‘ಕಾಂತಾರ’, ‘ಟಾಕ್ಸಿಕ್’ ಚಿತ್ರಗಳಿಗೆ ಅಷ್ಟಾಗಿ ಆಗಲ್ಲ ಟಿಕೆಟ್ ಪ್ರೈಸ್ ಕಟ್ ಎಫೆಕ್ಟ್?

ಕರ್ನಾಟಕದಲ್ಲಿ ಏಕರೂಪ ಟಿಕೆಟ್ ದರ ಜಾರಿಯಿಂದ ಎಲ್ಲಾ ಚಿತ್ರಮಂದಿರಗಳಲ್ಲಿ ಗರಿಷ್ಠ 236 ರೂಪಾಯಿ ಟಿಕೆಟ್ ದರ ನಿಗದಿಯಾಗಿದೆ. ಇದರಿಂದ "ಕಾಂತಾರ" ಮತ್ತು "ಟಾಕ್ಸಿಕ್" ಚಿತ್ರಗಳ ಗಳಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಚರ್ಚೆ ನಡೆಯುತ್ತಿದೆ. ಮಲ್ಟಿಪ್ಲೆಕ್ಸ್‌ಗಳಲ್ಲಿನ ವಿಭಿನ್ನ ಆಸನ ವರ್ಗಗಳ ಬೆಲೆಗಳಲ್ಲಿ ಏಕರೂಪತೆ ಉಂಟಾಗಿದ್ದು, ವಾರದ ದಿನಗಳಲ್ಲಿ ಟಿಕೆಟ್ ದರ ಹೆಚ್ಚಳವಾಗಿದೆ.

‘ಕಾಂತಾರ’, ‘ಟಾಕ್ಸಿಕ್’ ಚಿತ್ರಗಳಿಗೆ ಅಷ್ಟಾಗಿ ಆಗಲ್ಲ ಟಿಕೆಟ್ ಪ್ರೈಸ್ ಕಟ್ ಎಫೆಕ್ಟ್?
ಕಾಂತಾರ-ಟಾಕ್ಸಿಕ್

Updated on: Sep 13, 2025 | 11:43 AM

ಕರ್ನಾಟಕದಲ್ಲಿ ಏಕರೂಪ ಟಿಕೆಟ್ ಬೆಲೆ (Ticket Price) ಜಾರಿಗೆ ಬಂದಿದೆ. ಇದರ ಅನ್ವಯ ಎಲ್ಲಾ ಏಕ ಪರದೆ ಚಿತ್ರಮಂದಿರ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಟಿಕೆಟ್ ಬೆಲೆ 236 ರೂಪಾಯಿ (200 ರೂಪಾಯಿ ಟಿಕೆಟ್ ದರ +36 ರೂಪಾಯಿ ತೆರಿಗೆ) ದಾಟುವಂತಿಲ್ಲ. ಇದರ ಎಫೆಕ್ಟ್ ‘ಕಾಂತಾರ: ಚಾಪ್ಟರ್ 1’ ಹಾಗೂ ‘ಟಾಕ್ಸಿಕ್’ ಸಿನಿಮಾಗಳ ಮೇಲೆ ಆಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ವಿಚಾರದಲ್ಲಿ ವಿವಿಧ ಥಿಯರಿಗಳು ಹುಟ್ಟಿಕೊಂಡಿವೆ.

ಸಾಮಾನ್ಯವಾಗಿ ದೊಡ್ಡ ಬಜೆಟ್ ಸಿನಿಮಾಗಳು ರಿಲೀಸ್ ಆದ ಮೂರು ದಿನ ಹೆಚ್ಚಿನ ಟಿಕೆಟ್ ದರ ನಿಗದಿ ಮಾಡಲಾಗುತ್ತಿತ್ತು. ಆದರೆ, ವಾರ ದಿನಗಳಲ್ಲಿ ಈ ಬೆಲೆಯನ್ನು ಕಡಿಮೆ ಮಾಡಲಾಗುತ್ತದೆ. ಹೀಗಾಗಿ, ‘ಕಾಂತಾರ: ಚಾಪ್ಟರ್ 1’ ಹಾಗೂ ‘ಟಾಕ್ಸಿಕ್’ ಸಿನಿಮಾಗಳಂತಹ ಚಿತ್ರಗಳ ಮೇಲೆ ಇದರ ಪ್ರಭಾವ ಕೊಂಚ ಮಟ್ಟಿಗೆ ಆಗಿಯೇ ಆಗುತ್ತದೆ. ಆದರೆ, ಈ ಸಿನಿಮಾಗಳು ಕೇವಲ ಕರ್ನಾಟಕ ಮಾತ್ರವಲ್ಲದೆ, ಪರ ರಾಜ್ಯ, ದೇಶಗಳಲ್ಲೂ ರಿಲೀಸ್ ಆಗುತ್ತಿವೆ. ಹೀಗಾಗಿ, ಒಟ್ಟಾರೆ ಗಳಿಕೆ ನೋಡಿದಾಗ ಈ ವ್ಯಾತ್ಯಾಸ ಅಷ್ಟಾಗಿ ಕಾಣದೆ ಇರಬಹುದು.

