ನವೆಂಬರ್ 24ಕ್ಕೆ ಬಿಡುಗಡೆ ಆಗಲಿದೆ ‘ಎಲೆಕ್ಟ್ರಾನಿಕ್​ ಸಿಟಿ’ ಸಿನಿಮಾ; ಇದು ಐಟಿ ಜನರ ಕಹಾನಿ

|

Updated on: Nov 22, 2023 | 12:13 PM

ಮಹಾನಗರ ಬೆಂಗಳೂರಿನಲ್ಲಿ ಲೆಕ್ಕವಿಲ್ಲದಷ್ಟು ಐಟಿ ಕಂಪನಿಗಳು ಕಾರ್ಯನಿರತವಾಗಿವೆ. ಲಕ್ಷಾಂತರ ಜನರಿಗೆ ಇದರಿಂದ ಉದ್ಯೋಗ ಸಿಕ್ಕಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿ ಭಾಗದಲ್ಲಿ ಅನೇಕ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಕೆಲಸ ಮಾಡುವ ಐಟಿ ಉದ್ಯೋಗಿಗಳ ಕಥೆಯನ್ನೇ ಇಟ್ಟುಕೊಂಡು ‘ಎಲೆಕ್ಟ್ರಾನಿಕ್​ ಸಿಟಿ’ ಸಿನಿಮಾ ಮಾಡಲಾಗಿದೆ.

ನವೆಂಬರ್ 24ಕ್ಕೆ ಬಿಡುಗಡೆ ಆಗಲಿದೆ ‘ಎಲೆಕ್ಟ್ರಾನಿಕ್​ ಸಿಟಿ’ ಸಿನಿಮಾ; ಇದು ಐಟಿ ಜನರ ಕಹಾನಿ
‘ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾ ತಂಡ
Follow us on

ಕನ್ನಡ ಚಿತ್ರರಂಗದಲ್ಲಿ (Sandalwood) ಸಿನಿಮಾಗಳ ಶೀರ್ಷಿಕೆಗಳ ಮೂಲಕ ಹಲವು ಪ್ರಯೋಗಗಳು ನಡೆದಿವೆ. ಬೆಂಗಳೂರಿನ ಪ್ರಮುಖ ಏರಿಯಾಗಳ ಹೆಸರನ್ನು ಇಟ್ಟುಕೊಂಡು ಬಂದ ಸಿನಿಮಾಗಳು ಸಾಕಷ್ಟಿವೆ. ‘ಮೆಜೆಸ್ಟಿಕ್​’, ‘ಕಲಾಸಿಪಾಳ್ಯ’, ‘ಜಯನಗರ 4ನೇ ಬ್ಲಾಕ್​’.. ಹೀಗೆ ಡಿಫರೆಂಟ್​ ಪ್ರಯತ್ನಗಳಾಗಿವೆ. ಈಗ ಇನ್ನೊಂದು ಏರಿಯಾದ ಹೆಸರು ಕನ್ನಡ ಚಿತ್ರಕ್ಕೆ ಶೀರ್ಷಿಕೆ ಆಗಿದೆ. ಎಲೆಕ್ಟ್ರಾನಿಕ್​ ಸಿಟಿ’ (Electronic City) ಎಂಬುದೇ ಆ ಸಿನಿಮಾ. ಶೀರ್ಷಿಕೆ ನೋಡಿದ ತಕ್ಷಣ ಈ ಸಿನಿಮಾದ ಕಹಾನಿ ಏನು ಎಂಬುದನ್ನು ಊಹಿಸಬಹುದು. ಹೌದು, ಐಟಿ ಮಂದಿಯ ಕಥೆ ಈ ಸಿನಿಮಾದಲ್ಲಿದೆ. ಈ ಚಿತ್ರ ನವೆಂಬರ್​ 24ರಂದು ಬಿಡುಗಡೆ ಆಗುತ್ತಿದೆ.

ಮಹಾನಗರ ಬೆಂಗಳೂರಿನಲ್ಲಿ ಲೆಕ್ಕವಿಲ್ಲದಷ್ಟು ಐಟಿ ಕಂಪನಿಗಳು ಕಾರ್ಯನಿರತವಾಗಿವೆ. ಲಕ್ಷಾಂತರ ಜನರಿಗೆ ಇದರಿಂದ ಉದ್ಯೋಗ ಸಿಕ್ಕಿದೆ. ಬೆಂಗಳೂರಿನ ಎಲೆಕ್ಟ್ರಾನಿಕ್​ ಸಿಟಿ ಭಾಗದಲ್ಲೂ ಅನೇಕ ಕಂಪನಿಗಳು ಕಾರ್ಯ ನಿರ್ವಹಿಸುತ್ತಿವೆ. ಇದೊಂದು ಪ್ರತಿಷ್ಠಿತ ಏರಿಯಾ. ಇಲ್ಲಿ ಕೆಲಸ ಮಾಡುವ ಐಟಿ ಉದ್ಯೋಗಿಗಳ ಕಥೆಯನ್ನೇ ಇಟ್ಟುಕೊಂಡು ‘ಎಲೆಕ್ಟ್ರಾನಿಕ್​ ಸಿಟಿ’ ಸಿನಿಮಾ ಮಾಡಲಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್​ ಬಿಡುಗಡೆ ಆಯಿತು. ಶಿಕ್ಷಣ ತಜ್ಞ ಕೃಷ್ಣ, ಕೆಪಿಸಿಸಿ ಜನರಲ್ ಸೆಕ್ರೆಟರಿ ಶಿವಣ್ಣ, ನಿರ್ದೇಶಕ ಲಿಂಗದೇವರು ಅವರು ಮುಖ್ಯ ಅತಿಥಿಗಳಾಗಿ ಬಂದು ಟ್ರೇಲರ್ ರಿಲೀಸ್​ ಮಾಡಿ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ‘ಫಸ್ಟ್ ನೈಟ್ ವಿತ್ ದೆವ್ವ’ ಸಿನಿಮಾಗೆ ಪ್ರಥಮ್​ ಹೀರೋ; ಬೆಂಗಳೂರಿನಲ್ಲಿ ಶುರುವಾಯ್ತು ಶೂಟಿಂಗ್​

