕಿದೆ. ಇದೇ ಮೊದಲ ಬಾರಿಗೆ ಮೇಘನಾ ರಾಜ್ ಅವರು ತಮ್ಮ ಯೂಟ್ಯೂಬ್ ಚಾನೆಲ್ (Meghana Raj YouTube Channel) ಆರಂಭಿಸಿದ್ದಾರೆ. ಆ ಮೂಲಕ ಅವರು ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗಿದ್ದಾರೆ. ಮೊದಲ ವಿಡಿಯೋದಲ್ಲಿ ಅವರು ಈ ಬಗ್ಗೆ ಅನೌನ್ಸ್ ಮಾಡಿದ್ದಾರೆ. ಹೊಸ ಕಾರ್ಯಕ್ಕೆ ಕೈ ಹಾಕಿರುವ ಅವರಿಗೆ ಫ್ಯಾನ್ಸ್ ಅಭಿನಂದನೆ ತಿಳಿಸುತ್ತಿದ್ದಾರೆ. ಎಲ್ಲರಿಗೂ ಕ್ರಿಸ್ಮಸ್ (Christmas) ಹಬ್ಬದ ಶುಭ ಕೋರಿದ್ದಾರೆ ಮೇಘನಾ ರಾಜ್.
ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಸಕ್ರಿಯರಾಗಿದ್ದಾರೆ. ‘ನೀವು ಯಾವಾಗ ನಿಮ್ಮ ಯೂಟ್ಯೂಬ್ ಚಾನೆಲ್ ಆರಂಭಿಸುತ್ತೀರಿ’ ಎಂದು ಅಭಿಮಾನಿಗಳು ಆಗಾಗ ಪ್ರಶ್ನೆ ಕೇಳುತ್ತಿದ್ದರು. ಹಾಗಾಗಿ ಕ್ರಿಮ್ಮಸ್ ಹಬ್ಬದ ಶುಭ ಸಂದರ್ಭದಲ್ಲಿ ಮೇಘನಾ ರಾಜ್ ಅವರು ಯೂಟ್ಯೂಬ್ ಲೋಕಕ್ಕೆ ಎಂಟ್ರಿ ನೀಡಿದ್ದಾರೆ. ಪುತ್ರ ರಾಯನ್ ರಾಜ್ ಸರ್ಜಾ, ತಂದೆ-ತಾಯಿಗಳಾದ ಪ್ರಮೀಳಾ ಜೋಶಾಯ್ ಹಾಗೂ ಸುಂದರ್ ರಾಜ್ ಜೊತೆ ಇರುವ ವಿಡಿಯೋ ತುಣುಕನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮೇಘನಾ ರಾಜ್ ಗೆಳತಿ, ನಟಿ ನಜ್ರಿಯಾ ನಜಿಮ್ಗೆ ಬರ್ತ್ಡೇ ಸಂಭ್ರಮ; ಇಲ್ಲಿದೆ ಕ್ಯೂಟ್ ಫೋಟೋ
ಈ ಡಿಜಿಟಲ್ ಯುಗದಲ್ಲಿ ಬಹುತೇಕ ಸೆಲೆಬ್ರಿಟಿಗಳು ತಮ್ಮ ಯೂಟ್ಯೂಬ್ ಚಾನೆಲ್ ಹೊಂದಿದ್ದಾರೆ. ತಮ್ಮದೇ ಸಿನಿಮಾಗಳ ಬಗ್ಗೆ ಪ್ರಚಾರ ಮಾಡಲು, ಹೊಸ ವಿಚಾರಗಳನ್ನು ತಿಳಿಸಲು, ದಿನಚರಿ ಬಗ್ಗೆ ಅಪ್ಡೇಟ್ ನೀಡಲು ಈ ಚಾನೆಲ್ ಬಳಕೆ ಆಗುತ್ತದೆ. ಮೇಘನಾ ರಾಜ್ ಕೂಡ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ಅಭಿಮಾನಿಗಳಿಗೆ ಇನ್ನಷ್ಟು ಹತ್ತಿರ ಆಗುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: Meghana Raj: ಫಿಲ್ಮ್ಫೇರ್ ಸಮಾರಂಭಕ್ಕೆ ರಾಯನ್ ರಾಜ್ ಸರ್ಜಾ ಯಾಕೆ ಬಂದಿಲ್ಲ? ಕಾರಣ ತಿಳಿಸಿದ ಮೇಘನಾ ರಾಜ್
ಪತಿ ಚಿರಂಜೀವಿ ಸರ್ಜಾ ನಿಧನದ ಬಳಿಕ ಮೇಘನಾ ರಾಜ್ ಅವರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿತ್ತು. ರಾಯನ್ ಜನಿಸಿದ ನಂತರ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಆರಂಭ ಆಯಿತು. ನೋವನ್ನೆಲ್ಲ ಬದಿಗಿಟ್ಟು ಮತ್ತೆ ಅವರು ಚಿತ್ರರಂಗಕ್ಕೆ ಕಮ್ಬ್ಯಾಕ್ ಮಾಡಿದರು. ಈಗ ಹಲವು ಪ್ರಾಜೆಕ್ಟ್ಗಳಲ್ಲಿ ತೊಡಗಿಕೊಂಡಿದ್ದಾರೆ. ಮೊದಲಿನಂತೆಯೇ ನಟನೆಯಲ್ಲಿ ಮೇಘನಾ ರಾಜ್ ಬ್ಯುಸಿ ಆಗಿದ್ದಾರೆ.
ಪನ್ನಗ ಭರಣ ನಿರ್ಮಾಣ ಮಾಡುತ್ತಿರುವ, ವಿಶಾಲ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಮೇಘನಾ ರಾಜ್ ನಟಿಸುತ್ತಿದ್ದಾರೆ. ಆ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಅವರು ಅತಿಥಿ ಪಾತ್ರ ಮಾಡುತ್ತಿದ್ದಾರೆ. ಅಭಿಮಾನಿಗಳು ಈ ಸಿನಿಮಾ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ನಟನೆಯ ಜೊತೆಗೆ ರಾಯನ್ ರಾಜ್ ಸರ್ಜಾನ ಆರೈಕೆಯಲ್ಲೂ ಮೇಘನಾ ರಾಜ್ ತೊಡಗಿಕೊಂಡಿದ್ದಾರೆ. ಈಗ ಯೂಟ್ಯೂಬ್ ಚಾನೆಲ್ನ ಹೊಸ ಪ್ರಯತ್ನಕ್ಕೂ ಅವರು ಕೈ ಹಾಕಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:03 pm, Sun, 25 December 22