ಇನ್ನು ಮಲ್ಟಿಪ್ಲೆಕ್ಸ್​ಗಳಲ್ಲಿ ಮೂರು ಹಂತದಲ್ಲಿ ಆಸನ ವ್ಯವಸ್ಥೆ ಇರುತ್ತವೆ. ಕ್ಲಾಸಿಕ್, ಪ್ರೈಮ್ ಹಾಗೂ ರಿಕ್ಲೈನರ್. ಉದಾಹರಣೆಗೆ ಹೇಳುವುದಾದರೆ, ಸಾಮಾನ್ಯ ದಿನಗಳಲ್ಲಿ ಕ್ಲಾಸಿಕ್​ಗೆ 190 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದರೆ, ಪ್ರೈಮ್​ಗೆ 220 ರೂಪಾಯಿ ನಿಗದಿ ಮಾಡಲಾಗುತ್ತಿತ್ತು ಮತ್ತು ರಿಕ್ಲೈನರ್​ಗಳಿಗೆ 400-500 ರೂಪಾಯಿ ಚಾರ್ಜ್ ಮಾಡಲಾಗುತ್ತಿತ್ತು. ಆದರೆ, ಈಗ ಆರಂಭದಿಂದ ಕೊನೆಯವರೆಗೆ ಎಲ್ಲಾ ಸೀಟ್​ಗಳಿಗೆ 236 ರೂಪಾಯಿ ಟಿಕೆಟ್ ದರ ನಿಗದಿ ಮಾಡಲಾಗಿದೆ. ಇದರಿಂದ ಕ್ಲಾಸಿಕ್ ಆಸನದಲ್ಲಿ ಕುಳಿತು ನೋಡುವವರು ಹೆಚ್ಚಿನ ಹಣ ಪಾವತಿ ಮಾಡಬೇಕಾಗಿ ಬರುತ್ತಿದೆ.

ಇದನ್ನೂ ಓದಿ
ಆ ಒಂದು ಶಬ್ದ ಬಳಕೆ ಮಾಡಿದ್ದಕ್ಕೆ ಆಕ್ರೋಶ; ಕಪಿಲ್ ಶೋ ನಿಲ್ಲಿಸೋ ಎಚ್ಚರಿಕೆ
‘ನೀವು ಊಹಿಸಿದಂತೆ ಕಥೆ ನಡೆಯಲ್ಲ’; ‘ಕರ್ಣ’ ಬಗ್ಗೆ ಕಿರಣ್ ರಾಜ್ ಹಿಂಟ್
ಜೀ ಕನ್ನಡ ವೇದಿಕೆ ಮೇಲೆ ಅನುಶ್ರೀ ಮಡಿಲು ತುಂಬಿದ ತಾರಾ; ಮಗಳಂತೆ ಭಾವುಕ
‘ತಾಳ್ಮೆಯಿಂದ ಕಾದಿದ್ದಕ್ಕೆ ಅರ್ಥಪೂರ್ಣವಾದ ತಾಳಿ ಬಿದ್ದಿದೆ’; ಅನುಶ್ರೀ

ಇದನ್ನೂ ಓದಿ: ಶುಕ್ರವಾರವೇ ಸಿನಿ ಪ್ರಿಯರಿಗೆ ಸಿಹಿ ಸುದ್ದಿ; 200 ರೂ. ಟಿಕೆಟ್ ದರ ಜಾರಿ; ಷರತ್ತುಗಳೇನು?

ವಾರದ ದಿನಗಳಲ್ಲಿ ಮಲ್ಟಿಪ್ಲೆಕ್ಸ್​ನ ಅನೇಕ ಕಡೆಗಳಲ್ಲಿ 220, 200 ರೂಪಾಯಿ ಟಿಕೆಟ್​ಗಳನ್ನು ಇಡಲಾಗುತ್ತಿತ್ತು. ಆದರೆ, ಈಗ ಆ ಬೆಲೆ 236ಕ್ಕೆ ನಿಗದಿ ಆಗಿದೆ. ಹೀಗಾಗಿ, ವಾರದ ದಿನಗಳಲ್ಲಿ ಸಿನಿಮಾ ನೋಡಲು ಪ್ಲ್ಯಾನ್ ಮಾಡಿದವರಿಗೆ ದುಬಾರಿ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.