
‘ಟಾಕ್ಸಿಕ್’ ಸಿನಿಮಾದ ಟೀಸರ್ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಟೀಸರ್ನಲ್ಲಿ ಓರ್ವ ನಟಿ ಬರುತ್ತಾರೆ. ಅವರು ಕಾರಿನಲ್ಲಿ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಆ ನಟಿಯ ಹೆಸರು ನಟೇಲಿ ಬರ್ನ್ ಎನ್ನಲಾಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ನಿರ್ದೇಶಕಿ ಗೀತು ಮೋಹನ್ದಾಸ್ ಅವರು, ಕಾರಿನಲ್ಲಿದ್ದ ನಟಿ ಬಿಯಾತ್ರೀಜ್ ಟಾಫೆಬಾಕ್ ಎಂದು ಸ್ಪಷ್ಟನೆ ನೀಡಿದ್ದರು. ಆ ಬಳಿಕ ಬಿಯಾತ್ರೀಜ್ ಟಾಫೆಬಾಕ್ಗೆ ಹೇಟ್ ಮೆಸೇಜ್ಗಳು ತಲುಪಿದ್ದವು. ಇದರಿಂದ ಬೇಸರ ಗೊಂಡಿರೋ ಬಿಯಾತ್ರೀಜ್ ಟಾಫೆಬಾಕ್ ಇನ್ಸ್ಟಾ ಖಾತೆಯನ್ನು ತಾತ್ಕಾಲಿಕವಾಗಿ ಡಿಲೀಟ್ ಮಾಡಿದ್ದಾರೆ.
ನಟೇಲಿ ಬರ್ನ್ ಮೂಲತಃ ಉಕ್ರೇನ್ನವರು. ಆದರೆ, ಅವರು ಹಾಲಿವುಡ್ನ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ನಿರ್ಮಾಪಕಿ ಕೂಡ ಹೌದು. ‘ಟಾಕ್ಸಿಕ್’ ಸಿನಿಮಾದಲ್ಲಿ ಇವರು ನಟಿಸಿದ್ದಾರೆ ಎನ್ನಲಾಗಿತ್ತು. ಆದರೆ, ಕಾರಿನ ದೃಶ್ಯದಲ್ಲಿ ಇದ್ದವರು ಇವರಲ್ಲ ಎಂಬ ಸ್ಪಷ್ಟನೆ ಸಿಕ್ಕಿತು. ಆ ಬಳಿಕ ಬಿಯಾತ್ರೀಜ್ ಟಾಫೆಬಾಕ್ ಅವರಿಗೆ ಸಾಕಷ್ಟು ಸಂದೇಶಗಳು ಹೋಗಿವೆ. ರಿಕ್ವೆಸ್ಟ್ಗಳು ಕೂಡ ದೊಡ್ಡ ಮಟ್ಟದಲ್ಲೇ ತಲುಪಿದೆ.
ಈ ವಿಷಯಗಳಿಂದ ಬಿಯಾತ್ರೀಜ್ ಟಾಫೆಬಾಕ್ ಬೇಸರಗೊಂಡರೇ ಎನ್ನುವ ಪ್ರಶ್ನೆ ಮೂಡಿದೆ. ಹಾಲಿವುಡ್ ಸಿನಿಮಾಗಳಲ್ಲಿ ಬೋಲ್ಡ್ ದೃಶ್ಯ ಮಾಡಿದರೆ ಯಾರೂ ಅದನ್ನು ಟೀಕಿಸೋದಿಲ್ಲ. ಆದರೆ, ಕನ್ನಡ ಸಿನಿಮಾಗಳಲ್ಲಿ ಈ ರೀತಿಯ ದೃಶ್ಯ ಕಂಡಾಗ ಕೆಲವರಿಗೆ ಅದನ್ನು ಅರಗಿಸಿಕೊಳ್ಳೋಕೆ ಸಾಧ್ಯವಾಗಿಲ್ಲ. ಹೀಗಾಗಿ, ಟೀಸರ್ನ ಹಾಗೂ ಟೀಸರ್ನಲ್ಲಿ ನಟಿಸಿದ ಕಲಾವಿದರನ್ನು ಟೀಕಿಸಲಾಗುತ್ತಿದೆ. ಬಿಯಾತ್ರೀಜ್ ಟಾಫೆಬಾಕ್ ಅವರನ್ನು ಕೂಡ ಟೀಕಿಸಲಾಯಿತು. ಈ ಬೆಳವಣಿಗೆ ಬಿಯಾತ್ರೀಜ್ ಟಾಫೆಬಾಕ್ ಬೇಸರ ತಂದಿರಬಹುದು. ಇದರಿಂದ ಅವರು ತಾತ್ಕಾಲಿಕವಾಗಿ ಖಾತೆಯನ್ನು ಡಿಆ್ಯಕ್ಟೀವೇಟ್ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ‘ಅದಕ್ಕೂ ನಮಗೂ ಸಂಬಂಧವಿಲ್ಲ’; ‘ಟಾಕ್ಸಿಕ್’ ಟೀಸರ್ ದೂರಿಗೆ ಸೆನ್ಸಾರ್ ಮಂಡಳಿಯ ಪ್ರತಿಕ್ರಿಯೆ
‘ಟಾಕ್ಸಿಕ್’ ಸಿನಿಮಾದ ನಿರ್ದೇಶಕಿ ಗೀತು ಮೋಹನ್ದಾಸ್, ‘ಟಾಕ್ಸಿಕ್’ ಸಿನಿಮಾ ಟೀಸರ್ನಲ್ಲಿ ಇದ್ದ ನಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯಿಸಿದ್ದರು. ಟೀಸರ್ನಲ್ಲಿರುವುದು ನಟೇಲಿ ಬರ್ನ್ ಅಲ್ಲ ಬದಲಿಗೆ ನಟಿ ಬಿಯಾತ್ರೀಜ್ ಟಾಫೆಬಾಕ್ ಎಂದು ಹೇಳಿದ್ದರು. ನಟಿಯ ಚಿತ್ರ ಹಂಚಿಕೊಂಡಿರುವ ಗೀತು ಮೋಹನ್ದಾಸ್, ‘ಈಕೆಯೇ ನನ್ನ ಸಿಮೆಟ್ರಿ (ಸ್ಮಶಾನದ) ಹುಡುಗಿ’ ಎಂದಿದ್ದರು. ಬಿಯಾತ್ರೀಜ್ ಟಾಫೆಬಾಕ್ ಇನ್ಸ್ಟಾಗ್ರಾಂ ಖಾತೆಯನ್ನು ಪ್ರೈವೇಟ್ ಆಗಿ ಇಡಲಾಗಿತ್ತು. ಈಗ ಅದು ಡಿಲೀಟ್ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:14 am, Wed, 14 January 26