AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಸಿನಿಮಾ ನೋಡಿ ಎಂದು ಪಾಂಪ್ಲೆಂಟ್ ಹಂಚಿದ್ದ ಯಶ್; ಅಪರೂಪದ ಫೋಟೋ ವೈರಲ್

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರ ಆರಂಭಿಕ ಹೋರಾಟದ ಅಪರೂಪದ ಫೋಟೋ ವೈರಲ್ ಆಗಿದೆ. 'ನನ್ನ ಸಿನಿಮಾ ನೋಡಿ ಪ್ಲೀಸ್' ಎಂದು 'ಮೊದಲಸಲ' ಚಿತ್ರದ ಪಾಂಪ್ಲೆಂಟ್‌ಗಳನ್ನು ಹಂಚಿದ್ದರು. ಈ ಚಿತ್ರ ಪ್ರಚಾರದ ಸಂದರ್ಭದ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಮ್ಮ ಪರಿಶ್ರಮದಿಂದಲೇ ಈ ಮಟ್ಟಕ್ಕೆ ಬೆಳೆದ ರಾಕಿಂಗ್ ಸ್ಟಾರ್ ಯಶ್ ಈಗ 'ಟಾಕ್ಸಿಕ್' ಮೂಲಕ ಜಾಗತಿಕ ಸ್ಟಾರ್ ಆಗುವ ಸಿದ್ಧತೆಯಲ್ಲಿದ್ದಾರೆ.

ನನ್ನ ಸಿನಿಮಾ ನೋಡಿ ಎಂದು ಪಾಂಪ್ಲೆಂಟ್ ಹಂಚಿದ್ದ ಯಶ್; ಅಪರೂಪದ ಫೋಟೋ ವೈರಲ್
ಯಶ್
ರಾಜೇಶ್ ದುಗ್ಗುಮನೆ
|

Updated on: Jan 14, 2026 | 11:55 AM

Share

ರಾಕಿಂಗ್ ಸ್ಟಾರ್ ಯಶ್ (Yash) ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ‘ಟಾಕ್ಸಿಕ್’ ಸಿನಿಮಾ ರಿಲೀಸ್ ಆದ ಬಳಿಕ ಅವರು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳಬಹುದು. ಹಾಲಿವುಡ್ ಸಿನಿಮಾಗಳಿಂದ ಅವರಿಗೆ ಆಫರ್ ಬರಹುದು. ಇಷ್ಟೆಲ್ಲ ಸಾಧನೆ ಮಾಡಿರುವ ಯಶ್ ನಡೆದು ಬಂದ ಹಾದಿ ಕಲ್ಲು-ಮುಳ್ಳುಗಳಿಂದ ಕೂಡಿತ್ತು. ‘ನನ್ನ ಸಿನಿಮಾ ನೋಡಿ ಪ್ಲೀಸ್’ ಎಂದು ಯಶ್ ಅವರು ಪಾಂಪ್ಲೆಂಟ್ ಹಂಚಿದ್ದರು. ಆ ಸಂದರ್ಭದ ಅಪರೂಪದ ಫೋಟೋ ವೈರಲ್ ಆಗಿದೆ.

ಯಶ್ ಅವರು ಧಾರಾವಾಹಿ ಕ್ಷೇತ್ರದಲ್ಲಿ ಮಿಂಚಿ ನಂತರ ಸಿನಿಮಾ ಮಾಡಿದರು. ಅವರು ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ‘ಮೊಗ್ಗಿನ ಮನಸ್ಸು’ ಅವರ ನಟನೆಯ ಮೊದಲ ಚಿತ್ರ. ಈ ಸಿನಿಮಾ ಯಶಸ್ಸು ಕಂಡಿತ್ತು. 2010ರಲ್ಲಿ ಅವರು ‘ಮೊದಲಸಲ’ ಸಿನಿಮಾ ಮಾಡಿದರು. ಈ ಚಿತ್ರವನ್ನು ಪುರುಷೋತ್ತಮ್ ಸಿ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕಾಗಿ ಯಶ್ ಸಾಕಷ್ಟು ಪ್ರಚಾರ ಮಾಡಿದ್ದರು.

ಇದನ್ನೂ ಓದಿ: ‘ಅದಕ್ಕೂ ನಮಗೂ ಸಂಬಂಧವಿಲ್ಲ’; ‘ಟಾಕ್ಸಿಕ್’ ಟೀಸರ್ ದೂರಿಗೆ ಸೆನ್ಸಾರ್ ಮಂಡಳಿಯ ಪ್ರತಿಕ್ರಿಯೆ

ಯಶ್ ಹಾಗೂ ಭಾಮಾ ಕಾಂಬಿನೇಷನ್​​ನಲ್ಲಿ ಮೂಡಿ ಬಂದ ‘ಮೊದಲಸಲ’ ಸಿನಿಮಾದಲ್ಲಿ ರಂಗಾಯಣ ರಘು, ತಾರಾ ಮೊದಲಾದವರು ನಟಿಸಿದ್ದರು. ಈ ಸಿನಿಮಾ ಭಾವನಾತ್ಮಕವಾಗಿ ಸೆಳೆದುಕೊಂಡಿತ್ತು. ಈ ಚಿತ್ರದ ಪ್ರಚಾರ ಮಾಡಲು ಯಶ್, ಬಸ್ ಏರಿದ್ದರು. ಬಸ್ ದಿನದ ಆಚರಣೆ ವೇಳೆ ‘ಮೊದಲ ಸಲ’ ಸಿನಿಮಾದ ಶರ್ಟ್ ಹಾಕಿ ಮಕ್ಕಳಿಗೆ ಪಾಂಪ್ಲೆಟ್ ನೀಡಿದ್ದರು. ಈ ಫೋಟೋನ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.

ತಮ್ಮ ಪರಿಶ್ರಮದಿಂದ ಯಶ್ ಈ ಹಂತ ತಲುಪಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಅವರ ಈ ಫೋಟೋನ ಫ್ಯಾನ್ಸ್ ತುಂಬಾನೇ ಇಷ್ಟಪಟ್ಟಿದ್ದಾರೆ. ಅವರ ನಟನೆಯ ‘ಟಾಕ್ಸಿಕ್’ ಸಿನಿಮಾದ ಟೀಸರ್ ಸೂಪರ್ ಹಿಟ್ ಆಗಿದೆ. ಈ ಟೀಸರ್ ಯೂಟ್ಯೂಬ್ ಒಂದರಲ್ಲೇ 88 ಮಿಲಿಯನ್ ವೀವ್ಸ್ ಕಂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.