‘ಹೈನ’ ಕನ್ನಡ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ಸಂಸದ ತೇಜಸ್ವಿ ಸೂರ್ಯ

|

Updated on: Jan 17, 2025 | 9:05 PM

‘ಹೈನ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಈ ಸಿನಿಮಾದ ಟ್ರೇಲರ್​ ಅನಾವರಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ದೇಶಭಕ್ತಿಯ ಕಥಾಹಂದರ ಇದೆ. ವೆಂಕಟ್ ಭಾರದ್ವಾಜ್ ಅವರು ನಿರ್ದೇಶನ ಮಾಡಿದ್ದಾರೆ. ಟ್ರೇಲರ್​ ಬಿಡುಗಡೆ ಮಾಡಿದ ಬಳಿಕ ಚಿತ್ರತಂಡಕ್ಕೆ ತೇಜಸ್ವಿ ಸೂರ್ಯ ಶುಭ ಹಾರೈಸಿದರು.

‘ಹೈನ’ ಕನ್ನಡ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ ಸಂಸದ ತೇಜಸ್ವಿ ಸೂರ್ಯ
Tejasvi Surya With Hyena Movie Team
Follow us on

ಬಿಡುಗಡೆಗೆ ಸಜ್ಜಾಗಿರುವ ‘ಹೈನ’ ಸಿನಿಮಾದಲ್ಲಿ ಹರ್ಷ ಅರ್ಜುನ್, ರಾಜ್ ಕಮಲ್, ದಿಗಂತ ಸ್ವರೂಪ, ಲಕ್ಷ್ಮಣ ಶಿವಶಂಕರ್, ನಂದಕಿಶೋರ್, ಲಾರೆನ್ಸ್ ಪ್ರೀತಂ ಮುಂತಾದವರು ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್​ ಬಿಡುಗಡೆ ಮಾಡಲಾಗಿದೆ. ಈ ಚಿತ್ರದಲ್ಲಿ ದೇಶಪ್ರೇಮದ ಕಥೆ ಇದೆ ಎಂದು ಚಿತ್ರತಂಡ ಹೇಳಿದೆ. ವೆಂಕಟ್ ಭಾರದ್ವಾಜ್ ಅವರು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ವೆಂಕಟ್ ಭಾರದ್ವಾಜ್ ಮತ್ತು ರಾಜ್ ಕಮಲ್ ನಿರ್ಮಾಣ ಮಾಡಿದ್ದಾರೆ. ತೇಜಸ್ವಿ ಸೂರ್ಯ ಅವರಿಂದ ‘ಹೈನ’ ಟ್ರೇಲರ್ ಅನಾವರಣ ಆಗಿದೆ.

ಜನವರಿ 31ರಂದು ‘ಹೈನ’ ಸಿನಿಮಾ ಬಿಡುಗಡೆ ಆಗಲಿದೆ. ‘ಸಮಾಜಕ್ಕೆ ಉತ್ತಮ ಸಂದೇಶ ಕೊಡಲು ಈ ಸಿನಿಮಾವನ್ನು ಮಾಡಿದ್ದಾರೆ‌. ಪ್ರಚಲಿತ ವಿಷಯಗಳನ್ನು ಇಟ್ಟುಕೊಂಡು ಪ್ರೇಕ್ಷಕರಲ್ಲಿ ಅರಿವು ಮೂಡಿಸುವ ಪ್ರಯತ್ನವನ್ನು ಈ ಸಿನಿಮಾದ ಮೂಲಕ ಮಾಡುತ್ತಿರುವುದು ಶ್ಲಾಘನೀಯ. ಇದರಿಂದ ಸಮಾಜದಲ್ಲಿ ಜಾಗೃತಿ ಉಂಟಾಗಲಿ. ವೆಂಕಟ್ ಭಾರಧ್ವಜ್ ಅವರ ಪ್ರಯತ್ನಕ್ಕೆ ಶುಭವಾಗಲಿ. ಮತ್ತಷ್ಟು ಸಿನಿಮಾಗಳು ಅವರಿಂದ ಬರಲಿ’ ಎಂದು ತೇಜಸ್ವಿ ಸೂರ್ಯ ಅವರು ಹೇಳಿದರು.

‘ಹೈನ’ ಸಿನಿಮಾ ಟ್ರೇಲರ್:

ಇದೇ ವೇಳೆ ನಿರ್ದೇಶಕ ವೆಂಕಟ್ ಭಾರದ್ವಾಜ್ ಮಾತನಾಡಿದರು. ‘ಇದು ರಾಷ್ಟ್ರಭಕ್ತಿಯ ಕಥೆ ಇರುವ ಸಿನಿಮಾ. ಈ ರೀತಿಯ ಸಿನಿಮಾ ನಿರ್ದೇಶನ ಮಾಡಲು ತುಂಬ ಖುಷಿ ಆಗುತ್ತದೆ. ಗುಪ್ತಚರ ಇಲಾಖೆ, ರಕ್ಷಣಾ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಕಾರ್ಯವೈಖರಿ ಹೇಗಿರಲಿದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸುತ್ತಿದ್ದೇವೆ. ಟ್ರೇಲರ್ ಬಿಡುಗಡೆ ಮಾಡಿದ ತೇಜಸ್ವಿ ಸೂರ್ಯ ಅವರಿಗೆ ಧನ್ಯವಾದಗಳು. ಈ ಸಿನಿಮಾದಲ್ಲಿ ಕೆಲವು ದೇಶಗಳ ಹೆಸರನ್ನು ಬಳಸಿದ್ದೆವು. ಆದರೆ ಆ ಹೆಸರುಗಳನ್ನು ಬಳಸದಂತೆ ಸೆನ್ಸಾರ್ ಮಂಡಳಿ ಹೇಳಿದೆ‌. ಅದು ಸ್ವಲ್ಪ ಬೇಸರವಾಗಿದೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ತೇಜಸ್ವಿ ಸೂರ್ಯ ಕೈ ಹಿಡಿಯಲಿರುವ ಹುಡುಗಿಯ ಸುಮಧುರ ಕಂಠದಲ್ಲಿ ರಾಮನ ಗೀತೆ; ಮೋದಿ ಮೆಚ್ಚಿದ ಧ್ವನಿ ಇದು

ಈ ಸಿನಿಮಾಗೆ ನಿಶಾಂತ್ ನಾಣಿ ಛಾಯಾಗ್ರಹಣ ಮಾಡಿದ್ದಾರೆ. ಶಮೀಕ್ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಅಕ್ರಮ‌ ವಲಸಿಗರು ನಮ್ಮ ದೇಶದ ಒಳಗೆ ನುಸುಳಿ ಹೇಗೆ ಉಪಯೋಗಿಸುತ್ತಿದ್ದಾರೆ . ರಾಷ್ಟ್ರದ ಆಂತರಿಕ ಭದ್ರತೆ ಕೆಡುತ್ತಿದೆ. ಭಯೋತ್ಪಾದಕರಿಗೆ ಹಣ ಹೇಗೆ ಬರುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ’ ಎಂದು ಕಥೆ ಬರೆದಿರುವ ಲಕ್ಷ್ಮಣ್ ಶಿವಶಂಕರ್ ಮಾಹಿತಿ ನೀಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.