‘ನಾತಿಚರಾಮಿ’ ನಿರ್ದೇಶಕ ಮಂಸೋರೆ ನಿಶ್ಚಿತಾರ್ಥ; ಸಿಂಪಲ್​ ಆಗಿ ನಡೆಯಿತು ಎಂಗೇಜ್​ಮೆಂಟ್​

| Updated By: ರಾಜೇಶ್ ದುಗ್ಗುಮನೆ

Updated on: Jul 04, 2021 | 5:12 PM

ಕೊರೊನಾ ವೈರಸ್​ ಲಾಕ್​ಡೌನ್​ ನಿಯಮಾವಳಿ ಅನುಸಾರ ಕೆಲವೇ ಕೆಲವು ಮಂದಿಯ ಸಮ್ಮುಖದಲ್ಲಿ ಈ ನಿಶ್ಚಿತಾರ್ಥ ನೆರವೇರಿದೆ. ಕುಟುಂಬದವರು, ಆಪ್ತರು, ಸ್ನೇಹಿತರು ಸೇರಿ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು.

‘ನಾತಿಚರಾಮಿ’ ನಿರ್ದೇಶಕ ಮಂಸೋರೆ ನಿಶ್ಚಿತಾರ್ಥ; ಸಿಂಪಲ್​ ಆಗಿ ನಡೆಯಿತು ಎಂಗೇಜ್​ಮೆಂಟ್​
ನಾತಿಚರಾಮಿ’ ನಿರ್ದೇಶಕ ಮಂಸೋರೆ ನಿಶ್ಚಿತಾರ್ಥ;
Follow us on

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಭಾನುವಾರ (ಜು.4) ಅವರು ಅಖಿಲಾ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಕೊರೊನಾ ವೈರಸ್​ ಲಾಕ್​ಡೌನ್​ ನಿಯಮಾವಳಿ ಅನುಸಾರ ಕೆಲವೇ ಕೆಲವು ಮಂದಿಯ ಸಮ್ಮುಖದಲ್ಲಿ ಈ ನಿಶ್ಚಿತಾರ್ಥ ನೆರವೇರಿದೆ. ಕುಟುಂಬದವರು, ಆಪ್ತರು, ಸ್ನೇಹಿತರು ಸೇರಿ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಆಗಸ್ಟ್​ 15ರಂದು ಮಂಸೋರೆ-ಅಖಿಲಾ ಬಾಳಬಂಧನಕ್ಕೆ ಒಳಗಾಗಲಿದ್ದಾರೆ.

‘ಹರಿವು’, ‘ನಾತಿಚರಾಮಿ’ ಮತ್ತು ‘ಆಕ್ಟ್​ 1978’ ಚಿತ್ರಗಳಿಗೆ ನಿರ್ದೇಶನ ಮಾಡಿದವರು ಮಂಸೋರೆ. ಈ ಪೈಕಿ ಹರಿವು ಮತ್ತು ನಾತಿಚರಾಮಿ ಚಿತ್ರಗಳಲ್ಲಿ ಸಂಚಾರಿ ವಿಜಯ್​ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ಈ ಎರಡೂ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿತ್ತು. ‘ಆಕ್ಟ್​ 1978’ ಚಿತ್ರದಲ್ಲೂ ಸಂಚಾರಿ ವಿಜಯ್​ ಒಂದು ಪಾತ್ರ ಮಾಡಿದ್ದರು. ಈಗ ಮಂಸೋರೆ ಅವರು ರಾಣಿ ಅಕ್ಕಬ್ಬನ ಕುರಿತು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಅದರ ನಡುವೆಯೇ ಮದುವೆ ಎಂಬ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ.

ಮಂಸೋರೆ ಮಾಡಿರುವುದು ಮೂರೇ ಸಿನಿಮಾಗಳಾದರೂ ಕೂಡ ಆ ಚಿತ್ರಗಳ ಸಾಧನೆ ದೊಡ್ಡದು. 2014ರಲ್ಲಿ ಬಂದ ‘ಹರಿವು’ ಹಾಗೂ 2018ರಲ್ಲಿ ಬಿಡುಗಡೆಯಾದ ‘ನಾತಿಚರಾಮಿ’ ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ ಬಂದಿತ್ತು. ‘ನಾತಿಚರಾಮಿ’ ಸಿನಿಮಾದ ಹಾಡಿಗೆ ಮಂಸೋರೆ ಅವರಿ ‘ಉತ್ತಮ ಸಾಹಿತ್ಯಕ್ಕೆ ರಾಷ್ಟ್ರಪ್ರಶಸ್ತಿ’ ಪಡೆದುಕೊಂಡರು. ಅಲ್ಲದೆ, ಇತರೆ ಮೂರು ವಿಭಾಗಗಳಲ್ಲಿ ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗೌರವ ಸಿಕ್ಕಿತ್ತು. ಆ ಚಿತ್ರದ ನಿರ್ದೇಶನಕ್ಕಾಗಿ ಮಂಸೋರೆ ಅವರಿಗೆ ಉತ್ತಮ ನಿರ್ದೇಶಕ ಫಿಲ್ಮ್ ಫೇರ್ ಪ್ರಶಸ್ತಿಯ ಕೂಡ ಒಲಿದು ಬಂದಿತ್ತು.

ಕಳೆದ ವರ್ಷ ಲಾಕ್​ ಡೌನ್​ ಬಳಿಕ ಬಿಡುಗಡೆಯಾದ ‘ಆಕ್ಟ್ 1978’ ಚಿತ್ರಕ್ಕೆ ಇಡೀ ಸ್ಯಾಂಡಲ್​ವುಡ್​ ಮೆಚ್ಚುಗೆ ಸೂಚಿಸಿದ್ದು ವಿಶೇಷ. ಹಂಸಲೇಖ, ದರ್ಶನ್​ ಮುಂತಾದ ಸೆಲೆಬ್ರಿಟಿಗಳು ಮಂಸೋರೆ ಮತ್ತು ತಂಡಕ್ಕೆ ಭೇಷ್​ ಎಂದಿದ್ದರು. ಬಾಕ್ಸ್​ ಆಫೀಸ್​ನಲ್ಲಿ ಕೆಲವು ಸಿಕ್ಕಿದ್ದು ಮಾತ್ರವಲ್ಲದೆ, ವಿಮರ್ಶಕರಿಂದಲೂ ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ರಾಣಿ ಅಬ್ಬಕ್ಕನ ಕುರಿದ ಸಿನಿಮಾ ಮಾತ್ರವಲ್ಲದೆ, ಮತ್ತೊಂದು ಹೊಸ ಚಿತ್ರ ಘೋಷಿಸಲು ಕೂಡ ಮಂಸೋರೆ ಪ್ಲ್ಯಾನ್​ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಲಾಕ್​ಡೌನ್​ ಎಫೆಕ್ಟ್​; ಕರ್ನಾಟಕದಲ್ಲಿ ಬಾಗಿಲು ಮುಚ್ಚಲಿವೆ 150 ಚಿತ್ರಮಂದಿರಗಳು

ಜೀ ಕನ್ನಡದಲ್ಲಿ ಗಣೇಶ್​ ಸಿನಿಮಾ ‘ಗೀತಾ’; ಭಾಷಾಪ್ರೇಮದ ಜೊತೆ ಒಂದು ಪ್ರೇಮಕಥೆ