ಚಿರಂಜೀವಿ ಸರ್ಜಾ ಮೃತಪಟ್ಟು ವರ್ಷದ ಮೇಲಾಗಿದೆ. ಅವರ ಜತೆ ಕಳೆದ ನೆನಪು ಕುಟುಂಬದವರಿಗೆ ಹಾಗೂ ಅವರ ಗೆಳೆಯರಿಗೆ ಇನ್ನೂ ಮಾಸಿಲ್ಲ. ಒಂದಿಲ್ಲೊಂದು ರೀತಿಯಲ್ಲಿ ನಿತ್ಯವೂ ಅವರನ್ನು ನೆನಪು ಮಾಡಿಕೊಳ್ಳುವ ಕಾರ್ಯ ಕುಟುಂಬದವರು ಮಾಡುತ್ತಿದ್ದಾರೆ. ಪತ್ನಿ ಮೇಘನಾ ರಾಜ್ ಅವರಂತೂ ಚಿರು ಅವರನ್ನು ತುಂಬಾನೇ ನೆನಪು ಮಾಡಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಮೇಘನಾ ಮಹತ್ವದ ನಿರ್ಧಾರ ಒಂದನ್ನು ತೆಗೆದುಕೊಂಡಿದ್ದಾರೆ. ಈ ಬಗ್ಗೆ ಅವರು ಮಾತನಾಡಿದ್ದಾರೆ.
ಮಗುವನ್ನು ಪಡೆಯಬೇಕು ಎನ್ನುವ ನಿರ್ಧಾರಕ್ಕೆ ಬಂದ ನಂತರ ಮೇಘನಾ ಅವರು ಸಿನಿಮಾ ಕೆಲಸಗಳಿಂದ ಬ್ರೇಕ್ ತೆಗೆದುಕೊಂಡರು. ಇದಾದ ನಂತರ ಪತಿಯನ್ನು ಕಳೆದುಕೊಂಡರು. ಆ ನಂತರ ರಾಯನ್ ಜನಿಸಿದ. ಅವನ ಆರೈಕೆಯಲ್ಲಿ ಮೇಘನಾ ಬ್ಯುಸಿ ಆದರು. ಈಗ ಒಂದು ಸಣ್ಣ ಗ್ಯಾಪ್ನ ನಂತರ ಮೇಘನಾ ಮತ್ತೆ ಸಿನಿಮಾ ಕೆಲಸಗಳಿಗೆ ಮರಳಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಅವರು ಚಿರು ಬಗ್ಗೆ ತೆಗೆದುಕೊಂಡು ನಿರ್ಧಾರದ ಬಗ್ಗೆ ಮಾಹಿತಿ ನೀಡಿದ್ದಾರೆ.
ಚಿರು ಮೃತಪಟ್ಟ ನಂತರದಲ್ಲಿ ಮೇಘನಾ ಸಾಕಷ್ಟು ನೋವು ಅನುಭವಿಸಿದರು. ಈಗ ರಾಯನ್ ಜನಿಸಿದ್ದು, ಈ ನೋವು ನಿಧಾನವಾಗಿ ಮಾಸುತ್ತಿದೆ. ಹಾಗಿರುವಾಗಲೇ ಅವರು ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ‘ಚಿರು ನಮ್ಮ ಜತೆ ಇಲ್ಲ. ಆದರೆ, ಅಕ್ಟೋಬರ್ 17ಅನ್ನು ನಾನು ಮತ್ತು ನಮ್ಮ ಫ್ರೆಂಡ್ಸ್ ಯಾವಾಗಲೂ ಸೆಲಬ್ರೇಟ್ ಮಾಡುತ್ತೇವೆ. ಯಾರು ಏನೇ ಹೇಳಲಿ, ಯಾರು ಏನೆ ಮಾತಾಡಲಿ. ನಾವು ಚಿರು ಹುಟ್ಟುಹಬ್ಬ ಆಚರಿಸಿಯೇ ಆಚರಿಸುತ್ತೇವೆ’ ಎಂದು ಹೇಳಿಕೊಳ್ಳುವ ಮೂಲಕ ಆಡಿಕೊಳ್ಳುವವರ ಬಾಯಿ ಮುಚ್ಚಿಸಿದರು.
ಇನ್ನು ಮೇಘನಾ ಮತ್ತು ಚಿರು ಗೆಳೆಯ ಪನ್ನಗ ಭರಣ ಕೂಡ ಈ ಬಗ್ಗೆ ಮಾತನಾಡಿದರು. ‘ನಾವೆಲ್ಲರೂ ಸೇರಿ ಒಂದು ನಿರ್ಧಾರ ತೆಗೆದುಕೊಂಡಿದ್ದೇವೆ. ಚಿರು ನೆನಪಾದಾಗ ನಾವು ಎಂದಿಗೂ ಬೇಸರ ಮಾಡಿಕೊಳ್ಳುವುದಿಲ್ಲ. ನಾವು ಅವನ ನೆನಪನ್ನು ಸೆಲೆಬ್ರೇಟ್ ಮಾಡಬೇಕು ಎಂದುಕೊಂಡಿದ್ದೇವೆ. ಹಾಗೆಯೇ ಮಾಡುತ್ತೇವೆ’ ಎಂದರು ಅವರು. ಈ ಮೂಲಕ ಮೇಘನಾಗೆ ಬೆಂಬಲ ನೀಡಿದರು.
Chiranjeevi Sarja: ಚಿರು ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ವಿಶೇಷ ಫೋಟೋಶೂಟ್; ಇಲ್ಲಿದೆ ರಾಣಿ ಗೆಟಪ್ನ ಫೋಟೋ ಆಲ್ಬಂ
Published On - 1:36 pm, Sun, 17 October 21