‘ಎಲೆಕ್ಟ್ರಾನಿಕ್ ಸಿಟಿ’ ಸಿನಿಮಾವನ್ನು ಆರ್. ಚಿಕ್ಕಣ್ಣ ಅವರು ನಿರ್ಮಿಸಿ, ನಿರ್ದೇಶಿಸಿದ್ದಾರೆ. ‘ನಾನು 16 ವರ್ಷಗಳಿಂದ ಐಟಿ ಕ್ಷೇತ್ರದಲ್ಲಿದ್ದೇನೆ‌. ಈ ಕ್ಷೇತ್ರದ ಉದ್ಯೋಗಿಗಳ ಜೀವನದ ಬಗ್ಗೆ ಸಿನಿಮಾ ಮಾಡುವ ಆಸೆ ಉಂಟಾಯಿತು‌. 5 ವರ್ಷದ ಹಿಂದೆ ಈ ಕಥೆ ಬರೆದಕೊಂಡೆ. ಚಿತ್ರರಂಗದ ಹಲವರ ಬಳಿ ಈ ಕಥೆಯ ಕುರಿತು ಚರ್ಚಿಸಿದೆ. 2021ರಲ್ಲಿ ಶೂಟಿಂಗ್​ ಆರಂಭ ಮಾಡಿದೆ‌’ ಎಂದು ಚಿಕ್ಕಣ್ಣ ಹೇಳಿದ್ದಾರೆ,

ಇದನ್ನೂ ಓದಿ: ಅಭಿಷೇಕ್​ ಅಂಬರೀಷ್​ ನಟನೆಯ ‘ಬ್ಯಾಡ್​ ಮ್ಯಾನರ್ಸ್​’ ಸಿನಿಮಾ ನೋಡಿ 5ಕ್ಕೆ 5 ಸ್ಟಾರ್ ನೀಡಿದ ದರ್ಶನ್​

‘2022ರಲ್ಲಿ ಸಿನಿಮಾ ಸಿದ್ಧವಾಯಿತು. ಇಲ್ಲಿಯವರೆಗೆ 42ಕ್ಕೂ ಹೆಚ್ಚು ಚಿತ್ರೋತ್ಸವಗಳಲ್ಲಿ ಆಯ್ಕೆ ಆಗಿದೆ. 30ಕ್ಕೂ ಅಧಿಕ ಪ್ರಶಸ್ತಿ ಪಡೆದುಕೊಂಡಿದೆ’ ಎಂದು ‘ಎಲೆಕ್ಟ್ರಾನಿಕ್​ ಸಿಟಿ’ ಚಿತ್ರತಂಡದವರು ಹೇಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಆರ್ಯನ್ ಶೆಟ್ಟಿ ಅವರು ಹೀರೋ ಆಗಿ ನಟಿಸಿದ್ದಾರೆ. ‘ಈ ಸಿನಿಮಾದಲ್ಲಿ ನಾನು ಐಟಿ ಉದ್ಯೋಗಿಯ ಪಾತ್ರ ಮಾಡಿದ್ದೇನೆ. ಚಿಕ್ಕಣ್ಣ ಅವರ ಡೈರೆಕ್ಷನ್​ನಲ್ಲಿ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಈ ಚಿತ್ರದಿಂದ ನನಗೆ ‘ಘೋಸ್ಟ್’ ಸಿನಿಮಾದಲ್ಲಿ ಅಭಿನಯಿಸುವ ಚಾನ್ಸ್​ ಸಿಕ್ಕಿತು’ ಎಂದು ಆರ್ಯನ್ ಶೆಟ್ಟಿ ಹೇಳಿದ್ದಾರೆ. ದಿಯಾ ಆಶ್ಲೇಶಾ, ರಕ್ಷಿತಾ ಕೆರೆಮನೆ, ರಶ್ಮಿ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸೌಂದರ್ ರಾಜ್ ಸಂಕಲನ ಹಾಗೂ ಹಂಪಿ ಸುಂದರ್ ಕಲಾ ನಿರ್ದೇಶನ ಮಾಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.